ಪ್ಯಾನ್‌ ಇಂಡಿಯಾ ಹೀರೋ ಯಶ್‌ ಮತ್ತು ನಟಿ ರಾಧಿಕಾ ಪಂಡಿತ್‌ ತಾರಾದಂಪತಿ ಇಂದು ಐದನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಇಬ್ಬರೂ ತಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ಗಳಲ್ಲಿ ಫೋಟೊಗಳನ್ನು ಹಾಕಿಕೊಂಡು ಪರಸ್ಪರರಿಗೆ ಶುಭ ಕೋರಿದ್ದಾರೆ.

ಇಂದಿಗೆ ಸರಿಯಾಗಿ ಐದು ವರ್ಷಗಳ ಹಿಂದೆ 2016ರ ಡಿಸೆಂಬರ್‌ 9ರಂದು ಯಶ್‌ ಮತ್ತು ರಾಧಿಕಾ ಪಂಡಿತ್‌ ವಿವಾಹವಾಗಿದ್ದರು. ಬಹು ವರ್ಷಗಳ ಸ್ನೇಹ, ಪ್ರೀತಿಯ ನಂತರ ಇಬ್ಬರೂ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಅವರ ದಾಂಪತ್ಯಕ್ಕೆ ಇಬ್ಬರು ಮಕ್ಕಳಿದ್ದಾರೆ. ಇಂದು ವಿವಾಹ ವಾರ್ಷಿಕೋತ್ಸವಂದು ನಟಿ ರಾಧಿಕಾ ಅವರು ಯಶ್‌ ಜೊತೆಗಿನ ಸುಂದರ ಫೋಟೊವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿ, “ಪ್ರೀತಿ ಮತ್ತು ಜೀವನದಲ್ಲಿ ಖುಷಿಯನ್ನು ತುಂಬಿ ಪ್ರೇರಣೆಯಾಗಿರುವ ಸಂಗಾತಿ ಸಿಗುವುದು ಅದೃಷ್ಟವೇ ಸರಿ. ನಮಗಾಗಿ ತಮ್ಮ ಸಮಯ ನೀಡಿ ಉತ್ಸಾಹದಿಂದಿರುವಂತೆ ನೋಡಿಕೊಳ್ಳುವ ಅವರ ಉಪಸ್ಥಿತಿ ಎಂದಿಗೂ ಆತ್ಮೀಯವಾಗಿರುತ್ತದೆ” ಏಂದು ಬರೆದಿದ್ದಾರೆ. ಇನ್ನು ಯಶ್‌ ಕೂಡ ರಾಧಿಕಾ ಜೊತೆಗಿನ ಒಂದು ಹಳೆಯ ಫೋಟೊ ಶೇರ್‌ ಮಾಡಿ, “ಅವರು ಜಗತ್ತು ಸುಂದರ ಎಂದು ಹೇಳುತ್ತಾರೆ. ನೀನು ನನ್ನ ಪಕ್ಕದಲ್ಲಿದ್ದಾಗ ಜಗತ್ತು ನಿಜಕ್ಕೂ ಸುಂದರ ಎಂದು ನಾನು ನಂಬಿದ್ದೇನೆ. ಈ ಜಗತ್ತು ಸುಂದರವಾಗಿ ಕಾಣಿಸುವುದಕ್ಕೆ ಕಾರಣವಾಗಿರುವ ನಿನಗೆ ಧನ್ಯವಾದ” ಎಂದಿದ್ದಾರೆ. ತಾರಾ ದಂಪತಿಗೆ ಸ್ಯಾಂಡಲ್‌ವುಡ್‌ನ ಅವರ ಆಪ್ತರು, ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ನಟ ಯಶ್‌ ಮತ್ತು ನಟಿ ರಾಧಿಕಾ ಪಂಡಿತ್‌ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದವರು. ಕಿರುತೆರೆ ಮೂಲಕ ಕ್ಯಾಮೆರಾ ಎದುರಿಸಿದ ಅವರು ಮುಂದೆ ಬೆಳ್ಳಿತೆರೆ ಮೇಲೆ ಪ್ರೇಮಿಗಳಾಗಿ ಕಾಣಿಸಿಕೊಂಡರು. ಇಬ್ಬರ ಮಧ್ಯೆ ಪ್ರೀತಿ ಇದೆ ಎನ್ನುವ ವಿಷಯವೇ ಬಹಳಷ್ಟು ವರ್ಷಗಳ ಕಾಲ ಗೋಪ್ಯವಾಗಿತ್ತು. ಒನ್‌ ಪೈನ್‌ ಡೇ ಅವರು ತಾವು ಪ್ರೇಮಿಗಳೆಂದು ಘೋಷಿಸಿ ವೈವಾಹಿಕ ಬದುಕಿಗೆ ಪದಾರ್ಪಣೆ ಮಾಡಿದರು. ಮದುವೆ ನಂತರ ರಾಧಿಕಾ ಅಭಿನಯದಿಂದ ಬ್ರೇಕ್‌ ಪಡೆದಿದ್ದಾರೆ. ವಿವಾಹದ ನಂತರ ತೆರೆಕಂಡ ಅವರ ಏಕೈಕ ಸಿನಿಮಾ ʼಆದಿ ಲಕ್ಷ್ಮೀ ಪುರಾಣʼ. ಇಬ್ಬರು ಮಕ್ಕಳ ಆರೈಕೆಯಲ್ಲಿ ತೊಡಗಿಸಿಕೊಂಡಿರುವ ರಾಧಿಕಾ ಮುಂದಿನ ವರ್ಷ ತೆರೆಗೆ ಮರಳುವ ಸೂಚನೆ ಸಿಕ್ಕಿದೆ. ಇನ್ನು ನಟ ಯಶ್‌ ʼಕೆಜಿಎಫ್‌ʼ ಸಿನಿಮಾ ಮೂಲಕ ಪ್ಯಾನ್‌ ಇಂಡಿಯಾ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಕೆಲವೇ ದಿನಗಳಲ್ಲಿ ಅವರ ʼಕೆಜಿಎಫ್‌ʼ ಚಾಪ್ಟರ್‌ 2 ಸಿನಿಮಾ ಬಿಡುಗಡೆಯಾಗಲಿದೆ.

Previous articleಕಿರಿಮಗನ ಫೋಟೊ ಹಂಚಿಕೊಂಡ ಕರಿನಾ; ಹಿತೈಷಿಗಳು, ಅಭಿಮಾನಿಗಳ ಹಾರೈಕೆ
Next article“ದೃಶ್ಯಂ ಮಲಯಾಳಂ ಸಿನಿಮಾ ನೋಡಿ ಮೆಚ್ಚಿದ್ದ ಪಾತ್ರ ಕನ್ನಡ ಅವತರಣಿಕೆಯಲ್ಲಿ ನನಗೆ ಸಿಕ್ಕಿತು!”

LEAVE A REPLY

Connect with

Please enter your comment!
Please enter your name here