ಶೀನಾ ಬೋರಾ ಹತ್ಯೆ ಪ್ರಕರಣ ಆಧರಿಸಿ ತಯಾರಾಗಿರುವ ‘ದಿ ಇಂದ್ರಾಣಿ ಮುಖರ್ಜಿ ಸ್ಟೋರಿ: ಬರೀಡ್ ಟ್ರುತ್’ ಹಿಂದಿ ಸರಣಿ ಘೋಷಣೆಯಾಗಿದೆ. Netflix ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಈ ಕುರಿತಾಗಿ ಮಾಹಿತಿ ಹಂಚಿಕೊಂಡಿದೆ. ಉರಾಜ್ ಬೆಹ್ಲ್ ಮತ್ತು ಶಾನಾ ಲೆವಿ ಸರಣಿ ನಿರ್ದೇಶಿಸುತ್ತಿದ್ದಾರೆ.
Netflix ‘ದಿ ಇಂದ್ರಾಣಿ ಮುಖರ್ಜಿ ಸ್ಟೋರಿ: ಬರೀಡ್ ಟ್ರುತ್’ ಹಿಂದಿ ಡಾಕ್ಯು-ಸರಣಿ ಪ್ರಕಟಿಸಿದೆ. ಈ ಸರಣಿಯನ್ನು ಉರಾಜ್ ಬೆಹ್ಲ್ ಮತ್ತು ಶಾನಾ ಲೆವಿ ನಿರ್ದೇಶಿಸುತ್ತಿದ್ದಾರೆ. ಈ ಕುರಿತು Netflix ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ಇಡೀ ರಾಷ್ಟ್ರವನ್ನು ಬೆಚ್ಚಿಬೀಳಿಸಿದ ಸೂಕ್ಷ್ಮ ವಿಷಯಗಳನ್ನು ಒಳಗೊಂಡ ಹಗರಣ, ಒಂದು ಕುಟುಂಬದ ಕರಾಳ ರಹಸ್ಯಗಳು ಇದರಲ್ಲಿವೆ. ‘ಇಂದ್ರಾಣಿ ಮುಖರ್ಜಿ ಸ್ಟೋರಿ: ಬರೀಡ್ ಟ್ರುತ್’ ಫೆಬ್ರವರಿ 23ರಿಂದ Netflixನಲ್ಲಿ ಸ್ಟ್ರೀಮ್ ಆಗಲಿದೆ’ ಎಂದು ಕ್ಯಾಪ್ಶನ್ ನೀಡಿದೆ.
https://twitter.com/NetflixIndia/status/1751840094795788296?ref_src=twsrc%5Etfw%7Ctwcamp%5Etweetembed%7Ctwterm%5E1751840094795788296%7Ctwgr%5E496f6d123831558cd5bea2a25ad93c9333ff8786%7Ctwcon%5Es1_c10&ref_url=https%3A%2F%2Fpublish.twitter.com%2F%3Furl%3Dhttps%3A%2F%2Ftwitter.com%2FNetflixIndia%2Fstatus%2F1751840094795788296
ಈ ಸರಣಿಯು ಕುಖ್ಯಾತ ಶೀನಾ ಬೋರಾ ಹತ್ಯೆ ಪ್ರಕರಣದ ಕುರಿತು ಹೇಳಲಿದೆ. ಇಂದ್ರಾಣಿ ಮುಖರ್ಜಿ ಅವರು ಮಾಜಿ ಮಾಧ್ಯಮ ಕಾರ್ಯನಿರ್ವಾಹಕರು ಮತ್ತು INX ಮಾಧ್ಯಮದ (ಈಗಿನ 9X Media) ಸಹ-ಸಂಸ್ಥಾಪಕಿಯಾಗಿದ್ದರು. 2015ರಲ್ಲಿ ತನ್ನ ಮಗಳು ಶೀನಾ ಬೋರಾಳನ್ನು ಅಪಹರಿಸಿ ಕೊಲೆ ಮಾಡಿದ ಆರೋಪದಲ್ಲಿ ಆಕೆಯನ್ನು ಬಂಧಿಸಲಾಯಿತು. ಆಕೆಯ ಮಾಜಿ ಪತಿ ಬ್ಯಾರನ್ ಪೀಟರ್ ಮುಖರ್ಜಿ ಅವರು ಸಹ ಈ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಸರಣಿಯಲ್ಲಿ ಇಂದ್ರಾಣಿ ಮುಖರ್ಜಿ ಅವರ ಮಕ್ಕಳಾದ ವಿಧಿ ಮುಖರ್ಜಿ ಮತ್ತು ಮಿಖಾಯಿಲ್ ಬೋರಾ ಹಾಗೂ ಹಿರಿಯ ಪತ್ರಕರ್ತರು ಮತ್ತು ವಕೀಲರುಗಳಿಂದ ಹೇಳಿಕೆಗಳನ್ನು ಪಡೆಯಲಾಗಿದೆ ಎನ್ನಲಾಗಿದೆ. ಮೊಟ್ಟ ಮೊದಲ ಬಾರಿಗೆ ಇಂದ್ರಾಣಿ, ಪೀಟರ್ ಮತ್ತು ರಾಹುಲ್ ಮುಖರ್ಜಿ ನಡುವಿನ ಧ್ವನಿ ಮುದ್ರಣ ಮತ್ತು ಅವರ ಕುಟುಂಬದ ಕಾಣದ ಚಿತ್ರಗಳನ್ನು ಈ ಸರಣಿ ಹೊಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.