ಆನಂದರಾಜ್‌ ನಿರ್ದೇಶನದ ‘Chef ಚಿದಂಬರ’ ಸಿನಿಮಾದಲ್ಲಿನ ನಟಿ ನಿಧಿ ಸುಬ್ಬಯ್ಯ ಕ್ಯಾರಕ್ಟರ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಅನಿರುದ್ಧ ಜತ್ಕರ್‌ ನಟನೆಯ ಡಾರ್ಕ್‌ ಕಾಮಿಡಿ ಜಾನರ್‌ ಚಿತ್ರವಿದು.

ಅನಿರುದ್ಧ್ ಜತ್ಕರ್ ನಟನೆಯ ‘Chef ಚಿದಂಬರ’ ಸಿನಿಮಾದಲ್ಲಿನ ನಟಿ ನಿಧಿ ಸುಬ್ಬಯ್ಯ ಅವರ ಪಾತ್ರ ಪರಿಚಯದ ಪೋಸ್ಟರ್ ಬಿಡುಗಡೆಯಾಗಿದೆ. ನಿಧಿ ‘ಮೋನ’ ಎಂಬ ಪಾತ್ರ ನಿರ್ವಹಿಸುತ್ತಿದ್ದು, ಕೈಯಲ್ಲಿ ಬೇಡಿ ಹಿಡಿದಿದ್ದಾರೆ. ಚಿತ್ರದಲ್ಲಿ ಅವರ ಪಾತ್ರ ಏನಿರಬಹುದು ಎನ್ನುವ ಕುತೂಹಲ ಮೂಡಿಸುತ್ತದೆ ಪೋಸ್ಟರ್‌. ‘ರಾಘು’ ಚಿತ್ರದ ಖ್ಯಾತಿಯ ಎಂ ಆನಂದರಾಜ್ ಸಿನಿಮಾ ನಿರ್ದೇಶಿಸಿದ್ದಾರೆ. ಡಾರ್ಕ್ ಕಾಮಿಡಿ ಜಾನರ್‌ನ ಈ ಚಿತ್ರದಲ್ಲಿ ಅನಿರುದ್ಧ್ ಶೆಫ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ‘ಬಹಳ ದಿನಗಳ ನಂತರ ನಿಧಿ ಸುಬ್ಬಯ್ಯ ನಮ್ಮ ಚಿತ್ರದಲ್ಲಿ ನಟಿಸಿದ್ದಾರೆ. ನಿಧಿ ಅವರ ಪೋಸ್ಟರ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕುತೂಹಲ ಮೂಡಿಸಿರುವ ನಿಧಿ ಅವರ ಪಾತ್ರ ಏನು ಎಂಬುದನ್ನು ಚಿತ್ರದಲ್ಲಿ ನೋಡಬೇಕು’ ಎಂದಿದ್ದಾರೆ ನಿರ್ದೇಶಕರು.

ರೂಪ ಡಿ ಎನ್ ನಿರ್ಮಿಸಿರುವ ಈ ಸಿನಿಮಾಗೆ ಗಣೇಶ್ ಪರಶುರಾಮ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಉದಯಲೀಲ ಛಾಯಾಗ್ರಹಣ, ರಿತ್ವಿಕ್ ಮುರಳಿಧರ್ ಸಂಗೀತ ಸಂಯೋಜನೆ, ವಿಜೇತ್ ಚಂದ್ರ ಸಂಕಲನ ಚಿತ್ರಕ್ಕಿದೆ. ಅನಿರುದ್ಧ್ ಅವರಿಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ ‘ಲವ್ ಮಾಕ್ಟೇಲ್ 2’ ಖ್ಯಾತಿಯ ರೆಚೆಲ್ ಡೇವಿಡ್‌ ಅಭಿನಯಿಸಿದ್ದಾರೆ. ಶರತ್ ಲೋಹಿತಾಶ್ವ, ಕೆ ಎಸ್ ಶ್ರೀಧರ್‌, ಶಿವಮಣಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.

LEAVE A REPLY

Connect with

Please enter your comment!
Please enter your name here