ಯೋಗರಾಜ ಭಟ್‌ ನಿರ್ದೇಶನದ ‘ಗರಡಿ’ ಸಿನಿಮಾದ ‘ಹೊಡಿರೆಲೆ ಹಲಗಿ’ ಲಿರಿಕಲ್‌ ವೀಡಿಯೋ ಸಾಂಗ್‌ ಮೊನ್ನೆ ಬಿಡುಗಡೆಯಾಗಿತ್ತು. ವಿ ಹರಿಕೃಷ್ಣ ಸಂಗೀತ ಸಂಯೋಜನೆಯ ಈ ಹಾಡಿಗೆ ನಟಿ ನಿಶ್ವಿಕಾ ನಾಯ್ಡು ಹೆಜ್ಜೆ ಹಾಕಿದ್ದಾರೆ. ಈ ಹಾಡನ್ನು ದೊಡ್ಡ ಸಂಖ್ಯೆಯಲ್ಲಿ ಜನರು ವೀಕ್ಷಿಸುತ್ತಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ದೇಸಿ ಕ್ರೀಡೆ ಕುಸ್ತಿ ಹಿನ್ನೆಲೆಯಲ್ಲಿ ಗುರು – ಶಿಷ್ಯ ಕತೆಯನ್ನು ಹೇಳಿರುವ ‘ಗರಡಿ’ ಸಿನಿಮಾ ಸುದ್ದಿಯಲ್ಲಿದೆ. ಯೋಗರಾಜ್‌ ಭಟ್‌ ನಿರ್ದೇಶನದ ಸಿನಿಮಾದ ಮೊದಲ ಹಾಡು ‘ಹೊಡಿರೆಲೆ ಹಲಗಿ’ ಮೊನ್ನೆ ಬಿಡುಗಡೆಯಾಗಿತ್ತು. ಈ ಲಿರಿಕಲ್‌ ಸಾಂಗ್‌ ಹಿಟ್‌ ಆಗಿದೆ ಎಂದು ಚಿತ್ರದ ನಿರ್ಮಾಪಕಿ ಸೃಷ್ಟಿ ಪಾಟೀಲ್‌, ನಿರ್ದೇಶಕ ಯೋಗರಾಜ್‌ ಭಟ್‌ ಹೇಳಿಕೊಂಡಿದ್ದಾರೆ. ಚಿತ್ರದ ಪ್ರೊಮೋಷನ್‌ಗೆ ಇದು ಶುಭ ಆರಂಭ ಎನ್ನುವುದು ಅವರ ಅಂಬೋಣ. ‘ರಿಲೀಸ್‌ ಆದ ಕೆಲವೇ ದಿನಗಳಲ್ಲಿ 1.6https://youtu.be/OQlE19bSspo ಮಿಲಿಯನ್‌ ಜನರು ಹಾಡು ವೀಕ್ಷಿಸಿದ್ದಾರೆ. ಇದೀಗ ಚಿತ್ರದ ಮುಂದಿನ ಹಾಡನ್ನು ಬಿಡುಗಡೆ ಮಾಡಲು ತಯಾರಿ ನಡೆಸಿದ್ದೇವೆ’ ಎಂದಿದ್ದಾರೆ ನಿರ್ಮಾಪಕಿ ಸೃಷ್ಟಿ ಪಾಟೀಲ್‌.

ನಿರ್ದೇಶಕ ಯೋಗರಾಜ್‌ ಭಟ್‌ ರಚಿಸಿರುವ ಈ ಹಾಡಿಗೆ ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಉತ್ತರ ಕರ್ನಾಟಕದ ಗಾಯಕಿ ಮೇಘನಾ ಹಳಿಯಾಳ ಹಾಡಿದ್ದು, ಈ ಹಾಡಿಗೆ ನಟಿ ನಿಶ್ವಿಕಾ ನಾಯ್ಡು ಸೆನ್ಸೇಷನಲ್‌ ಡ್ಯಾನ್ಸ್‌ ಇದೆ. ‘ಇದು ಉತ್ತರ ಕರ್ನಾಟಕ ಭಾಷೆಯ ಫ್ಲೇವರ್‌ ಹಾಡು. ಈ ಗೀತೆ ಹಾಡುವ ಗಾಯಕಿ ಅಲ್ಲಿನ ನೆಲದವರೇ ಆಗಬೇಕಿತ್ತು. ಮೇಘನಾ ಅವರು ಸೊಗಸಾಗಿ ಹಾಡಿದ್ದಾರೆ. ಉತ್ತರ ಕರ್ನಾಟಕದ ಸ್ಲ್ಯಾಂಗ್‌ ಪ್ರತೀ ಪದಗಳಲ್ಲೂ ಧ್ವನಿಸಿದೆ’ ಎನ್ನುತ್ತಾರೆ ನಿರ್ದೇಶಕ ಯೋಗರಾಜ್‌ ಭಟ್‌. ಕೌರವ ಪ್ರೊಡಕ್ಷನ್ಸ್‌ ನಿರ್ಮಾಣದ ‘ಗರಡಿ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಸೂರ್ಯ, ಸೋನಾಲ್‌ ಮಾಂತೆರೋ, ಬಿ ಸಿ ಪಾಟೀಲ್‌ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ನಟ ದರ್ಶನ್‌ ಅವರು ಅಭಿನಯಿಸಿದ್ದಾರೆ ಎನ್ನುವುದು ವಿಶೇಷ.

Previous articleಹೊಸತನವೇನೂ ಇಲ್ಲದ ಮದುವೆ ಕತೆ
Next article‘Social Currency’ Netflix ಶೋ | ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ ಸಾಕ್ಷಿ ಚೋಪ್ರಾ

LEAVE A REPLY

Connect with

Please enter your comment!
Please enter your name here