ವಿಕ್ರಮ್‌ ಅಭಿನಯದ ನೂತನ ತಮಿಳು ಸಿನಿಮಾದ ಘೋಷಣಾ ಟೀಸರ್‌ ಬಿಡುಗಡೆಯಾಗಿದೆ. ಇದು ಅವರ 62ನೇ ಸಿನಿಮಾ. ಎಸ್‌ ಯು ಅರುಣ್‌ ಕುಮಾರ್‌ ನಿರ್ದೇಶನದಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ ಜಿ ವಿ ಪ್ರಕಾಶ್‌ ಕುಮಾರ್‌ ಸಂಗೀತ ಸಂಯೋಜಿಸುತ್ತಿದ್ದಾರೆ.

ಚಿಯಾನ್‌ ವಿಕ್ರಮ್ ಅವರು ತಮ್ಮ 62ನೇ ಚಲನಚಿತ್ರವನ್ನು ಘೋಷಿಸಿದ್ದಾರೆ, ತಾತ್ಕಾಲಿಕವಾಗಿ ‘ಚಿಯಾನ್ 62’ ಶಿರ್ಷಿಕೆಯಿಡಲಾಗಿರುವ ಈ ತಮಿಳು ಚಲನಚಿತ್ರದ ಘೋಷಣಾ ವಿಡಿಯೋವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ನಿರ್ಮಾಪಕ ಎಸ್ ಯು ಅರುಣ್ ಕುಮಾರ್ ಚಿತ್ರ ನಿರ್ದೇಶಿಸಲಿದ್ದಾರೆ. ಈ ಸಿನಿಮಾ ಘೋಷಣೆಯ ವಿಡಿಯೊವೊಂದನ್ನು ಚಿತ್ರತಂಡ ಹಂಚಿಕೊಂಡಿದ್ದು, ತಿರುಟ್ಟಣಿಯ ಪೊಲೀಸ್ ಠಾಣೆಯಲ್ಲಿ ನಡೆದ ದೃಶ್ಯವನ್ನು ತೋರಿಸಿದೆ. ದೂರು ದಾಖಲಿಸಲು ಮಹಿಳೆಯೊಬ್ಬರು ಠಾಣೆಗೆ ನುಗ್ಗುತ್ತಿರುವುದನ್ನು ಕಂಡ ಕೆಲವೇ ಕ್ಷಣದಲ್ಲಿ ಇಬ್ಬರು ಗೂಂಡಾಗಳು ಆ ಸ್ಥಳದಲ್ಲಿ ಕಾಣಿಸುತ್ತಾರೆ. ತಕ್ಷಣ ಇವರೇ ಆರೋಪಿಗಳು ಎಂದು ಮಹಿಳೆ ಸೂಚಿಸಿದ ಇಬ್ಬರು ಪುರುಷರನ್ನು ಹೊರಗಿನಿಂದ ಬಂದ ವಿಕ್ರಮ್ ಥಳಿಸಿ ಠಾಣೆಯೊಳಗೆ ನೂಕುತ್ತಾನೆ. ಈ ಹಿಂದೆ ‘ಥಗ್ಸ್’ ಮತ್ತು ‘ಮುಂಬೈಕರ್’ ಚಿತ್ರಗಳನ್ನು ನಿರ್ಮಿಸಿರುವ ರಿಯಾ ಶಿಬು ಅವರ H R Pictures ಈ ಚಿತ್ರವನ್ನು ನಿರ್ಮಿಸಲಿದೆ. ಖ್ಯಾತ ಸಂಗೀತ ನಿರ್ದೇಶಕ ಜಿ ವಿ ಪ್ರಕಾಶ್ ಕುಮಾರ್ ಅವರು ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ. ಚಿಯಾನ್‌ ವಿಕ್ರಮ್‌ ನಟನೆಯ ಗೌತಮ್ ವಾಸುದೇವ್ ಮೆನನ್ ನಿರ್ದೇಶನದ ‘ಧ್ರುವ ನಚ್ಚತಿರಂ’ ಚಲನಚಿತ್ರ ಮತ್ತು ಪಾ ರಂಜಿತ್ ನಿರ್ದೇಶನದ ‘ತಂಗಲಾನ್‌’ ಸಿನಿಮಾಗಳು ಬಿಡುಗಡೆಯ ಹಂತದಲ್ಲಿವೆ.

LEAVE A REPLY

Connect with

Please enter your comment!
Please enter your name here