ಒಂದೇ ಸಲಕ್ಕೆ ಖಂಡಿತ ಈ ಸಿನಿಮಾ ಅರ್ಥವಾಗಲ್ಲ. ಏನನ್ನೂ ಓದದೆ, ಎಲ್ಲಿಯೂ ಈ ಸಿನಿಮಾ ಬಗ್ಗೆ ನೋಡದೆ ನೇರವಾಗಿ ಒಮ್ಮೆ ಸಿನಿಮಾ ನೋಡಿ. ಎರಡು ಗಂಟೆ ನಾವೇ ಆ ಸುಳಿಯೊಳಗೆ ಸಿಕ್ಕಿಬಿದ್ದ ಅನುಭವ ಸಿಗುತ್ತೆ – ‘ಚುರುಲಿ’ ಮಲಯಾಳಂ ಸಿನಿಮಾ Sony LIVನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಈ ಸಿನಿಮಾ ನೋಡಿ ಮುಗಿಸಿದ ಮೇಲೆ ಎರಡೇ ಅನ್ನಿಸಿಕೆ ಕೊಡಲು ಸಾಧ್ಯ. ಒಂದು, ಇಂಥ ಒಂದು ಡಬ್ಬಾ ಫಿಲಂ ನೋಡಿಲ್ಲಾ! ಇನ್ನೊಂದು, ಇದೊಂದು ಮಾಸ್ಟರ್ ಪೀಸ್ ಸಿನಿಮಾ! ಈ ಸಿನಿಮಾದ ಎಳೆ ಸಾಮಾನ್ಯದಲ್ಲಿ ತೀರಾ ಸಾಮಾನ್ಯದ್ದು. ಕೊಲೆ ಮತ್ತು ನಾನಾ ಅಪರಾಧಗಳಲ್ಲಿ ಭಾಗಿಯಾಗಿರುವ ಒಬ್ಬ ಒಂದು ಕಾಡಿನೊಳಗೆ ಇರುವ ಹಳ್ಳಿಯಂತಹ ಪ್ರದೇಶದಲ್ಲಿ ತಲೆಮರಿಸಿಕೊಂಡು ವಾಸಿಸುತ್ತಿದ್ದಾನೆ. ಅವನನ್ನು ಪತ್ತೆಹಚ್ಚಿ ಹಿಡಿದು ತರಲು ಆ ಕಾಡಿನೊಳಗೆ ಇಬ್ಬರು ಪೋಲೀಸರು ಸಾಮಾನ್ಯರಂತೆ ಪ್ರವೇಶ ಮಾಡುತ್ತಾರೆ. ಆ ದಟ್ಟ ಕಾಡಿದೊಳಗೆ ಆಮೇಲೆ ಏನೇನಾಯಿತು ಅನ್ನೋದೇ ಕಥೆ . ಇಷ್ಟೇ ಓದಿದ ಮೇಲೆ ನೀವು ಫುಲ್ ಸಿನಿಮಾ ನೋಡುವಾಗ ಇನ್ನೊಂದು ಐದು ನಿಮಿಷ ಇದೆ ಅನ್ನುವಾಗ ಸಿನಿಮಾ ನಿಲ್ಲಿಸಿ ಈಗ ನಾನು ಹೇಳುವ ಕೆಲವು ವಿಷಯಗಳು ಈ ಸಿನಿಮಾದಲ್ಲಿ ಇದೆ ಅಂತ ಹೇಳಿದ್ರೆ ನೀವ್ ನಂಬೋದೆ ಇಲ್ಲಾ!

ಒಂದು : Hallucinations

ಎರಡು : Aliens

ಮೂರು : Time Loop

ಇಲ್ಲಿವರೆಗೂ ಬಂದಿರುವ ಎಲ್ಲಾ ಟೈಮ್ ಲೂಪ್ ಫಿಲಂಗಳಲ್ಲೊಂದು ವಿಷ್ಯ ಇದ್ದೇ ಇರುತ್ತೆ. ಒಂದು ಘಟನೆ ನಡೆಯುತ್ತೆ, ಅದೇ ಮತ್ತೆ ಮತ್ತೆ ನಡೆಯುತ್ತಾ ಇರುತ್ತೆ. ಅದರಿಂದ ಆ ಪಾತ್ರ ಹೇಗೆ ಹೊರ ಬರುತ್ತೆ, ಅದನ್ನು ಇಲ್ಲಿ ತೋರಿಸಿದ ವಿಧ ಇದೆಯಲ್ಲಾ ಪದಗಳಿಗೆ ನಿಲುಕದು. ಅದನ್ನು ಜಸ್ಟ್ ಅನುಭವಿಸಬೇಕಷ್ಟೆ. ಎಲ್ಲೂ ಇದೊಂದು ಟೈಮ್ ಲೂಪ್ ಫಿಲಂ ಅಂತ ಅನಿಸುವುದಿಲ್ಲ. ಬಹುಶ ನಮ್ಮ ಜನರು ಇದರ ಬಗ್ಗೆ ಹೆಚ್ಚಾಗಿ ಬರೆಯದ ಕಾರಣ ಇದು ಇತ್ತೀಚಿಗೆ ಬಂದ ತಮಿಳಿನ ‘ಮಾನಾಡು’ ಥರದ ಕಮರ್ಷಿಯಲ್ ಫಿಲಂ ಅಲ್ಲ. ಅಷ್ಟಕ್ಕೂ ‘ಮಾನಾಡು’ ಥಿಯೇಟರ್‌ನಲ್ಲಿ ಬಿಡುಗಡೆ ಆಯ್ತು. ಅದನ್ನು ನೋಡಿಯೇ ಜನರು ಆಹಾ ಹೋ ಅಂದ್ರು ಇದು ನೇರವಾಗಿ OTTಯಲ್ಲಿ ಬಿಡುಗಡೆಯಾಯ್ತು. ಇದರ ಬಗ್ಗೆ ನಾ ಎಲ್ಲಿಯೂ ನೋಡಲೇ ಇಲ್ಲ. ಈ ಸಾಲುಗಳೇ ತಿಳಿಸುತ್ತೆ ಇದು ಸಾಮಾನ್ಯ ಪ್ರೇಕ್ಷಕನಿಗೆ ಅರ್ಥವಾಗದ ಮತ್ತು ಹಿಡಿಸಿದ ಮೇಕಿಂಗ್! ಆದರೆ ವಿಶ್ವ ದರ್ಜೆಯ ಸಿನಿಮಾ.

‘ಡಾರ್ಕ್’ನಂಥ ವೆಬ್ ಸೀರಿಸ್ ನೋಡಿರುವವರು ಮಿಸ್ ಮಾಡಲೇ ಬೇಡಿ. ಒಂದೇ ಸಲಕ್ಕೆ ಖಂಡಿತ ಈ ಫಿಲಂ ಅರ್ಥವಾಗಲ್ಲ. ಏನನ್ನೂ ಓದದೆ, ಎಲ್ಲಿಯೂ ಈ ಫಿಲಂ ಬಗ್ಗೆ ನೋಡದೆ ನೇರವಾಗಿ ಒಮ್ಮೆ ಸಿನಿಮಾ ನೋಡಿ. ಎರಡು ಗಂಟೆ ನಾವೇ ಆ ಸುಳಿಯೊಳಗೆ ಸಿಕ್ಕಿ ಬಿದ್ದ ಅನುಭವ ಸಿಗುತ್ತೆ. ಕ್ಯಾಮೆರಾ ವರ್ಕ್ ಒಂದು ದೃಶ್ಯಕಾವ್ಯ. ಹಿನ್ನೆಲೆ ಸಂಗೀತವೇ ಈ ಫಿಲಂನ ಮತ್ತೊಬ್ಬ ಹೀರೋ. ನನ್ನ ಮಟ್ಟಿಗೆ ಇದು ಅತ್ಯುತ್ತಮ ಸಿನಿಮಾ. ಕಥೆಯನ್ನು ಸಂಪೂರ್ಣ ನೋಡುಗರ ಮೇಲೆಯೇ ಬಿಟ್ಟಿದ್ದಾರೆ. ನಿಮಗೆ ಎಷ್ಟು ಅರ್ಥವಾಗುತ್ತೋ ಅಷ್ಟೇ ಸಿನಿಮಾ! ಒಂದು ಸೂಚನೆ ನೋಡುವಾಗ ಆ ಪಾತ್ರಗಳು ಮಾತಾಡೋದನ್ನು ಗಮನವಿಟ್ಟು ಕೇಳಿಸಿಕೊಳ್ಳಿ (ಸಬ್ ಟೈಟಲ್ ಓದಿಕೊಳ್ಳಿ). ಅಷ್ಟೇ ಸಾಕು ನಿಮಗೆ ಮೆಲ್ಲನೆ ಆ ಪದರ ಕಳಚಿಕೊಂಡು ಹೋಗುತ್ತೆ!

ಸಿನಿಮಾ : ಚುರುಲಿ | ನಿರ್ದೇಶನ : ಲಿಜೋ ಜೋಸ್‌ ಪೆಲ್ಲಿಸ್ಸೆರಿ | ಸಂಗೀತ : ಶ್ರೀರಾಜ್‌ ಸಾಜಿ | ತಾರಾಬಳಗ : ವಿನಯ್‌ ಫೋರಟ್‌, ಚೆಂಬನ್‌ ವಿನೋದ್‌ ಜೋಸ್‌, ಜೋಜು ಜಾರ್ಜ್‌, ಸೌಬಿನ್‌ ಶಾಹಿರ್‌

LEAVE A REPLY

Connect with

Please enter your comment!
Please enter your name here