ರವಿಚಂದ್ರನ್‌ ವಿಭಿನ್ನ ಪಾತ್ರದಲ್ಲಿ ನಟಿಸಿರುವ ‘ಕನ್ನಡಿಗ’ ಸಿನಿಮಾ ನಾಳೆಯಿಂದ ZEE5ನಲ್ಲಿ ಸ್ಟ್ರೀಮ್‌ ಆಗಲಿದೆ. ಚಿತ್ರದಲ್ಲಿ ‘ಸಂಕಮ್ಮಬ್ಬೆ’ ಪಾತ್ರ ನಿರ್ವಹಿಸಿರುವ ನಟಿ ಪಾವನ ಅವರ ಕುರಿತು ಚಿತ್ರದ ನಿರ್ದೇಶಕ ಬಿ.ಎಂ.ಗಿರಿರಾಜ್‌ ಮೆಚ್ಚುಗೆಯ ಮಾತುಗಳ್ನಾಡಿದ್ದಾರೆ.

ಗಿರಿರಾಜ್‌ ನಿರ್ದೇಶನದಲ್ಲಿ ರವಿಚಂದ್ರನ್‌ ಅವರು ವಿಶಿಷ್ಟ ಪಾತ್ರದಲ್ಲಿ ನಟಿಸಿರುವ ‘ಕನ್ನಡಿಗ’ ಸಿನಿಮಾ ನಾಳೆಯಿಂದ ZEE5ನಲ್ಲಿ ಸ್ಟ್ರೀಮ್‌ ಆಗಲಿದೆ. ಇದು 1850ರ ಅವಧಿಯ ಪೀರಿಯಡ್‌ ಡ್ರಾಮಾ. ಕನ್ನಡ ಸಂಸ್ಕೃತಿ, ಸಾಹಿತ್ಯದ ವಕ್ತಾರನಂತೆ ಕೆಲಸ ಮಾಡಿದ ಲಿಪಿಕಾರ ‘ಗುಣಭದ್ರ’ನ ಕತೆಯನ್ನು ಚಿತ್ರದಲ್ಲಿ ನಿರೂಪಿಸಲಾಗಿದೆ. ವಚನ, ದಾಸರ ಪದಗಳನ್ನು ಅಚ್ಚು ಹಾಕಿಸಿದ ಕಿಟಲ್‌ ಅವರ ಪ್ರಸ್ತಾಪವೂ ಇರುತ್ತದೆ. ಚಿತ್ರದಲ್ಲಿ ನಟಿ ಪಾವನ ಗುಣಭದ್ರನ ಪತ್ನಿ ‘ಸಂಕಮ್ಮಬ್ಬೆ’ ಪಾತ್ರ ನಿರ್ವಹಿಸಿದ್ದಾರೆ. ಪಾವನ ಕುರಿತು ನಿರ್ದೇಶಕ ಗಿರಿರಾಜ್‌ ಹೇಳುವುದು ಹೀಗೆ – “ಪಾವನ ನನಗೆ ‘ಅದ್ವೈತ’ ಚಿತ್ರದಿಂದ ಪರಿಚಯ. ಕಲೆ ಬಗ್ಗೆ ಅಪಾರ ಹಸಿವಿರುವ, ತುಂಬ ಶ್ರಮಿಸುವ, ಯಾವುದೇ ಪಾತ್ರ ಕೊಟ್ಟರೂ ನಿಭಾಯಿಬಲ್ಲ ಸ್ನಿಗ್ಧ ಸುಂದರ ಕಲಾವಿದೆ. ‘ಜಟ್ಟ’ದಲ್ಲಿ, ಒಂದೇ‌ ಶಾಟ್‌ನಲ್ಲಿ ಬೆಳ್ಳಿಯ ಮನದಾಳದ ತಳಮಳವನ್ನು ಅವಳು ಬಿಚ್ಚಿಟ್ಟಿದ ರೀತಿಯ ಬಗ್ಗೆ ಇವತ್ತಿಗೂ ಎಲ್ಲರೂ ಬೆರಗಾಗೇ ಮಾತಾಡ್ತಾರೆ”

ಬಿ.ಎಂ.ಗಿರಿರಾಜ್‌, ಪಾವನ

“‘ಕನ್ನಡಿಗ’ ಚಿತ್ರದ ಮುಹೂರ್ತದ ಹಿಂದಿನ ದಿನದ ತನಕ ನಮ್ಮ ಚಿತ್ರದ ನಾಯಕಿ, ಸಂಕಮ್ಮಬ್ಬೆ, ಯಾರು ಅನ್ನುವುದರ ಬಗ್ಗೆ ತುಂಬ ಗೊಂದಲವಿತ್ತು. ಭಾಷೆ ಕಲಿತು, ಪಾತ್ರ ಪರಕಾಯ ಮಾಡಿ, ರವಿ ಸರ್ ಎದುರು ನಿರ್ಭಿಡೆಯಾಗಿ ನಟಿಸುವುದು ತುಂಬ ಕಷ್ಟದ ಕೆಲಸವೇ ಆಗಿತ್ತು. ನನಗೆ ಮೊದಲಿಂದಲೂ ಪಾವನಾರ ಮೇಲೆ ನಂಬಿಕೆ ಇದ್ದರೂ ಹಲವಾರು permutations combinations ದಾಟಿ ನಾಯಕಿಯನ್ನು ಆಯ್ಕೆ ಮಾಡಬೇಕಿತ್ತು. ಮುಹೂರ್ತದ ದಿನದ ನಂತರ ನಮ್ಮದು ಶೂಟಿಂಗ್ ಪ್ರಾರಂಭವಾದರೂ ಅವರ ಶೂಟಿಂಗ್ ಡೇಟ್ಸ್ ಇನ್ನೂ ಮೂರು ನಾಲ್ಕು ದಿನಗಳಿತ್ತು. ಉಳಿದ ಎಲ್ಲ ನಟ ನಟಿಯರ ಜೊತೆ ವಾರದ ನಟನಾ ತಾಲೀಮು ನಡೆದಿತ್ತಾದರೂ ಪಾವನರೊಂದಿಗೆ ಅದು ಆಗಿರಲಿಲ್ಲ. ಶೂಟಿಂಗ್ ಮುಗಿಸಿ ಅವರೊಂದಿಗೆ ರೀಡಿಂಗ್ ತಾಲೀಮು ಮಾಡಬೇಕಿತ್ತು. ಆ ಪಾತ್ರಕ್ಕೆ ಹೆಚ್ವು ಒತ್ತು ಕೊಡಬೇಕಿತ್ತು. ಆದರೆ ಸಮಯದ ಒತ್ತಡದಿಂದಾಗಿ ನನಗೆ ಕಷ್ಟವಾಗಿತ್ತು. ಆದರೆ ಪಾವನ ಮೊದಲ shotಗೆ ರೆಡಿಯಾಗಿ ಬಂದಾಗ, ಅವಳು ತನ್ನೊಳಗೇ ಪಾತ್ರಕ್ಕಾಗಿ ಮಾಡಿಕೊಂಡ ತಯಾರಿ ಮತ್ತು ಕೊನೆಯ ದಿನದ ತನಕ ಪಾತ್ರವನ್ನು ಆಸ್ವಾದಿಸಿ ಅಭಿನಯಿಸಿದ್ದು ನಿಜಕ್ಕೂ ಅವರ ಕಮಿಟ್ಮೆಂಟಿಗೆ ಸಾಕ್ಷಿ. ನಮ್ಮ ಇಂಡಸ್ಟ್ರಿ ಈ ಚಂದನದ ಗೊಂಬೆಯನ್ನು ಇನ್ನೂ ಹೆಚ್ಚು ಸಮರ್ಥ ಪಾತ್ರಗಳೊಂದಿಗೆ ಸಿಂಗರಿಸಬೇಕು”

LEAVE A REPLY

Connect with

Please enter your comment!
Please enter your name here