ಶ್ರೀಜಿತ್ ಎಡವನ ನಿರ್ದೇಶನದ ‘ಸಿಕಾಡಾ’ ಸಿನಿಮಾದ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಒಂದೇ ಟೈಟಲ್, ಒಂದೇ ಕಥೆ, 4 ವಿಭಿನ್ನ ಭಾಷೆಗಳು, 24 ವಿಭಿನ್ನ ಟ್ಯೂನ್‌ಗಳು ಈ ಚಿತ್ರದ ವಿಶೇಷ. ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಚಿತ್ರತಂಡದ ಯೋಜನೆ.
ಒಂದೇ ಟೈಟಲ್, ಒಂದೇ ಕಥೆ, 4 ವಿಭಿನ್ನ ಭಾಷೆಗಳು, 24 ವಿಭಿನ್ನ ಟ್ಯೂನ್‌ಗಳನ್ನು ಹೊಂದಿರುವ ‘ಸಿಕಾಡಾ’ (Cicada) ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಸ್ಯಾಂಡಲ್‌ವುಡ್ ತಾರೆಯರಾದ ಮೇಘನಾ ರಾಜ್ ಮತ್ತು ಪ್ರಜ್ವಲ್ ದೇವರಾಜ್ ಪೋಸ್ಟರ್ ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ. ಶ್ರೀಜಿತ್ ಎಡವನ ನಿರ್ದೇಶನದ ಚೊಚ್ಚಲ ಚಿತ್ರವಿದು. ತಿರ್ನಾ ಫಿಲ್ಮ್ಸ್ ಎಂಟರ್‌ಟೇನ್‌ಮೆಂಟ್ಸ್ ಬ್ಯಾನರ್‌ನಡಿ ವಂದನಾ ಮೆನನ್ ಮತ್ತು ಗೋಪಕುಮಾರ್ ಪಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಕರ್ನಾಟಕದ ಮಾಜಿ ಕೃಷಿ ಸಚಿವ ಎನ್ ಎಚ್ ಶಿವಶಂಕರ ರೆಡ್ಡಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿ ಹಾರೈಸಿದ್ದಾರೆ. ಪ್ರತಿ ಅವತರಣಿಕೆಗೂ ಪ್ರತ್ಯೇಕ ಟ್ಯೂನ್‌ಗಳನ್ನು ಕಂಪೋಸ್ ಮಾಡಲಾಗಿದೆ. ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು, ನಾಲ್ಕು ಭಾಷೆಗಳಲ್ಲಿ ಆ ಭಾಷೆಯ ನೇಟಿವಿಟಿಗೆ ಹೊಂದುವಂತಹ ಟ್ಯೂನ್‌ಗಳನ್ನು ಸಂಯೋಜಿಸಲಾಗಿದೆ.
ಬೆಂಗಳೂರು, ಅಟ್ಟಪಾಡಿ, ವಾಗಮೋನ್, ಕೊಚ್ಚಿ ಮುಂತಾದೆಡೆ ಸಿನಿಮಾದ ಚಿತ್ರೀಕರಣ ನಡೆದಿದೆ. ಈ ಸಿನಿಮಾ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಮೂಡಿಬಂದಿದೆ. ನಾಲ್ಕು ಭಾಷೆಯ ಅವತರಣಿಕೆಗಳಿಗೆಂದೇ ಒಟ್ಟು 24 ಹೊಸ ಹಾಡುಗಳನ್ನು ಕಂಪೋಸ್ ಮಾಡಿರುವುದು ವಿಶೇಷ. ಶ್ರೀಜಿತ್ ಎಡವನ ಅವರು ಚಿತ್ರದ ಹಾಡುಗಳಿಗೆ ಸಂಕಲನ ಮಾಡಿದ್ದು, ಶೀಘ್ರದಲ್ಲೇ ಜ್ಯೂಕ್ ಬಾಕ್ಸ್‌ಗೆ ಬರಲಿವೆ. ಇವರು ‘ಪ್ರೀತಿ ನನ್ನ ಕವಿಯೆ’, ‘ನೆಂಜೋಡು ಚೆರ್ತು’ನಂತಹ ಹಿಟ್ ಗೀತೆಗಳನ್ನು ಸಂಯೋಜಿಸಿದ್ದು, ತಮಿಳು ಮತ್ತು ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ.