ಹನೀಫ್‌ ಅದೇನಿ ನಿರ್ದೇಶನದ ‘ರಾಮಚಂದ್ರ Boss & Co’ ಮಲಯಾಲಂ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ನಿವಿನ್ ಪೌಲಿ, ವಿನಯ್ ಫೋರ್ಟ್, ಆರ್ಷಾ ಚಾಂದಿನಿ ಬೈಜು, ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ಆಗಸ್ಟ್‌ 25ರಂದು ತೆರೆಕಾಣಲಿದೆ.

ಜನಪ್ರಿಯ ನಟ ನಿವಿನ್ ಪೌಲಿ ಅಭಿನಯದ ‘ರಾಮಚಂದ್ರ ಬಾಸ್ & ಕೋ’ ಮಲಯಾಳಂ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಹನೀಫ್ ಅದೇನಿ ನಿರ್ದೇಶನದ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ವಿನಯ್ ಫೋರ್ಟ್, ಆರ್ಷಾ ಚಾಂದಿನಿ ಬೈಜು ಮತ್ತು ಮಮಿತಾ ಬೈಜು ನಟಿಸಿದ್ದಾರೆ. ದುಬೈನಲ್ಲಿ ಚಿತ್ರಿಸಿರುವ ಆಕ್ಷನ್‌ – ಕಾಮಿಡಿ ಚಿತ್ರದ ಟ್ರೈಲರ್‌, ನಾಯಕ ರಾಮಚಂದ್ರ ಬಾಸ್‌ ಪರಿಚಯದೊಂದಿಗೆ ಆರಂಭವಾಗುತ್ತದೆ. ಅವನು ಅಪರಿಚಿತರ ಗುಂಪೊಂದನ್ನು ಒಟ್ಟುಗೂಡಿಸಿ ದುಬೈನಲ್ಲಿ ಶ್ರೀಮಂತ ಕೈಗಾರಿಕೋದ್ಯಮಿಯೊಬ್ಬನ ಆಸ್ತಿಯನ್ನು ಲೂಟಿ ಮಾಡಲು ಯೋಜನೆ ರೂಪಿಸುತ್ತಿರುತ್ತಾನೆ. ಈ ಎಲ್ಲಾ ಅಂಶಗಳು ಹಾಸ್ಯಮಯ ಸನ್ನಿವೇಶಗಳಿಂದ ಹಾಗೂ ಕೆಲವು ಸಾಹಸ ದೃಶ್ಯಗಳಿಂದ ತುಂಬಿದೆ. Pauly Jr. Pictures ಬ್ಯಾನರ್‌ ಅಡಿ ಲಿಸ್ಟಿನ್ ಸ್ಟೀಫನ್ ಈ ಚಿತ್ರ ನಿರ್ಮಿಸಿದ್ದಾರೆ. ಮಿಥುನ್‌ ಮುಕುಂದನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ಚಿತ್ರದ ‘ಯಲ್ಲಾ ಹಬೀಬಿ’ ಹಾಡು ಅರೇಬಿಕ್ ಸಂಗೀತವನ್ನು ಒಳಗೊಂಡಿದ್ದು, ಜನಪ್ರಿಯತೆ ಗಳಿಸಿದೆ. ಓಣಂ ಉಡುಗೊರೆಯಾಗಿ ಆಗಸ್ಟ್‌ 25ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here