ಬಹುನಿರೀಕ್ಷಿತ ‘ಸಲಾರ್‌’ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ರಿಲೀಸ್‌ ಹತ್ತಿರವಾದಂತೆ ಚಿತ್ರತಂಡ ‘ರಿಲೀಸ್‌ ಟ್ರೇಲರ್‌’ ಬಿಡುಗಡೆ ಮಾಡಿದೆ. ಈ ಟ್ರೇಲರ್‌ನಲ್ಲಿ ಚಿತ್ರದ ಮತ್ತಷ್ಟು ಪಾತ್ರಗಳ ಪರಿಚಯವಿದೆ. ಪ್ರಶಾಂತ್‌ ನೀಲ್‌ – ಪ್ರಭಾಸ್‌ ಸಿನಿಮಾ ಇದೇ ಡಿಸೆಂಬರ್‌ 22ರಂದು ತೆರೆಕಾಣಲಿದೆ.

ಪ್ರಭಾಸ್‌ ಮತ್ತು ಪೃಥ್ವಿರಾಜ್‌ ಸುಕುಮಾರನ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಸಲಾರ್‌’ ಭಾಗ -1 ಚಿತ್ರದ ಎರಡನೇ ಟ್ರೇಲರ್‌ (ರಿಲೀಸ್‌ ಟ್ರೇಲರ್‌) ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಶಾಂತ್‌ ನೀಲ್‌ ನಿರ್ದೇಶಿಸಿದ್ದಾರೆ. ಚಿತ್ರವು ಇಬ್ಬರು ಬಾಲ್ಯದ ಸ್ನೇಹಿತರ ಸುತ್ತ ಸುತ್ತುತ್ತದೆ. ಚಿತ್ರದ ಮೊದಲ ಟ್ರೇಲರ್‌ನಲ್ಲಿ ಫೃಥ್ವಿರಾಜ್‌ ಅವರನ್ನು ಹೈಲೈಟ್‌ ಮಾಡಲಾಗಿತ್ತು. ಈ ಟ್ರೇಲರ್‌ನಲ್ಲಿ ಪ್ರಭಾಸ್‌ ಪಾತ್ರಕ್ಕೆ ಹೆಚ್ಚು ಸ್ಕೋಪ್‌ ಸಿಕ್ಕಿದೆ. ಎರಡನೇ ಟ್ರೇಲರ್ ಖಾನ್ಸಾರ್ ಪ್ರಪಂಚ ಮತ್ತು ಅಲ್ಲಿ ವಾಸಿಸುವ ಜನರ ಜೀವನವನ್ನು ನಿಯಂತ್ರಿಸುವ ಪಾತ್ರಗಳ ಬಗ್ಗೆ ಒಂದು ನೋಟವನ್ನು ನೀಡಿದೆ. ಕೆಲವು ಆಕ್ಷನ್‌ ದೃಶ್ಯಗಳಲ್ಲಿ ಹೆಚ್ಚು ವಯಲೆನ್ಸ್‌ ಕಾಣಿಸುತ್ತದೆ. ಟ್ರೇಲರ್‌ನಲ್ಲಿ ಶ್ರುತಿ ಹಾಸನ್ ಸಹ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಮೀನಾಕ್ಷಿ ಚೌಧರಿ, ಟಿನು ಆನಂದ್, ಈಶ್ವರಿ ರಾವ್, ಜಗಪತಿ ಬಾಬು, ಶ್ರೀಯಾ ರೆಡ್ಡಿ, ಗರುಡ ರಾಮ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ‘ಎ’ ಪ್ರಮಾಣಪತ್ರ ಸಿಕ್ಕಿದ್ದು, ಚಿತ್ರವನ್ನು Hombale Films ಬ್ಯಾನರ್‌ ಅಡಿಯಲ್ಲಿ ವಿಜಯ್‌ ಕಿರಗಂದೂರು ನಿರ್ಮಿಸಿದ್ದಾರೆ. ಇದೇ ಡಿಸೆಂಬರ್ 22ರಂದು ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here