‘ವಿನಯ್ ಹಾಗೂ ಕಾರ್ತಿಕ್ ಇಬ್ಬರೂ ರಾತ್ರಿ ಲೈಟ್ ಆಫ್ ಆಗುವ ಮೊದಲೇ ಮಲಗಿದ್ದರು. ಇನ್ನೂ ಮನೆಯ ಮಹತ್ವಗಳನ್ನು ಅರಿಯದೇ ಬದುಕುತ್ತಿರುವ ವಿನಯ್ ಹಾಗೂ ಕಾರ್ತಿಕ್ ಅವರಿಗೆ ಶಿಕ್ಷೆ ವಿಧಿಸಲಾಗುತ್ತಿದೆ’ ಎಂದು ಬಿಗ್‌ಬಾಸ್ ಇಬ್ಬರಿಗೂ ಶಿಕ್ಷೆ ವಿಧಿಸಿದೆ. ಮನೆಯ ಇತರೆ ಸ್ಪರ್ಧಿಗಳು ಇಬ್ಬರಿಗೂ ತಣ್ಣೀರು ಎರಚುವ ಶಿಕ್ಷೆಯಿದು.
ಬಿಗ್‌ಬಾಸ್ ಮನೆಯಲ್ಲಿ ಸಾಕಷ್ಟು ನೀತಿ, ನಿಯಮಗಳು ಇರುತ್ತವೆ. ಅವುಗಳನ್ನು ಮೀರಿದವರಿಗೆ ಶಿಕ್ಷೆ ಖಚಿತ. ನಿನ್ನೆ ಬಿಗ್‌ಬಾಸ್‌ನಲ್ಲಿ ವಿನಯ್ ಮತ್ತು ಕಾರ್ತೀಕ್ ಇಂಥದ್ದೊಂದು ಶಿಕ್ಷಿಗೆ ಗುರಿಯಾಗಿದ್ದಾರೆ. ವಿನಯ್ ಮತ್ತು ಕಾರ್ತಿಕ್ ಮೊದಲಿನಿಂದಲೂ ತಮ್ಮ ಸ್ನೇಹಸಂಬಂಧವನ್ನು ಉಳಿಸಿಕೊಂಡು ಬಂದವರು. ಪರಸ್ಪರ ವಿರುದ್ಧ ತಂಡಗಳಲ್ಲಿ ಆಡುವಾಗಲೂ, ಜಿದ್ದಾಜಿದ್ದಿನ ಸ್ಪರ್ಧೆ ಇದ್ದಾಗಲೂ, ಟಾಸ್ಕ್ ಕಾರಣಕ್ಕೆ ಮನೆಯೊಳಗೆ ಪರಸ್ಪರ ಮಾತಿಗೆ ಮಾತು ಬೆಳೆದಾಗಲೂ ಇವರಿಬ್ಬರೂ ನಂತರ ಅದನ್ನು ಮರೆತು ಒಂದಾಗಿದ್ದರು. ಭುಜಕ್ಕೆ ಭುಜ ಢೀ ಹೊಡೆದು ನಕ್ಕಿದ್ದರು. ಇದೀಗ ಇಬ್ಬರೂ ಜೊತೆಜೊತೆಗೇ ಶಿಕ್ಷೆ ಅನುಭವಿಸಿದ್ದಾರೆ. JioCinema ಬಿಡುಗಡೆ ಮಾಡಿರುವ ಬೆಳಗಿನ ಪ್ರೋಮೊದಲ್ಲಿ ಇದು ಸೆರೆಯಾಗಿದೆ.
ಬೆಳಿಗ್ಗೆ ಎದ್ದಾಗ ಸ್ಪರ್ಧಿಗಳಿಗೆ ಬಿಗ್‌ಬಾಸ್ ಧ್ವನಿ ಕೇಳಿಸಿದೆ. ಆ ಧ್ವನಿ ಯಾವುದೋ ಸೂಚನೆ ನೀಡುವುದಕ್ಕಾಗಲಿ, ಶುಭಾಶಯ ಕೋರುವುದಕ್ಕಾಗಿ, ಅಥವಾ ಟಾಸ್ಕ್ ನೀಡುವುದಕ್ಕಾಗಲಿ ಬಂದಿದ್ದಲ್ಲ. ಬದಲಿಗೆ ಶಿಕ್ಷೆ ನೀಡುವುದಕ್ಕೆ! ‘ವಿನಯ್ ಹಾಗೂ ಕಾರ್ತಿಕ್ ಇಬ್ಬರೂ ರಾತ್ರಿ ಲೈಟ್ ಆಫ್ ಆಗುವ ಮೊದಲೇ ಮಲಗಿದ್ದರು. ಇನ್ನೂ ಮನೆಯ ಮಹತ್ವಗಳನ್ನು ಅರಿಯದೇ ಬದುಕುತ್ತಿರುವ ವಿನಯ್ ಹಾಗೂ ಕಾರ್ತಿಕ್ ಅವರಿಗೆ ಶಿಕ್ಷೆ ವಿಧಿಸಲಾಗುತ್ತಿದೆ’ – ಬಿಗ್‌ಬಾಸ್ ಧ್ವನಿ ಹೀಗೆ ಹೇಳುತ್ತಿರುವ ಹಾಗೆಯೇ ಮನೆಯವರೆಲ್ಲರೂ ಅಚ್ಚರಿಗೊಂಡಿದ್ದಾರೆ. ಹಾಗಾದರೆ ಬಿಗ್‌ಬಾಸ್ ವಿಧಿಸಿದ ಶಿಕ್ಷೆ ಏನು? ವಿನಯ್ ಮತ್ತು ಕಾರ್ತಿಕ್ ಅವರನ್ನು ಗಾರ್ಡನ್ ಏರಿಯಾದಲ್ಲಿ ಕುರ್ಚಿಯಲ್ಲಿ ಕೂಡಿಸಿ, ಮನೆಯವರೆಲ್ಲರೂ ಅವರ ಮುಖದ ಮೇಲೆ ತಣ್ಣೀರು ಎರಚಿ, ‘ಎದ್ದೇಳಿ ವಿನಯ್, ಎದ್ದೇಳಿ ಕಾರ್ತಿಕ್’ ಎಂದು ಹೇಳಿದ್ದಾರೆ. ಬೆಳಗಿನ ಚಳಿಗೆ ಇಬ್ಬರಿಗೂ ನಡುಕ ಬಂದಿದೆ.
ಶಿಕ್ಷೆ ಮುಗಿದ ಮೇಲೆ ಕಾರ್ತಿಕ್ ಅವರ ಒದ್ದೆ ತಲೆಯನ್ನು ಸಂಗೀತಾ ತಮ್ಮ ಕೈಯಾರೆ ಒರೆಸಿದ್ದು ಇನ್ನೊಂದು ವಿಶೇಷ. ಶಿಕ್ಷೆಯನ್ನು ಅನುಭವಿಸಿದ ಮೇಲೂ ನಗುನಗುತ್ತಲೇ ಭುಜಕ್ಕೆ ಭುಜ ಢೀ ಹೊಡೆದು ‘ಶಿಕ್ಷೆ ಆಗಿದೆ’ ಎಂದು ಇಬ್ಬರೂ ನಕ್ಕಿದ್ದಾರೆ. ಸಂಗೀತಾ, ‘ನಿಮಗೆ ನಾಚಿಕೆ ಆಗಲ್ವಾ?’ ಎಂದು ಕೇಳಿದ್ದಾರೆ. ಅಲ್ಲದೆ, ‘ಇನ್ನಾದ್ರೂ ಎದ್ದೇಳಿ ಕಾರ್ತಿಕ್’ ಎಂದು ಎಚ್ಚರಿಸಿದ್ದಾರೆ. ಕಾರ್ತಿಕ್ ಮಾತ್ರ, ‘ಪ್ರೀತಿ ತೋರಿಸ್ತೀಯಾ ಸರಿ… ಹಂಗಾ ತೋರಿಸೋದು?’ ಎಂದು ಸಂಗೀತಾಳನ್ನು ಹುಸಿಮುನಿಸಿನಿಂದಲೇ ಪ್ರಶ್ನಿಸಿದ್ದಾರೆ.