ಕ್ಯಾಚಿ ಟೈಟಲ್, ವಿಭಿನ್ನ ಕಾನ್ಸೆಪ್ಟ್‌ನೊಂದಿಗೆ ತಯಾರಾಗಿರುವ ‘Cutting ಶಾಪ್’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ತೆರೆಯ ಹಿಂದಿನ ತಂತ್ರಜ್ಞನ ಕತೆ ಹೇಳಲಿರುವ ಸಿನಿಮಾ ಮೇ 20ಕ್ಕೆ ತೆರೆಗೆ ಬರಲಿದೆ.

ತೆರೆಯ ಹಿಂದಿನ ತಂತ್ರಜ್ಞನ ಕತೆಯನ್ನು ತೆರೆ ಮೇಲೆ ತರುವಂಥ ಪ್ರಯತ್ನ.. ಎಡಿಟಿಂಗ್‌ ಇನ್ವಿಸಿಬಲ್‌ ಆರ್ಟ್‌. ಅಂತಹ ಕಲೆಗಾರಿಕೆಯ ಹಿಂದಿನ ಕಲಾವಿದನ ಇಂದಿನ ಕಾಲಮಾನದ ಕತೆ ಹೇಳಲು ಬಂದಿದೆ ಹೊಸಬರ ತಂಡ. ಕ್ಯಾಚಿ ಟೈಟಲ್, ವಿಭಿನ್ನ ಕಾನ್ಸೆಪ್ಟ್‌ನೊಂದಿಗೆ ತಯಾರಾಗಿರುವ ‘Cutting ಶಾಪ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಟ್ರೈಲರ್‌ ಮೂಲಕ ಗಮ‌ನ ಸೆಳೆಯುತ್ತಿರುವ ಕಟ್ಟಿಂಗ್ ಶಾಪ್ ಮೇ 20ಕ್ಕೆ ತೆರೆಗೆ ಬರಲಿದೆ.

ಸಂಪೂರ್ಣ ಹೊಸಬರೇ ಸೇರಿಕೊಂಡು ಮಾಡಿರುವ ‘Cutting ಶಾಪ್’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದ್ದು, Rapper ಆಲ್ ಓಕೆ ಹಾಡಿರುವ ಸ್ಪೆಷಲ್ ಸಾಂಗ್‌ವೊಂದನ್ನು ರಿಲೀಸ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಸಂಕಲನಕಾರನ ಜೀವನವನ್ನು ಹಾಸ್ಯಮಯವಾಗಿ ಚಿತ್ರೀಕರಿಸಿರುವ ‘Cutting ಶಾಪ್’ ಸಿನಿಮಾಗೆ ಪವನ್ ಭಟ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ಪವನ್, ‘ಆಪರೇಷನ್ ಅಲಮೇಲಮ್ಮ’, ‘ಮಾಯಾಬಜಾರ್’, ‘ಅಳಿದು ಉಳಿದವರು’, ‘ರಾಂಚಿ’ ಸಿನಿಮಾ ಸೇರಿದಂತೆ ಹಲವು ಚಿತ್ರಗಳಿಗೆ ಬರಹಗಾರನಾಗಿ, ಗೀತಸಾಹಿತಿಯಾಗಿ ಕೆಲಸ ಮಾಡಿದ್ದಾರೆ. ಮೊದಲ ಬಾರಿ ‘Cutting ಶಾಪ್’ ಸಿನಿಮಾ ಮೂಲಕ ಆಕ್ಷನ್ ಕಟ್ ಹೇಳಲಿರುವ ಪವನ್ ಸಿನಿಮಾಗೆ ಚಿತ್ರಕಥೆ, ಸಂಭಾಷಣೆ, ಗೀತಸಾಹಿತ್ಯದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ.

ತಮ್ಮದೇ ಕಿಕಿ ಯೂಟ್ಯೂಬ್ ಚಾನಲ್‌ನ ಕಿರುಚಿತ್ರಗಳ ಮೂಲಕ ಗುರುತಿಸಿಕೊಂಡು, ‘ಆಪರೇಷನ್ ಅಲಮೇಲಮ್ಮ’, ‘ಮಾಯಾಬಜಾರ್’ ಸಿನಿಮಾಗಳ ಪುಟ್ಟ ಪಾತ್ರಗಳಲ್ಲಿ ನಟಿಸಿದ ಪ್ರವೀಣ್ ಈ ಸಿನಿಮಾದಲ್ಲಿ ನಾಯಕನಟನಾಗಿ ಅಭಿನಯಿಸುವುದರ ಜೊತೆಗೆ ಕತೆ ಬರೆದು ಚಿತ್ರಕ್ಕೆ ಸಂಗೀತ ಒದಗಿಸಿದ್ದಾರೆ. ಯಂಗ್ ಥಿಂಕರ್ಸ್, ಫಿಲ್ಸ್ ಬ್ಯಾನರ್ ಅಡಿಯಲ್ಲಿ ಕೆ.ಉಮೇಶ್ ಮತ್ತು ಗಣೇಶ್ ಐತಾಳ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಉಮೇಶ್, ನಿರ್ಮಾಣದ ಜೊತೆಗೆ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅರ್ಚನಾ ಕೊಟ್ಟಿಗೆ, ದೀಪಕ್ ಭಟ್, ಅಭಿಷೇಕ್ ಸಾವಳಗಿ, ನವೀನ್ ಕೃಷ್ಣ ವತ್ಸಲಾ ಮೋಹನ್ ಪ್ರಮುಖ ಪಾತ್ರಧಾರಿಗಳು. ಸ್ಕಂದ ರತ್ನಂ ಛಾಯಾಗ್ರಹಣ, ಸಾಗರ್ ಗಣೇಶ್ ಸಂಕಲನ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here