ರಾಜಮೌಳಿ ನಿರ್ದೇಶನದ ‘ಬಾಹುಬಲಿ 2’ ಹಿಂದಿ ಡಬ್ಬಿಂಗ್‌ ಅವತರಣಿಕೆ 510.99 ಕೋಟಿಯೊಂದಿಗೆ ಅತಿ ಹೆಚ್ಚು ಗಳಿಕೆಯ ಮೊದಲ ಹಿಂದಿ ಚಿತ್ರವಾಗಿ ದಾಖಲಾಗಿದೆ. ಅಮೀರ್‌ ಖಾನ್‌ ಅಭಿನಯದ ‘ದಂಗಲ್‌’ 387.38 ಕೋಟಿ ರೂಗಳನ್ನು ಗಳಿಸಿ ಎರಡನೇ ಸ್ಥಾನದಲ್ಲಿತ್ತು. ಇದೀಗ ಯಶ್‌ರ ‘KGF2’ ಸಿನಿಮಾ ‘ದಂಗಲ್‌’ ದಾಖಲೆ ಮುರಿದು ಮುನ್ನುಗ್ಗಿದೆ.

ಪ್ರಶಾಂತ್‌ ನೀಲ್‌ ನಿರ್ದೇಶನದ ‘KGF2’ ಸಿನಿಮಾ ಮುಡಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. Stylish Actioner ಎಂದೇ ಕರೆಸಿಕೊಂಡಿರುವ ಸಿನಿಮಾ ಈ ಹೊತ್ತಿಗೂ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಇದೀಗ ‘KGF2’ ಹಿಂದಿ ಡಬ್ಬಿಂಗ್‌ ಅವತರಣಿಕೆ ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಹಿಂದಿ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಮೀರ್‌ ಖಾನ್‌ರ ‘ದಂಗಲ್‌’ ಸಿನಿಮಾದ 387.38 ಕೋಟಿ ರೂಪಾಯಿ ಗಳಿಕೆಯನ್ನು ಸರಿಗಟ್ಟಿರುವ ‘KGF2’ ಹಿಂದಿ ಡಬ್ಬಿಂಗ್‌ ಅವತರಣೀಕೆ ಎರಡನೇ ಸ್ಥಾನಕ್ಕೇರಿದೆ. ರಾಜಮೌಳಿ ನಿರ್ದೇಶನದ ‘ಬಾಹುಬಲಿ2’ 510.99 ಕೋಟಿ ರೂಪಾಯಿ ಗಳಿಕೆಯೊಂದಿಗೆ ಮೊದಲ ಸ್ಥಾನದಲ್ಲಿದೆ. ಟ್ರೇಡ್‌ ಅನಲಿಸ್ಟ್‌ಗಳಾದ ತರಣ್‌ ಆದರ್ಶ್‌, ರಮೇಶ್‌ ಬಾಲಾ ಈ ಕುರಿತು ಟ್ವೀಟ್‌ ಮಾಡಿದ್ದಾರೆ.

ಹಿಂದಿ ಬೆಲ್ಟ್‌ನಲ್ಲಿ ಕಲೆಕ್ಷನ್‌ಗೆ ಸಂಬಂಧಿಸಿದಂತೆ ‘KGF2’ ಸಿನಿಮಾ ಅಮೀರ್‌ ಖಾನ್‌ರ ‘ದಂಗಲ್‌’ ಚಿತ್ರವನ್ನು ಹಿಂದಿಕ್ಕಿದೆ. ಆದರೆ ಜಾಗತಿಕ ವಹಿವಾಟಿನ ಲೆಕ್ಕಾಚಾರದಲ್ಲಿ ‘ದಂಗಲ್‌’ನದ್ದೇ ದೊಡ್ಡ ದಾಖಲೆ. ಈ ಚಿತ್ರದ ಒಟ್ಟಾರೆ ಜಾಗತಿಕ ವಹಿವಾಟು 2024 ಕೋಟಿ ರೂಪಾಯಿ. ಇನ್ನು ‘ಬಾಹುಬಲಿ 2’ ಸಿನಿಮಾ 1,810 ಕೋಟಿ ರೂಪಾಯಿಯೊಂದಿಗೆ ಎರಡನೇ ಸ್ಥಾನದಲ್ಲಿದೆ. 1,056 ಕೋಟಿ ರೂಪಾಯಿ ಜಾಗತಿಕ ಗಳಿಕೆಯೊಂದಿಗೆ ‘KGF2’ ನಾಲ್ಕನೇ ಸ್ಥಾನದಲ್ಲಿದೆ. ಏಪ್ರಿಲ್‌ 14ರಂದು ತೆರೆಕಂಡ ‘KGF2’ ಹಲವು ದಾಖಲೆಗಳನ್ನು ಮುಡಿಗೇರಿಸಿಕೊಂಡು ಪ್ರದರ್ಶನಗೊಳ್ಳುತ್ತಿದೆ.

LEAVE A REPLY

Connect with

Please enter your comment!
Please enter your name here