ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾದ ಮೇಕಿಂಗ್ ವೀಡಿಯೋ ಬಿಡುಗಡೆಯಾಗಿದೆ. ಒಂದು ನಿಮಿಷದ ಮೇಕಿಂಗ್ ವೀಡಿಯೋದಲ್ಲಿ ಬೃಹತ್ ಸೆಟ್‌ನಲ್ಲಿ ದರ್ಶನ್ ಅವರನ್ನು ಚಿತ್ರೀಕರಿಸುವ ಗ್ಲಿಮ್ಸಸ್ ಇವೆ. ಡೆವಿಲ್ ಪಾತ್ರದಲ್ಲಿ ನಟ ದರ್ಶನ್ fit & fine ಆಗಿ ಕಾಣಿಸುತ್ತಿದ್ದಾರೆ.
ಮಿಲನ ಪ್ರಕಾಶ್ ನಿರ್ದೇಶನದಲ್ಲಿ ದರ್ಶನ್ ನಟಿಸುತ್ತಿರುವ ‘ಡೆವಿಲ್’ ಸಿನಿಮಾದ ಮೇಕಿಂಗ್ ವೀಡಿಯೋ ಬಿಡುಗಡೆಯಾಗಿದೆ. ಮೊನ್ನೆ ಈ ವಿಡಿಯೋ ರಿಲೀಸ್ ಆಗಲಿದೆ ಎಂದಾಗಲೇ ದರ್ಶನ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು. ಒಂದು ನಿಮಿಷದ ಮೇಕಿಂಗ್ ವೀಡಿಯೋದಲ್ಲಿ ಬೃಹತ್ ಸೆಟ್‌ನಲ್ಲಿ ದರ್ಶನ್ ಅವರನ್ನು ಚಿತ್ರೀಕರಿಸುವ ಗ್ಲಿಮ್ಸಸ್ ಇವೆ. ಡೆವಿಲ್ ಪಾತ್ರದಲ್ಲಿ ನಟ ದರ್ಶನ್ fit & fine ಆಗಿ ಕಾಣಿಸುತ್ತಿದ್ದಾರೆ. ಅದ್ಧೂರಿ ಸೆಟ್‌ನ ದೃಶ್ಯಗಳು ಚಿತ್ರದ ಕತೆಯ ಬಗ್ಗೆ ಖಚಿತವಾದ ಸುಳಿವು ನೀಡುವುದಿಲ್ಲ. ಮೇಕಿಂಗ್ ವೀಡಿಯೋದಲ್ಲಿ ನಿರ್ದೇಶಕ ಮಿಲನ ಪ್ರಕಾಶ್ ಸೇರಿದಂತೆ ತಂತ್ರಜ್ಞರು ಕಾಣಿಸುತ್ತಾರೆ. ‘ಅಕ್ಷಯ ತೃತೀಯ ಸಂಭ್ರಮವಿರಲಿ, ಸುಖ ಸಂತೋಷ ಅಕ್ಷಯವಾಗಲಿ’ ಎನ್ನುವ ಒಕ್ಕಣಿಯೊಂದಿಗೆ ವೈಷ್ಣೋ ಸ್ಟುಡಿಯೋಸ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮೇಕಿಂಗ್ ವೀಡಿಯೋ ಹಂಚಿಕೊಂಡಿದೆ.
‘ಕಾಟೇರ’ ಯಶಸ್ಸಿನ ನಂತರ ನಟ ದರ್ಶನ್ ಅವರ ‘ಡೆವಿಲ್’ ಸಿನಿಮಾ ಬಗ್ಗೆ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾ ಚಿತ್ರೀಕರಣದ ಆರಂಭದ ದಿನಗಳಲ್ಲೇ ಆಕಸ್ಮಿಕವೊಂದರಲ್ಲಿ ಹೀರೋ ದರ್ಶನ್ ಕೈಗೆ ಏಟಾಗಿತ್ತು. ಹಾಗಾಗಿ ಕೆಲಕಾಲ ಚಿತ್ರೀಕರಣಕ್ಕೆ ಬ್ರೇಕ್ ನೀಡಲಾಗಿತ್ತು. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನಟ ದರ್ಶನ್ ಕೈಗೆ ಎಲ್ಬೋ ಬ್ರೇಸ್ ಪ್ಲೇಟ್ ಹಾಕಿಕೊಂಡಿದ್ದರು. ಈಗ ಅವರು ಮತ್ತೆ ಶೂಟಿಂಗ್‌ಗೆ ಮರಳಿದ್ದು, ಬಿರುಸಿನಿಂದ ಚಿತ್ರೀಕರಣ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆಯೇ ಆದರೆ ಇದೇ ಅಕ್ಟೋಬರ್ ತಿಂಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಬಾಲಿವುಡ್ ನಟ ಮಹೇಶ್ ಮಂಜ್ರೇಕರ್ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದು, ನಾಯಕಿಯ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ, ಸುಧಾಕರ್ ಜೆ ರಾಜ್ ಛಾಯಾಗ್ರಹಣ ಚಿತ್ರಕ್ಕಿದೆ.










