ಕಮರ್ ಫಿಲಂ ಫ್ಯಾಕ್ಟರಿ ಮೂಲಕ ಕಮರ್ ನೇತೃತ್ವದಲ್ಲಿ ಸ್ಯಾಂಡಲ್ ವುಡ್ ‘ಬಿಸಿಎಲ್’ ಸೀಸನ್ 2 ಆರಂಭವಾಗಲಿದೆ. ಡಿಸೆಂಬರ್‌ನಲ್ಲಿ ಶುರುವಾಗಲಿರುವ ಕ್ರಿಕೆಟ್‌ ಸರಣಿಗೆ ತಾರೆಯರು ಕೈಜೋಡಿಸಲಿದ್ದಾರೆ.

ಕಳೆದ ನಲವತ್ತೈದು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ  ಕೆ.ಬಿ.ಬಾಬು ಅವರು ನರ್ಗಿಸ್ ಬಾಬು ಎಂದೇ ಖ್ಯಾತರಾಗಿದ್ದಾರೆ. ಅವರ ಪುತ್ರ ಕಮರ್ ಕೂಡ ಕಳೆದ ಇಪ್ಪತ್ತು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ  ಸಕ್ರಿಯವಾಗಿದ್ದಾರೆ. ಅವರ ಒತ್ತಾಸೆಯಿಂದಾಗಿ ಬಿಸಿಎಲ್‌ ಆಯೋಜನೆಗೊಳ್ಳುತ್ತಿದೆ. ಈ ಕ್ರಿಕೆಟ್ ಟೂರ್ನಿ ಕುರಿತ ಕಮರ್ ವಿವರಣೆಯಿದು – “ಡಿಸೆಂಬರ್‌ನಲ್ಲಿ ಸ್ಯಾಂಡಲ್‌ವುಡ್ ಬಿಸಿಎಲ್ ಸೀಸನ್ 2 ಆರಂಭ ಮಾಡುತ್ತಿದ್ದೇವೆ. ಸದ್ಯಕ್ಕೆ ಒಟ್ಟು 6 ತಂಡಗಳಿದೆ. ಮುಂದೆ ಹೆಚ್ಚಾದರೂ ಆಗಬಹುದು. ಸ್ಯಾಂಡಲ್‌ವುಡ್‌ನ ಸಾಕಷ್ಟು ಸ್ಟಾರ್‌ಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತಾರೆ. ಬೆಂಗಳೂರು, ಮೈಸೂರು, ಹಾಸನ, ದಾವಣಗೆರೆ, ಶಿವಮೊಗ್ಗ, ಮಂಗಳೂರು  ಹೀಗೆ ಒಂದೊಂದು ಊರಿನ ಹೆಸರಿನಲ್ಲಿ ಆರು ತಂಡಗಳಿದ್ದು, ಆರು ತಂಡಗಳಿಗೆ ಮಾಲೀಕರಿರುತ್ತಾರೆ. ಅವರೆ ತಮ್ಮ ತಂಡಗಳಿಗೆ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಒಂದು ತಂಡದಲ್ಲಿ ಏಳು ಪುರುಷ ಹಾಗೂ ನಾಲ್ಕು ಮಹಿಳಾ ಆಟಗಾರರಿರುತ್ತಾರೆ. ಇನ್ನೂ ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡುವುದು”.

ಬೆಂಗಳೂರು ತಂಡದ ಮಾಲೀಕರಾದ ಜಾಕೀರ್ ಹುಸೇನ್, ಪೂಜಾಶ್ರೀ, ಮೈಸೂರು ತಂಡದ ಮಾಲೀಕರಾದ ರಘು, ಗೀತಾಂಜಲಿ, ಹಾಸನ ತಂಡದ ಮಾಲೀಕರಾದ ದಿವ್ಯ – ಪ್ರಸಾದ್ ಹಾಗೂ ದಾವಣಗೆರೆ ತಂಡದ ಮಾಲೀಕರಾದ ವಿಜಯಲಕ್ಷ್ಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು ತಮ್ಮ ಅಭಿಪ್ರಾಯ ಹಂಚಿಕೊಂಡರು. ಆಟಗಾರರ ಪೈಕಿ ಹರ್ಷಿಕಾ ಪೂಣಚ್ಛ, ತರುಣ್ ಚಂದ್ರ, ಹರ್ಷ ಇದ್ದರು.

LEAVE A REPLY

Connect with

Please enter your comment!
Please enter your name here