ದರ್ಶನ್‌ ಬರ್ತ್‌ಡೇ ಉಡುಗೊರೆಯಾಗಿ ಅವರ ನೂತನ ಸಿನಿಮಾ ‘ಡೆವಿಲ್‌’ ಫಸ್ಟ್‌ಲುಕ್‌ ಟೀಸರ್‌ ಬಿಡುಗಡೆಯಾಗಿದೆ. ಹೊಸ ಪಾತ್ರದಲ್ಲಿ ದರ್ಶನ್‌ ಅವರು ಸ್ಟೈಲಿಶ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಕಾಶ್‌ ವೀರ್‌ ನಿರ್ದೇಶನದಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಅವರ ಸಂಗೀತ ಸಂಯೋಜನೆಯಿದೆ.

ನಟ ದರ್ಶನ್‌ ಅವರಿಗೆ ಇಂದು (ಫೆಬ್ರವರಿ 16) ಹುಟ್ಟುಹಬ್ಬ ಸಂಭ್ರಮ. ಬರ್ತ್‌ಡೇ ಅಂಗವಾಗಿ ಅವರ ನೂತನ ಸಿನಿಮಾ ‘ಡೆವಿಲ್‌’ ಫಸ್ಟ್‌ಲುಕ್‌ ಟೀಸರ್‌ ಬಿಡುಗಡೆಯಾಗಿದೆ. ಈ ಹಿಂದೆ ದರ್ಶನ್‌ ಅವರಿಗೆ ‘ತಾರಕ್‌’ ಸಿನಿಮಾ ನಿರ್ದೇಶಿಸಿದ್ದ ಪ್ರಕಾಶ್‌ ವೀರ್‌ ನಿರ್ದೇಶನದ ಚಿತ್ರವಿದು. ಟೀಸರ್‌ನಲ್ಲಿ ದರ್ಶನ್‌ ಪಾತ್ರದ ಬಗೆಗಿನ ಸಣ್ಣ ಚಿತ್ರಣವಿದೆ. ‘ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು. ಪೋಟೋ ತೆಗೆಯಲದಕೆ ಬಲು ಕೋಪ ಬರುವುದು. ಪೋಟೋ ತೆಗೆದ ಪಾಪು ಕೈಯ ಮುರಿದುಬಿಡುವುದು. ಸರಸು, ಪಾಪು ಹೆಸರು ಕೇಳಿಲ್ವಾ? ‘ಡೆವಿಲ್‌’ ಎಂದು ಗಹಗಹಿಸಿ ನಗುವ ದರ್ಶನ್‌ ಪಾತ್ರ ಕುತೂಹಲಕಾರಿಯಾಗಿದೆ. ಅವರು ಸ್ಟೈಲಿಶ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರವನ್ನು Shri Jaimatha Combines ಮತ್ತು Vaishno Studios ಬ್ಯಾನರ್ ಅಡಿಯಲ್ಲಿ ಜೆ ಜಯಮ್ಮ ನಿರ್ಮಿಸುತ್ತಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆ. ಸುಧಾಕರ್‌ ರಾಜ್‌ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ. ಚಿತ್ರದ ಇತರೆ ತಾರಾಬಳಗ ಮತ್ತು ತಂತ್ರಜ್ಞರ ಬಗ್ಗೆ ಸದ್ಯದಲ್ಲೇ ಮಾಹಿತಿ ನೀಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ದರ್ಶನ್‌ ಈ ಹಿಂದೆ ನಟಿಸಿದ್ದ ‘ಕಾಟೇರ’ ಚಿತ್ರವು ಅದ್ಬುತ ಯಶಸ್ಸು ತಂದುಕೊಟ್ಟಿತು. ಈ ಚಿತ್ರವೀಗ ZEE5ನಲ್ಲಿ ಸ್ಟ್ರೀಮ್‌ ಆಗುತ್ತಿದ್ದು, OTTಯಲ್ಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

LEAVE A REPLY

Connect with

Please enter your comment!
Please enter your name here