ಹರಿಕೃಷ್ಣ ನಿರ್ದೇಶನದಲ್ಲಿ ದರ್ಶನ್ ನಟನೆಯ ‘ಕ್ರಾಂತಿ’ ಸಿನಿಮಾ ಶುರುವಾಗಿದೆ. ಮೀಡಿಯಾ ಹೌಸ್ ಪ್ರೊಡಕ್ಷನ್‌ನ ಚಿತ್ರದಲ್ಲಿ ಅಕ್ಷರಕ್ರಾಂತಿ ನಡೆಸುವ ನಾಯಕನಾಗಿ ದರ್ಶನ್ ಕಾಣಿಸಿಕೊಳ್ಳುತ್ತಿದ್ದಾರೆ. ಇದು ತಮ್ಮ ಹೀರೋ ವೃತ್ತಿ ಬದುಕಿನ ವಿಶಿಷ್ಟ ಚಿತ್ರವಾಗಲಿದೆ ಎನ್ನುವ ಅಂಬೋಣ ಅಭಿಮಾನಿಗಳದ್ದು.

ದರ್ಶನ್ ಅಭಿನಯದ 55ನೇ ಸಿನಿಮಾ ‘ಕ್ರಾಂತಿ’ಗೆ ಇಂದು ಮುಹೂರ್ತ ನೆರವೇರಿದೆ. ಈ ಹಿಂದೆ ದರ್ಶನ್‌ಗಾಗಿ ‘ಯಜಮಾನ’ ನಿರ್ಮಿಸಿದ್ದ ಮೀಡಿಯಾಹೌಸ್‌ನ ಸಿನಿಮಾ ಇದು. ಚಿತ್ರಕಥೆ, ನಿರ್ದೇಶನದ ಜೊತೆ ಸಂಗೀತ ಸಂಯೋಜನೆಯ ಹೊಣೆಯನ್ನೂ ಹರಿಕೃಷ್ಣ ಹೊತ್ತಿದ್ದಾರೆ. ಬಿ.ಸುರೇಶ ಮತ್ತು ಶೈಲಜಾ ನಾಗ್ ನಿರ್ಮಾಣದ ಈ ಸಿನಿಮಾದಲ್ಲಿ ದರ್ಶನ್ ತಂದೆಯಾಗಿ ನಟ ರವಿಚಂದ್ರನ್‌ ಅಭಿನಯಿಸುವುದು ಹೊಸ ಸುದ್ದಿ. ನಟಿ ಸುಮಲತಾ ಅವರೂ ಚಿತ್ರದಲ್ಲಿದ್ದು, ರಚಿತಾ ರಾಮ್‌ ನಾಯಕಿ. ದರ್ಶನ್‌ ಜೋಡಿಯಾಗಿ ಇದು ಅವರಿಗೆ ಮೂರನೇ ಸಿನಿಮಾ. ನಟಿ, ಸಂಸದೆ ಸುಮಲತಾ ಅಂಬರೀಶ್ ಅವರು ಕ್ಲ್ಯಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.

“ಚಿತ್ರದಲ್ಲಿ ನಾನೊಂದು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದೇನೆ. ಬಹಳ ದಿನಗಳ ನಂತರ ದರ್ಶನ್‌ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿರುವುದು ಖುಷಿ ತಂದಿದೆ” ಎನ್ನುತ್ತಾರೆ ಸುಮಲತಾ. ಚಿತ್ರದಲ್ಲಿ ಅಕ್ಷರ ಕ್ರಾಂತಿಗಾಗಿ ಹೋರಾಡುವ ನಾಯಕನಾಗಿ ದರ್ಶನ್ ಕಾಣಿಸಿಕೊಳ್ಳಲಿದ್ದಾರಂತೆ. ಇದೇ ತಿಂಗಳು ಕೊನೆಯ ವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಚಿತ್ರಕ್ಕಾಗಿ ಬೃಹತ್‌ ಸೆಟ್‌ಗಳು ಸಿದ್ಧವಾಗುತ್ತಿವೆ. ಮೀಡಿಯಾ ಹೌಸ್ ನಿರ್ಮಾಣದ ‘ಯಜಮಾನ’ ಚಿತ್ರದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಹೇಗೆ ಪ್ರಾದೇಶಿಕ ವ್ಯಾಪಾರ, ವಹಿವಾಟುಗಳನ್ನು ಹಿಮ್ಮಟ್ಟುತ್ತವೆ ಎನ್ನುವ ಸೂಕ್ಷ್ಮ ವಿಚಾರವನ್ನು ತೆರೆಗೆ ಅಳವಡಿಸಿದ್ದರು. ಈ ಬಾರಿ ಅಕ್ಷರ ಕ್ರಾಂತಿ ಕುರಿತು ಪ್ರಸ್ತಾಪವಾಗಿದೆ. ದರ್ಶನ್ ವೃತ್ತಿಬದುಕಿಗೆ ಇದೊಂದು ವಿಶಿಷ್ಟ ಚಿತ್ರವಾಗಲಿದೆ ಎಂದೇ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಬಿ.ಸುರೇಶ, ರವಿಚಂದ್ರನ್‌

LEAVE A REPLY

Connect with

Please enter your comment!
Please enter your name here