ದಯಾಳ್ ಪದ್ಮನಾಭನ್‌ ನಿರ್ದೇಶನದ ‘ಒಂಬತ್ತನೇ ದಿಕ್ಕು’ ಆಕ್ಷನ್‌ – ಥ್ರಿಲ್ಲರ್‌ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಯೋಗಿ ಮತ್ತು ಅದಿತಿ ಜೋಡಿಯಾಗಿ ನಟಿಸಿರುವ ಚಿತ್ರ. ದಯಾಳ್ ನಿರ್ದೇಶನದ ಹತ್ತೊಂಬತ್ತನೇ ಸಿನಿಮಾ.

ವಿಶಿಷ್ಟ ಕತೆ ಮತ್ತು ನಿರೂಪಣೆಯೊಂದಿಗೆ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಒಂದು ಹಾದಿ ಸೃಷ್ಟಿಸಿಕೊಂಡಿದ್ದಾರೆ ನಿರ್ದೇಶಕ, ನಿರ್ಮಾಪಕ ದಯಾಳ್ ಪದ್ಮನಾಭನ್‌. ಅವರ ನಿರ್ದೇಶನದಲ್ಲಿ ತೆರೆಕಂಡ ಇತ್ತೀಚಿನ ‘ಆ ಕರಾಳ ರಾತ್ರಿ’, ‘ರಂಗನಾಯಕಿ’ ಚಿತ್ರಗಳು ಕತೆಯ ಕಾರಣಕ್ಕಾಗಿ ಗಮನಸೆಳೆದಿದ್ದವು. ಈ ಬಾರಿ ಅವರು ಆಕ್ಷನ್ – ಥ್ರಿಲ್ಲರ್‌ ‘ಒಂಬತ್ತನೇ ದಿಕ್ಕು’ನೊಂದಿಗೆ ಮರಳುತ್ತಿದ್ದು, ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ದ್ದಾರೆ. ಅವರ ನಿರ್ಮಾಣ ಮತ್ತು ನಿರ್ದೇಶನದ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಲೂಸ್‌ ಮಾದ ಯೋಗಿ ಮತ್ತು ಅದಿತಿ ಪ್ರಭುದೇವ ನಟಿಸಿದ್ದಾರೆ. “ನನ್ನ ನಿರ್ದೇಶನದ ಹತ್ತೊಂಭತ್ತನೆಯ ಚಿತ್ರವಿದು.  ಈಗ ‘ಒಂಬತ್ತನೇ ದಿಕ್ಕು’ ಆಕ್ಷನ್ ಥ್ರಿಲ್ಲರ್ ಸಿನಿಮಾ ನಿರ್ದೇಶಿಸಿದ್ದೇನೆ. ಈ ಚಿತ್ರದ ಕಥೆ ಎರಡು ಟೈಮ್ ಲೈನ್‌ನಲ್ಲಿ ಸಾಗುತ್ತದೆ. ನಮಗೆ ಸಿಗುವುದಿಲ್ಲ ಎಂದು ಗೊತ್ತಿದರೂ ನಾವು ಮತ್ತೊಂದು ದಾರಿಯಲ್ಲಿ ಏನನ್ನೋ ಹುಡುಕುತ್ತಾ ಹೋಗುತ್ತೇವೆ. ಅದು ಮತ್ತೊಂದು ಕಡೆ ಸಿಗುತ್ತದೆ. ಹೀಗೆ ಇಲ್ಲದ ಕಡೆ ಹುಡುಕುತ್ತಾ ಸಾಗುತ್ತೇವೆ. ಅದಕ್ಕೆ ನಾನು ಈ ಶೀರ್ಷಿಕೆ ಆಯ್ಕೆ ಮಾಡಿಕೊಂಡೆ. ಮೂರು ಸಾಹಸ ಸನ್ನಿವೇಶಗಳಿವೆ” ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದರು ದಯಾಳ್‌. ಈ ಸಿನಿಮಾವನ್ನು ಇದೇ ತಿಂಗಳ ಹತ್ತೊಂಬತ್ತನೇ ತಾರೀಖು ತೆರೆಗೆ ತರುವುದು ಅವರ ಯೋಜನೆ.

ನಟ ಲೂಸ್ ಮಾದ ಯೋಗಿ ಅವರಿಗೆ ಇದು ಭಿನ್ನ ಪಾತ್ರ. “ನಾನು ಇಲ್ಲಿಯವರೆಗೂ ಮಾಡದ ಪಾತ್ರವಿದು. ದಯಾಳ್ ಅವರು ಹೇಳಿದ ಕಥೆ ತುಂಬಾ ಹಿಡಿಸಿತು. ಕಂಟೆಂಟ್ ಓರೆಯಂಟೆಡ್‌ ಕಮರ್ಷಿಯಲ್ ಸಿನಿಮಾ ಇದು. ಜನರೊಂದಿಗೆ ಕುಳಿತು ಚಿತ್ರ ನೋಡುವ ತವಕ ನನಗೂ ಇದೆ. ಪ್ರೇಕ್ಷಕರು ನಮ್ಮ ಸಿನಿಮಾ ಇಷ್ಟಪಡುವುದರಲ್ಲಿ ಯಾವುದೇ ಸಂದೇಹವಿಲ್ಲ” ಎನ್ನುವ ವಿಶ್ವಾಸ ಯೋಗಿ ಅವರದು. ಈ ಹಿಂದೆ ದಯಾಳ್‌ರ ‘ರಂಗನಾಯಕಿ’ ಚಿತ್ರದಲ್ಲಿ ನಟಿಸಿದ್ದ ಅದಿತಿ ‘ಒಂಬತ್ತನೇ ದಿಕ್ಕು’ ಚಿತ್ರಕ್ಕೂ ನಾಯಕಿಯಾಗಿದ್ದಾರೆ. ಹಿರಿಯ ನಟ ಅಶೋಕ್ ಅವರು ಯೋಗಿ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಸಾಯಿಕುಮಾರ್, ಹಿರಿಯನಟ ಅಶೋಕ್, ಸುಂದರ್, ರಮೇಶ್ ಭಟ್, ಶೃತಿ ನಾಯಕ್, ಪ್ರಶಾಂತ್ ಸಿದ್ದಿ, ಮುನಿ ಇತರರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ, ರಾಕೇಶ್ ಛಾಯಾಗ್ರಹಣ, ಪ್ರೀತಿ ಮೋಹನ್ ಸಂಕಲನ ಚಿತ್ರಕ್ಕಿದೆ.

ಚಿತ್ರತಂಡ

LEAVE A REPLY

Connect with

Please enter your comment!
Please enter your name here