ಸಂತಾನಂ ನಟನೆಯ ತಮಿಳು ಸಿನಿಮಾ ‘ಡಿಡಿ ರಿಟರ್ನ್ಸ್‌’ ಟ್ರೈಲರ್‌ ಬಿಡುಗಡೆಯಾಗಿದೆ. ಎಸ್‌ ಪ್ರೇಮ್‌ ಆನಂದ್‌ ನಿರ್ದೇಶನದ ಹಾರರ್‌ – ಕಾಮಿಡಿ ಇದು. ಜುಲೈ 28ರಂದು ಸಿನಿಮಾ ತೆರೆಕಾಣಲಿದೆ.

ಎಸ್ ಪ್ರೇಮ್ ಆನಂದ್ ನಿರ್ದೇಶನದ ‘ಡಿಡಿ ರಿಟರ್ನ್ಸ್’ ಹಾರರ್ – ಕಾಮಿಡಿ ತಮಿಳು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಸಂತಾನಂ ಮತ್ತು ಸುರಭಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ‘ಡಿಡಿ ರಿಟರ್ನ್ಸ್’ ಫ್ರ್ಯಾಂಚೈಸಿಯ ಮೂರನೇ ಭಾಗವಾಗಿದೆ. ಇದಕ್ಕೂ ಮೊದಲು 2016ರಲ್ಲಿ ‘ದಿಲುಕು ದುಡ್ಡು-1’ ಮತ್ತು 2019 ರಲ್ಲಿ ‘ದಿಲುಕು ದುಡ್ಡು-2’ ಚಿತ್ರಗಳು ಬಿಡುಗಡೆಯಾಗಿದ್ದವು. ಸಂತಾನಂ ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯ ನಟರಲ್ಲೊಬ್ಬರು. ಅನೇಕ ಹಾಸ್ಯ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈಗ, ‘ಡಿಡಿ ರಿಟರ್ನ್ಸ್‌’ ಚಿತ್ರದೊಂದಿಗೆ ಅವರು ಮತ್ತೊಮ್ಮೆ ಹಾಸ್ಯ ಪಾತ್ರಕ್ಕೆ ಮರಳಿದ್ದು, ತಮ್ಮ Instagram ಖಾತೆಯಲ್ಲಿ ಟ್ರೈಲರ್‌ ಹಂಚಿಕೊಂಡಿದ್ದಾರೆ. ರಾಜೇಂದ್ರನ್, ರೆಡಿನ್ ಕಿಂಗ್‌ಸ್ಲೀ, ಮಾರನ್, ಪ್ರದೀಪ್ ರಾವತ್, ಮಾಸೂಮ್ ಶಂಕರ್ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರಕ್ಕೆ OfRo ಸಂಗೀತ ಸಂಯೋಜಿಸಿದ್ದು, ಜುಲೈ 28ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here