ಶ್ರೇಯಸ್‌ ಚಿಂಗಾ ನಟಿಸಿ, ನಿರ್ದೇಶಿಸಿರುವ ‘ಡೇವಿಡ್‌’ ಸಿನಿಮಾ ಜುಲೈ 21ರಂದು ತೆರೆಕಾಣಲಿದೆ. ಸಾರಾ ಹರೀಶ್‌, ರಾಕೇಶ್‌ ಅಡಿಗ, ಪ್ರತಾಪ್‌ ನಾರಾಯಣ್‌ ಚಿತ್ರದ ಇತರೆ ಪ್ರಮುಖ ಕಲಾವಿದರು. ಬೆಂಗಳೂರನ್ನು ವಿಶಿಷ್ಟವಾಗಿ ಸೆರೆಹಿಡಿದಿರುವ ಸಿನಿಮಾ ಎನ್ನುತ್ತಾರೆ ಹೀರೋ ಶ್ರೇಯಸ್‌. ಜುಲೈ 21ರಂದು ಸಿನಿಮಾ ತೆರೆಕಾಣುತ್ತಿದೆ.

‘ಡೇವಿಡ್ ಒಂದು ರೊಮ್ಯಾಂಟಿಕ್ ಮಾರ್ಡರ್ ಮಿಸ್ಟರಿ. ಈವರೆಗೂ ನಾವು ನೋಡಿರದ ಬೆಂಗಳೂರನ್ನು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ. ತಾಂತ್ರಿಕವಾಗಿ ಶ್ರೇಷ್ಠ ಮಟ್ಟದಲ್ಲಿ ಚಿತ್ರ ರೂಪಿಸಲು ಶ್ರಮಿಸಿದ್ದೇವೆ. ಒಟ್ಟಾರೆ ಇದೊಂದು ತಂತ್ರಜ್ಞರ ಸಿನಿಮಾ!’ ಎನ್ನುತ್ತಾರೆ ‘ಡೇವಿಡ್‌’ ಸಿನಿಮಾದ ಹೀರೋ ಶ್ರೇಯಸ್‌ ಚಿಂಗಾ. ಅವರು ಹಾಗೂ ಭಾರ್ಗವ ಜೊತೆಗೂಡಿ ಈ ಸಿನಿಮಾ ನಿರ್ದೇಶಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟ ಪ್ರತಾಪ್‌ ನಾರಾಯಣ್‌ ಮತ್ತು ರಾಕೇಶ್‌ ಅಡಿಗ ಇದ್ದಾರೆ. ಪ್ರತಾಪ್‌ ನಾರಾಯಣ್‌ ಅವರಿಗಿಲ್ಲಿ ಶ್ರೀಮಂತರ ಮನೆಯ ಹುಡುಗನ ಪಾತ್ರ. ಮೂಲತಃ ಮಾಡೆಲ್‌ ಆದ ಸಾರಾ ಹರೀಶ್‌ ಚಿತ್ರದ ನಾಯಕಿ. ಈ ಹಿಂದೆ ಅವರು ‘ಭರತ ಬಾಹುಬಲಿ’ ಸಿನಿಮಾದಲ್ಲಿ ನಟಿಸಿದ್ದರು. ಖ್ಯಾತ Rapperಗಳಾದ ಎಂ ಸಿ ಬಿಜು, ಸಿದ್ ಚಿತ್ರದಲ್ಲಿ Rapper ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದಾರೆ. ಪ್ರಸಾದ್‌ ರುದ್ರಮುನಿ ನೀರಗಂಟಿ ನಿರ್ಮಾಣದ ಚಿತ್ರ ಜುಲೈ 21ರಂದು ಬಿಡುಗಡೆಯಾಗುತ್ತಿದ್ದು, ಚಂದನ್ ಫಿಲಂಸ್ ವಿತರಣೆ ಮಾಡುತ್ತಿದೆ. ಅವಿನಾಶ್ ಯಳಂದೂರು, ಬುಲೆಟ್ ಪ್ರಕಾಶ್, ಕಾವ್ಯಾ ಶಾ, ನಂದೀಶ್ ಚಿತ್ರದ ಇತರೆ ಕಲಾವಿದರು. ಅಕಾಲಿಕವಾಗಿ ಅಗಲಿದ ಹಾಸ್ಯನಟ ಬುಲೆಟ್‌ ಪ್ರಕಾಶ್‌ ಅಭಿನಯದ ಕೊನೆಯ ಚಿತ್ರವಿದು.

Previous article‘ಡಿಡಿ ರಿಟರ್ನ್ಸ್‌’ ಟ್ರೈಲರ್‌ | ಸಂತಾನಂ ತಮಿಳು ಸಿನಿಮಾ ಜುಲೈ 28ರಂದು ತೆರೆಗೆ
Next article‘ಕೌಸಲ್ಯ ಸುಪ್ರಜಾ ರಾಮ’ ಟ್ರೈಲರ್‌ | ಶಶಾಂಕ್‌ – ಡಾರ್ಲಿಂಗ್‌ ಕೃಷ್ಣ ಜೋಡಿ ಸಿನಿಮಾ

LEAVE A REPLY

Connect with

Please enter your comment!
Please enter your name here