ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರು ಪ್ರತಿಷ್ಠಿತ Cannes Film Festivalನಲ್ಲಿ ಜ್ಯೂರಿಯಾಗಿ ಪಾಲ್ಗೊಳ್ಳಲಿದ್ದಾರೆ. ಮೇ 17ರಿಂದ 26ರವೆಗೆ ಫೆಸ್ಟಿವಲ್‌ ನಡೆಯಲಿದ್ದು, Festival De Cannes ಟ್ವಿಟರ್‌ ಖಾತೆಯಲ್ಲಿ ಈ ಅಧಿಕೃತ ಘೋಷಣೆ ಹೊರಬಿದ್ದಿದೆ.

Festival De Cannes ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಜ್ಯೂರಿ ಪ್ರೆಸಿಡೆಂಟ್‌ ಮತ್ತು ಮೆಂಬರ್‌ಗಳ ಬಗ್ಗೆ ಟ್ವೀಟ್‌ ಹೊರಬಿದ್ದಿದೆ. 75ನೇ Cannes Film Festival ನಲ್ಲಿ ಫ್ರೆಂಚ್‌ ನಟ ವಿನ್ಸೆಂಡ್‌ ಲಿಂಡನ್‌ ಜ್ಯೂರಿ ಪ್ರೆಸಿಡೆಂಟ್‌ ಆಗಿದ್ದು, ಎಂಟು ಮಂದಿ ಜ್ಯೂರಿ ಸದಸ್ಯರಿರುತ್ತಾರೆ. ಈ ಪಟ್ಟಿಯಲ್ಲಿ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರೂ ಇದ್ದಾರೆ. ರೆಬೆಕ್ಕಾ ಹಾಲ್‌, ಅಸ್ಗರ್‌ ಫರ್ಹಾದಿ, ಲಾಡ್ಜ್‌ ಲಿ, ಜೆಫ್‌ ನಿಕೋಲಸ್‌, ಜವೋಚಿಮ್‌ ಟ್ರಯರ್‌, ನೂಮಿ ರಾಪೇಸ್‌ ಮತ್ತು ಜಾಸ್ಮಿನ್‌ ಟ್ರಿಂಚಾ ಕಮಟಿಯ ಇತರೆ ಜ್ಯೂರಿ ಮೆಂಬರ್‌ಗಳು. ಮೇ 17ರಿಂದ 26ರವೆಗೆ ಫ್ರೆಂಚ್‌ ರಿವೆರಾದಲ್ಲಿ ಫೆಸ್ಟಿವಲ್‌ ನಡೆಯಲಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಈ ಸುದ್ದಿ ಸಿಗುತ್ತಿದ್ದಂತೆ ನಟಿ ದೀಪಿಕಾರ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ನಟಿ ದೀಪಿಕಾ Cannes ರೆಡ್‌ ಕಾರ್ಪೆಟ್‌ ಇವೆಂಟ್‌ನಲ್ಲಿ ಮಿಂಚಿದ್ದರು. ಇದೀಗ Cannes ಫೆಸ್ಟಿವಲ್‌ ಕುರಿತ ಸುದ್ದಿಯ ಹಿನ್ನೆಲೆಯಲ್ಲಿ ಈ ಹಿಂದಿನ ದೀಪಿಕಾ ಪಡುಕೋಣೆ ಅವರ ರೆಡ್‌ ಕಾರ್ಪೆಟ್‌ ಸಂದರ್ಭದ ಫೋಟೊ, ವೀಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅಲ್ಲಿನ ಇವೆಂಟ್‌ಗಳಲ್ಲಿ ದೀಪಿಕಾ ತೊಟ್ಟ ಯಾವ ಡ್ರೆಸ್‌ ಆಕೆಗೆ ಚೆನ್ನಾಗಿ ಒಪ್ಪುತ್ತದೆ ಎಂದೆಲ್ಲಾ ಚರ್ಚೆಗಳು ನಡೆಯುತ್ತಿವೆ.

Previous articleವಿಶೃತ್‌ ನಾಯಕ್‌ರಿಗೆ ರಾಜ್ಯಪ್ರಶಸ್ತಿ ಗರಿ; ತಮ್ಮ ಸಿನಿಮಾ ಹಾದಿ ನೆನೆದ ನಟ
Next articleನಾವಿಬ್ಬರೂ ಭಾರತೀಯರೇ ಅಲ್ಲವೇ? – ಅಜಯ್‌ ದೇವಗನ್‌ಗೆ ಸುದೀಪ್‌ ಪ್ರಶ್ನೆ

LEAVE A REPLY

Connect with

Please enter your comment!
Please enter your name here