ರಾಬರ್ಟ್‌ ಎಗ್ಗರ್ಸ್‌ ನಿರ್ದೇಶನದ ‘ದಿ ನಾರ್ಥ್‌ಮ್ಯಾನ್‌’ ಇಂಗ್ಲಿಷ್‌ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ನಿಕೋಲ್‌ ಕಿಡ್‌ಮ್ಯಾನ್‌, ಅಲೆಕ್ಸಾಂಡರ್‌ ಸ್ಕಾರ್ಸ್‌ಗಾರ್ಡ್‌ ನಟನೆಯ ಚಿತ್ರ 2022ರ ಏಪ್ರಿಲ್‌ 22ರಂದು ತೆರೆಕಾಣಲಿದೆ.

‘ವಿಚ್‌’, ‘ಲೈಟ್‌ಹೌಸ್‌’ ಸಿನಿಮಾ ಖ್ಯಾತಿಯ ರಾಬರ್ಟ್‌ ಎಗ್ಗರ್ಸ್‌ ನಿರ್ದೇಶನದ ‘ದಿ ನಾರ್ಥ್‌ಮ್ಯಾನ್‌’ ಸಿನಿಮಾದ ಟ್ರೈಲರ್‌ ಹೊರಬಿದ್ದಿದೆ. ಉತ್ತರ ಐರ್ಲ್ಯಾಂಡ್‌ನಲ್ಲಿ 2020ರ ಮಾರ್ಚ್‌ನಲ್ಲಿ ಶುರುವಾಗಿದ್ದ ಚಿತ್ರೀಕರಣ ಕೋವಿಡ್‌ನಿಂದಾಗಿ ಸ್ಥಗಿತಗೊಂಡಿತ್ತು. ಆರು ತಿಂಗಳ ನಂತರ ಶೂಟಿಂಗ್‌ಗೆ ಮತ್ತೆ ಚಾಲನೆ ಸಿಕ್ಕಿ ಇದೀಗ ಸಿನಿಮಾದ ಮೊದಲ ಟ್ರೈಲರ್‌ ಬಿಡುಗಡೆಯಾಗಿದೆ. ಚಿತ್ರದ ಅಫಿಷಿಯಲ್‌ ಸಿನಾಪ್ಸಿಸ್‌ ಹೀಗೆ ಹೇಳುತ್ತದೆ – “ರಾಜಕುಮಾರ ತನ್ನ ತಂದೆಯ ಹತ್ಯೆಗೆ ಸೇಡು ತೀರಿಸಿಕೊಳ್ಳುವ ಎಪಿಕ್‌ ರೀವೇಂಜ್‌ ಥ್ರಿಲ್ಲರ್‌ ಇದು. ನಿಕೋಲ್‌ ಕಿಡ್‌ಮ್ಯಾನ್‌, ಅಲೆಕ್ಸಾಂಡರ್‌ ಸ್ಕಾರ್ಸ್‌ಗಾರ್ಡ್‌, ಕ್ಲೇಸ್‌ ಬ್ಯಾಂಗ್‌, ಆನ್ಯಾ ಟೈಲರ್‌ ಜಾಯ್‌, ಈಥನ್‌ ಹಾಕ್‌, ವಿಲಿಯಂ ಡೆಫೊ ತಾರಾಬಳಗದಲ್ಲಿದ್ದಾರೆ”. ಚಿತ್ರದಲ್ಲಿ ಸಾಕಷ್ಟು ಥ್ರಿಲ್‌, ಲಾರ್ಜರ್‌ದ್ಯಾನ್‌ ಲೈಫ್‌ ಫ್ಯಾಮಿಲಿ ಡ್ರಾಮಾ ಇರುವುದು ಟ್ರೈಲರ್‌ನಿಂದ ತಿಳಿದುಬರುತ್ತದೆ. ಆಕರ್ಷಕ ಲ್ಯಾಂಡ್‌ಸ್ಕೇಪ್‌, ಸಿನಿಮಾಟೋಗ್ರಫಿ ಚಿತ್ರದ ಕುರಿತ ನಿರೀಕ್ಷೆ ಹೆಚ್ಚಿಸಿರುವುದಂತೂ ಹೌದು. ಮುಂದಿನ 2022ರ ಏಪ್ರಿಲ್‌ 22ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here