‘Kacchey Limbu’ ಫ್ಯಾಮಿಲಿ – ಸ್ಪೋರ್ಟ್ಸ್‌ – ಡ್ರಾಮಾ ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ರಾಧಿಕಾ ಮದನ್‌, ರಜತ್‌ ಬರ್ಮೇಚಾ, ಆಯುಶ್‌ ಮೆಹ್ರಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮೇ 19ರಿಂದ JioCinemaದಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ.

ಶುಭಂ ಯೋಗಿ ನಿರ್ದೇಶನದ ‘Kacchey Limbu’ ಟ್ರೈಲರ್‌ ಬಿಡುಗಡೆಯಾಗಿದೆ. ಇದೊಂದು ಪ್ಯಾಮಿಲಿ ಡ್ರಾಮಾ. ರಾಧಿಕಾ ಮದನ್ ಮತ್ತು ರಜತ್ ಬರ್ಮೇಚಾ ಅವರು ಕ್ರಿಕೆಟ್ ಲೀಗ್‌ನಲ್ಲಿ ಸ್ಪರ್ಧಿಗಳಾಗಿ ಕಾಣಿಸಿಕೊಂಡಿದ್ದಾರೆ. ಅಂಡರ್ ಆರ್ಮ್ ಪ್ರೀಮಿಯರ್ ಲೀಗ್‌ಗೆ (ಯುಪಿಎಲ್) ಸೇರುವ ಆಯ್ಕೆಯನ್ನು ಆಕಾಶ್ (ರಜತ್) ಪಡೆದಾಗ, ಅವನ ಸಹೋದರಿ ಅದಿತಿ (ರಾಧಿಕಾ) ತನ್ನ ಕನಸುಗಳನ್ನು ತ್ಯಜಿಸುತ್ತಿದ್ದಾಳೆಂದು ಭಾವಿಸಿ, ಸೊಸೈಟಿ ಲೀಗ್‌ನಲ್ಲಿ ಆಡಲು ಹಾಗೂ ತನ್ನದೇ ತಂಡವನ್ನು ಜೋಡಿಸಲು ಆಕಾಶ್ ಅದಿತಿಗೆ ಸವಾಲನ್ನು ಒಡ್ಡುತ್ತಾನೆ.

ಅದಿತಿ ತನ್ನ ಸಹೋದರನ ಮಾಜಿ ಸಹ ಆಟಗಾರನನ್ನು (ಆಯುಷ್ ಮೆಹ್ರಾ) ತಂಡದ ಸದಸ್ಯನನ್ನಾಗಿ ಆಯ್ಕೆ ಮಾಡುತ್ತಾಳೆ. ಅವರ ತಂಡದ ಹೆಸರು ‘ಕಚ್ಚೆ ಲಿಂಬು’ ಎಂದಾಗುತ್ತದೆ. ಒಡಹುಟ್ಟಿದವರು ಪರಸ್ಪರ ವಿರುದ್ಧ ತಂಡಗಳಲ್ಲಿ ಸ್ಪರ್ಧಿಸುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಚಾಲ್ತಿಯಲ್ಲಿದ್ದಾಗಲೇ ಚಲನಚಿತ್ರವು ತೆರೆಕಾಣಲು ಸಿದ್ದವಾಗುತ್ತಿದೆ. ಶುಭಂ ಬರೆದು ನಿರ್ದೇಶಿಸಿದ ಈ ಚಿತ್ರ ಕಳೆದ ವರ್ಷ ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತ್ತು. ಜಿಯೋ ಸ್ಟುಡಿಯೋಸ್ ಮತ್ತು ಮ್ಯಾಂಗೋ ಪೀಪಲ್ ಮೀಡಿಯಾ ನಿರ್ಮಿಸಿರುವ ಸಿನಿಮಾ ಮೇ 19ರಿಂದ JioCinemaದಲ್ಲಿ ಸ್ಟ್ರೀಮ್‌ ಆಗಲಿದೆ.

Previous article‘ಲವ್‌ ಯು ಅಭಿ’ ಟ್ರೈಲರ್‌ | JioCinema ಸಸ್ಪೆನ್ಸ್ ಥ್ರಿಲ್ಲರ್ ವೆಬ್‌ ಸರಣಿ
Next articleಬೆಳ್ಳಿತೆರೆ ಮೇಲೆ ಸಾಕಾರಗೊಂಡ ಪೂಚಂತೇ ಆಶಯ

LEAVE A REPLY

Connect with

Please enter your comment!
Please enter your name here