ಅಮಿತಾಭ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ದೇಶದ ನಂ.1 ನಟ ಮತ್ತು ನಟಿ ಎಂದು ‘Mood of the Nation’ ಸಮೀಕ್ಷೆ ಹೇಳಿದೆ. ಪ್ರಿಯಾಂಕಾ ಚೋಪ್ರಾ, ಕತ್ರಿಕಾ ಕೈಫ್, ಐಶ್ವರ್ಯಾ ರೈ ನಂತರದ ಸ್ಥಾನದಲ್ಲಿದ್ದಾರೆ. ನಟಿ ದೀಪಿಕಾ 2014ರಿಂದಲೂ ಅವರು 10 ವರ್ಷಗಳಿಂದ ನಿರಂತರವಾಗಿ ನಂ.1 ಸ್ಥಾನದಲ್ಲಿದ್ದಾರೆ ಎನ್ನುವುದು ವಿಶೇಷ.
‘Mood of the Nation’ ಸಮೀಕ್ಷೆಯ ಪ್ರಕಾರ ದೀಪಿಕಾ ಪಡುಕೋಣೆ ಅವರನ್ನು ದೇಶದ ನಂ.1 ನಟಿ ಎಂದು ಘೋಷಿಸಲಾಗಿದೆ. 2014ರಿಂದಲೂ ಅವರು 10 ವರ್ಷಗಳಿಂದ ನಿರಂತರವಾಗಿ ನಂ.1 ಸ್ಥಾನದಲ್ಲಿದ್ದಾರೆ. ಅಮಿತಾಬ್ ಬಚ್ಚನ್ ಅವರು 3ನೇ ಬಾರಿಗೆ ದೇಶದ ನಂ.1 ಹೀರೋ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ನಿರಂತರವಾಗಿ ಬದಲಾಗುತ್ತಿರುವ ಮನರಂಜನಾ ಕ್ಷೇತ್ರದಲ್ಲಿ, ಶ್ರೇಷ್ಠ ಪ್ರತಿಭೆ, ಜನಪ್ರಿಯತೆ ಮತ್ತು ಸಾಮಾಜಿಕ ಕೆಲಸಗಳಿಂದಾಗಿ ಕೆಲವರ ಹೆಸರುಗಳು ತಮ್ಮದೇ ಆದ ಛಾಪನ್ನು ಮೂಡಿಸಿವೆ. ಇತ್ತೀಚಿನ ‘MOTN’ ಸಮೀಕ್ಷೆಯಲ್ಲಿ ಮತದಾನ ಮಾಡಿದ ಶೇಕಡಾ 16ರಷ್ಟು ಜನರು ದೀಪಿಕಾ ಪಡುಕೋಣೆ ಅವರನ್ನು ಭಾರತದ ನಂ.1 ನಾಯಕಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಶೇಕಡಾ 14ರಷ್ಟು ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಕತ್ರಿನಾ ಕೈಫ್ 13 ಶೇಕಡಾ ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಅಲಿಯಾ ಭಟ್ 9 ಪ್ರತಿಶತ ಮತ್ತು ಐಶ್ವರ್ಯಾ ಬಚ್ಚನ್ ಶೇ 10ರಷ್ಟು ಮತಗಳನ್ನು ಪಡೆದು ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಅಮಿತಾಬ್ ಬಚ್ಚನ್ ಶೇಕಡಾ 27ರಷ್ಟು, ಶಾರುಖ್ ಖಾನ್ ಶೇಕಡಾ 22, ಅಕ್ಷಯ್ ಕುಮಾರ್ ಶೇಕಡಾ 9, ಸಲ್ಮಾನ್ ಖಾನ್ ಶೇಕಡಾ 8 ಮತ್ತು ಅಲ್ಲು ಅರ್ಜುನ್ ಶೇಕಡಾ 6ರಷ್ಟು ಮತಗಳನ್ನು ಪಡೆದಿದ್ದಾರೆ. ದೀಪಿಕಾ ಪಡುಕೋಣೆ ತಮ್ಮ ಅದ್ಬುತ ನಟನೆಯೊಂದಿಗೆ, ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 2015ರಲ್ಲಿ Mental Health Foundation ಆರಂಭಿಸಿದ್ದಾರೆ. ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಅನುಭವಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೂ ಭರವಸೆ ನೀಡುವುದು ಈ ಸಂಸ್ಥೆಯ ಉದ್ದೇಶ.