ಜನಪ್ರಿಯ MTV Roadies ನೂತನ ಸೀಸನ್‌ ನಿರೂಪಣೆ ಹೊಣೆ ನಟ ಸೋನು ಸೂದ್‌ ಹೆಗಲಿಗೇರಿದೆ. ಸಾಮಾಜಿಕ ಕಳಕಳಿ ಮೂಲಕ ಸದಾ ಸುದ್ದಿಯಲ್ಲಿರುವ ನಟ ತಾವು ನಿರೂಪಿಸಲಿರುವ ಶೋ ಕುರಿತ ವೀಡಿಯೋವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಜನಪ್ರಿಯ MTV Roadies ಶೋನ ಈ ಹಿಂದಿನ ಸೀಸನ್‌ಗಳಲ್ಲಿ ನಿರೂಪಕರಾಗಿ ರಣ್‌ವಿಜಯ್‌ ಸಿಂಗ್‌ ಇದ್ದರು. ಈ ಬಾರಿಯ 18ನೇ ಸೀಸನ್‌ ಅನ್ನು ನಟ ಸೋನು ಸೂದ್‌ ನಿರೂಪಿಸಲಿದ್ದು, ತಮ್ಮ ಈ ಹೊಸ ಜವಾಬ್ದಾರಿಯ ಬಗ್ಗೆ ಅವರು ಎಕ್ಸೈಟ್‌ ಆಗಿದ್ದಾರೆ. ಕೋವಿಡ್‌ ಸಂಕಷ್ಟದ ದಿನಗಳಲ್ಲಿ ಅಸಹಾಯಕರಿಗೆ ಸಹಾಯಹಸ್ತ ಚಾಚಿ ಸುದ್ದಿಯಾಗಿದ್ದ ನಟ ಸೋನು ಸೂದ್‌. ಪಂಜಾಬ್‌ನ ತಮ್ಮೂರು ಮೋಂಗಾದಲ್ಲಿ ಸಮೋಸಾ ತಿನ್ನುತ್ತಾ ನಿರೂಪಣೆಯ ಜವಾಬ್ದಾರಿಯ ಬಗ್ಗೆ ಮಾತನಾಡಿರುವ ವೀಡಿಯೋವನ್ನು ಸೋನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದಾರೆ. “ಶೋ ಕುರಿತಂತೆ ನಾನು ತುಂಬಾ ಎಕ್ಸೈಟ್‌ ಆಗಿದ್ದೇನೆ. ಮಸ್ತಿ, ಖುಷಿ, ಸಾಹಸಗಳ ಸಂಗಮವಾದ ಶೋ ಮೂಲಕ ಭಾರತದ ಬೆಸ್ಟ್‌ ರೋಡೀಸ್‌ ಗುರುತಿಸಲ್ಪಡಲಿದ್ದಾರೆ” ಎಂದಿದ್ದಾರವರು. ಶೋ ಈ ಬಾರಿ ದಕ್ಷಿಣ ಆಫ್ರಿಕಾದಲ್ಲಿ ಚಿತ್ರೀಕರಣಗೊಳ್ಳಲಿದೆ. ಈ ಶೋನ ಜನಪ್ರಿಯ ನಿರೂಪಕ ರಣವಿಜಯ್‌ ಸಿಂಗ್‌ ಅವರು ತಮ್ಮ ಬ್ಯುಸಿ ಶೆಡ್ಯೂಲ್‌ನಿಂದಾಗಿ ಹೊರಗುಳಿದಿದ್ದಾರೆ. ಫೆಬ್ರವರಿ ಎರಡನೇ ವಾರದಲ್ಲಿ ರೋಡೀಸ್‌ ನೂತನ ಸೀಸನ್‌ ಶೂಟಿಂಗ್‌ ಶುರುವಾಗಲಿದ್ದು, ಮಾರ್ಚ್‌ನಲ್ಲಿ MTVಯಲ್ಲಿ ಪ್ರಸಾರವಾಗಲಿದೆ.

LEAVE A REPLY

Connect with

Please enter your comment!
Please enter your name here