ಜ್ಯೂನಿಯರ್‌ NTR ನಟನೆಯ ಬಹುನಿರೀಕ್ಷಿತ ‘ದೇವರ’ ತೆಲುಗು ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಸೈಫ್‌ ಅಲಿ ಖಾನ್‌ ಖಳಪಾತ್ರದಲ್ಲಿದ್ದು, ಜಾಹ್ನವಿ ಕಪೂರ್‌ ಚಿತ್ರದ ನಾಯಕಿ. ಟ್ರೇಲರ್‌ ಕೊನೆಯಲ್ಲಿ ಜ್ಯೂನಿಯರ್‌ NTR ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ಸುಳಿವು ಸಿಗುತ್ತದೆ.

ಬಹುನಿರೀಕ್ಷಿತ ‘ದೇವರ’ ತೆಲುಗು ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದ್ದು, ಇದೊಂದು ಆಕ್ಷನ್‌ – ಪ್ಯಾಕ್ಡ್‌ ಡ್ರಾಮಾ ಎಂದು ಊಹಿಸಬಹುದಾಗಿದೆ. ಅದ್ಧೂರಿ ಮೇಕಿಂಗ್‌ ಮತ್ತು ಸಾಹಸ ಸನ್ನಿವೇಶಗಳು ಕಣ್ಣಿಗೆ ರಾಚುತ್ತವೆ. ಎರಡು ನಿಮಿಷಗಳ ಟ್ರೇಲರ್‌ನಲ್ಲಿ ನಾಯಕ ಜ್ಯೂನಿಯರ್‌ NTR, ಖಳಪಾತ್ರದಲ್ಲಿ ಸೈಫ್‌ ಅಲಿ ಖಾನ್‌, ನಾಯಕಿ ಜಾಹ್ನವಿ ಪಾತ್ರಗಳ ಪರಿಚಯವಿದೆ. ಕೊನೆಯಲ್ಲಿ ಜ್ಯೂನಿಯರ್‌ NTR ದ್ವಿಪಾತ್ರದಲ್ಲಿ ನಟಿಸಿರುವ ಸುಳಿವು ಸಿಗುತ್ತದೆ. ಜ್ಯೂನಿಯರ್‌ NTR ಮತ್ತು ಸೈಫ್‌ ಅಲಿ ಖಾನ್‌ ಜೊತೆಯಲ್ಲಿ ಕುಣಿಯುವ ಸನ್ನಿವೇಶವೊಂದು ಟ್ರೇಲರ್‌ನಲ್ಲಿದೆ. ಇದು ಈ ಎರಡು ಪಾತ್ರಗಳ ಮಧ್ಯೆಯ ಸಂಬಂಧದ ಬಗ್ಗೆ ಕುತೂಹಲ ಮೂಡಿಸಿದರೆ, ನಾಯಕಿ ಜಾಹ್ನವಿ ಕಪೂರ್‌ ಅವರದ್ದು ಮಾತಿನ ಮಲ್ಲಿ ಪಾತ್ರವಾಗಿ ಕಾಣಿಸುತ್ತದೆ. ಕೊರಟಾಲ ಶಿವ ನಿರ್ದೇಶನದ ಸಿನಿಮಾ ಇದೇ ಸೆಪ್ಟೆಂಬರ್‌ 27ರಂದು ತೆರೆಕಾಣುತ್ತಿದೆ. ಯುವಸುಧಾ ಆರ್ಟ್ಸ್‌ ಮತ್ತು NTR ಆರ್ಟ್ಸ್‌ ನಿರ್ಮಾಣದ ಚಿತ್ರವನ್ನು ನಂದಮೂರಿ ಕಲ್ಯಾಣ ರಾಮ್‌ ಪ್ರಸೆಂಟ್‌ ಮಾಡುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here