ಅರುಣ್‌ ಮಾಥೇಶ್ವರನ್‌ ನಿರ್ದೇಶನದ ‘ಕ್ಯಾಪ್ಟನ್‌ ಮಿಲ್ಲರ್‌’ ತಮಿಳು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಸ್ವಾತಂತ್ರ್ಯಪೂರ್ವದ ಕತೆಯಿದು. ಧನುಷ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರದ ವಿಶೇಷ ಪಾತ್ರದಲ್ಲಿ ಶಿವರಾಜಕುಮಾರ್‌ ನಟಿಸಿದ್ದಾರೆ.

ಧನುಷ್ ಮುಖ್ಯಭೂಮಿಕೆಯಲ್ಲಿರುವ ‘ಕ್ಯಾಪ್ಟನ್ ಮಿಲ್ಲರ್’ ತಮಿಳು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗುತ್ತಿರುವ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ಈ ಚಿತ್ರವನ್ನು ಅರುಣ್ ಮಾಥೇಶ್ವರನ್ ನಿರ್ದೇಶಿಸಿದ್ದಾರೆ. ಬ್ರಿಟೀಷ್ ಕಾಲದಲ್ಲಿ ನಡೆಯುವ ಕತೆ ಇದಾಗಿದ್ದು, ತನ್ನ ಗ್ರಾಮವನ್ನು ಕಬಳಿಸಲು ಬರುವ ಬ್ರಿಟೀಷ್‌ ಆಡಳಿತದ ಸೈನಿಕರು ಹಾಗೂ ಅಧಿಕಾರಿಗಳನ್ನು ಸಂಹರಿಸುವ ‘ಡೆವಿಲ್‌’ ಲುಕ್‌ನಲ್ಲಿ ಗನ್‌ ಹಿಡಿದು ರಕ್ತಸಿಕ್ತ ದೃಶ್ಯಗಳಲ್ಲಿ ಧನುಷ್ ಕಾಣಿಸಿಕೊಂಡಿದ್ದಾರೆ. ತಮ್ಮ ಗ್ರಾಮಕ್ಕಾಗಿ ಹೋರಾಡುವ ಜನ ಹಾಗೂ ಅವರ ಅಸಹಾಯಕತೆಯನ್ನು ತೋರಿಸಲಾಗಿದ್ದು, ತಮ್ಮತನವನ್ನು ಉಳಿಸಿಕೊಳ್ಳಲು ಯಾವ ಹಂತಕ್ಕೆ ಬೇಕಾದರೂ ಹೋಗಿ ಹೋರಾಡಬಲ್ಲೆ ಎನ್ನುವ ದಿಟ್ಟ ಜನರ ಅಂಶಗಳನ್ನು ತೋರಿಸಲಾಗಿದೆ.

ಶಿವರಾಜ್‌ ಕುಮಾರ್‌ ಅವರ ಸಣ್ಣ ಝಲಕ್‌ ಸಹ ಟ್ರೇಲರ್‌ನಲ್ಲಿದೆ. ಚಿತ್ರದಲ್ಲಿ ಪ್ರಿಯಾಂಕಾ ಅರುಲ್ ಮೋಹನ್, ಕಿಶನ್, ಜಾನ್ ಕೊಕ್ಕೆನ್ ಮತ್ತು ಎಡ್ವರ್ಡ್ ಸೊನ್ನೆನ್‌ಬ್ಲಿಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜಿ ವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. Sathya Jyothi Films ಬ್ಯಾನರ್‌ ಅಡಿಯಲ್ಲಿ ಸೆಂಧಿಲ್ ತ್ಯಾಗರಾಜನ್ ಮತ್ತು ಅರ್ಜುನ್ ತ್ಯಾಗರಾಜನ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಸಿದ್ಧಾರ್ಥ ನೂನಿ ಛಾಯಾಗ್ರಹಣ ಚಿತ್ರಕ್ಕಿದೆ. ಸಿನಿಮಾ ಇದೇ ಜ.12 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ‌.

LEAVE A REPLY

Connect with

Please enter your comment!
Please enter your name here