ರಮೇಶ್‌ ರಾಜ್‌ ನಿರ್ದೇಶನದಲ್ಲಿ ಧರ್ಮ ಕೀರ್ತಿರಾಜ್‌ ನಟಿಸುತ್ತಿರುವ ನೂತನ ಸಿನಿಮಾಗೆ ಗೋಪಿನಾಥ ಬೆಟ್ಟದಲ್ಲಿ ಮುಹೂರ್ತ ನೆರವೇರಿದೆ. ಈ ಹಿಂದೆ ‘ಗ್ಯಾಂಗ್ ಲೀಡರ್’, ‘ತವರಿನ ಋಣ’ ಸಿನಿಮಾಗಳನ್ನು ನಿರ್ದೇಶಿಸಿದ್ದ ರಮೇಶ್‌ ರಾಜ್‌ ಅವರಿಗಿದು ಮೂರನೇ ಸಿನಿಮಾ. ಪ್ರಿಯಾ ಹೆಗ್ಡೆ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ.

ಧರ್ಮ ಕೀರ್ತಿರಾಜ್‌ ಮತ್ತು ಪ್ರಿಯಾ ಹೆಗ್ಡೆ ಜೋಡಿಯ ನೂತನ ಸಿನಿಮಾಗೆ ಚಿಕ್ಕಬಳ್ಳಾಪುರದ ಗೋಪಿನಾಥ ಬೆಟ್ಟದಲ್ಲಿ ಚಾಲನೆ ಸಿಕ್ಕಿದೆ. ಈ ಹಿಂದೆ ‘ಗ್ಯಾಂಗ್ ಲೀಡರ್’, ‘ತವರಿನ ಋಣ’ ಸಿನಿಮಾಗಳನ್ನು ನಿರ್ದೇಶಿಸಿದ್ದ ರಮೇಶ್‌ ರಾಜ್‌ ಅವರಿಗಿದು ಮೂರನೇ ಸಿನಿಮಾ. ಮುಹೂರ್ತ ಸಮಾರಂಬದಲ್ಲಿ ಮಾಜಿ ಶಾಸಕ ಕೆ ಪಿ ಬಚ್ಚೇಗೌಡ ಆರಂಭ ಫಲಕ ತೋರಿದರೆ ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಕೆ ಎಂ ಮುನೇಗೌಡ ಕ್ಯಾಮೆರಾ ಚಾಲನೆ ಮಾಡಿದರು. ಲಿತನ್ಯ ಗೋಲ್ಡ್ ಲೀಫ್ ಮೀಡಿಯಾ ವೆಂಚರ್ಸ್ ಪ್ರೈ ಲಿ ಹಾಗೂ ಸಾರ್ಥಕ್ ಕ್ರಿಯೇಟರ್ಸ್ ಲಾಂಛನದಲ್ಲಿ ಜಿ ಹೆಚ್ ಜನಾರ್ದನ್ ಹಾಗೂ ಸಿ ಎಲ್ ಹರ್ಷವರ್ಧನ್ ನಿರ್ಮಿಸುತ್ತಿರುವ ಚಿತ್ರಕ್ಕೆ ತಾತ್ಕಾಲಿಕವಾಗಿ ‘ಪ್ರೊಡಕ್ಷನ್ ನಂ 1’ ಎಂದು ನಾಮಕರಣವಾಗಿದೆ. ಈ ಆಕ್ಷನ್‌ – ಡ್ರಾಮಾ ಜಾನರ್‌ ಸಿನಿಮಾಗೆ ರಮೇಶ್‌ ರಾಜ್‌ ಅವರೇ ಕತೆ, ಚಿತ್ರಕಥೆ ರಚಿಸಿದ್ದಾರೆ. ಈಶ್ವರಿ ಸುರೇಶ್ ಛಾಯಾಗ್ರಹಣ, ಶಶಿ ಸಂಕಲನ, ಬಿ ವಿ ರೆಡ್ಡಿ ಸಹ ನಿರ್ದೇಶನ, ಮಂಜುನಾಥ್ ನಿರ್ಮಾಣ ನಿರ್ವಹಣೆ ಚಿತ್ರಕ್ಕಿದೆ. ಮುಂದಿನ ವಾರದಿಂದ ಚಿತ್ರೀಕರಣ ಆರಂಭವಾಗುತ್ತಿದೆ. ಚಿಕ್ಕಬಳ್ಳಾಪುರ, ಬೆಂಗಳೂರು, ಮಡಿಕೇರಿ ಹಾಗೂ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ.

LEAVE A REPLY

Connect with

Please enter your comment!
Please enter your name here