ದಿವಾಕರ್ ಡಿಂಡಿಮ ನಿರ್ಮಿಸಿ, ನಿರ್ದೇಶಿಸುತ್ತಿರುವ ಸಿನಿಮಾ ‘ಜುಗಲ್‌ ಬಂದಿ’. ಈ ಸಿನಿಮಾ ಶುರುವಾಗುವ ಮೊದಲೇ ಸಿನಿಮಾದ ಅಡಿಯೋ ರೈಟ್ಸ್ ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಇದು ಚಿತ್ರಕ್ಕೆ ಸಂದ ಮೊದಲ ಜಯ ಎನ್ನುತ್ತದೆ ಚಿತ್ರತಂಡ.

ಸ್ಟಾರ್ ಹೀರೋಗಳ ಚಿತ್ರಗಳಿಗೆ ಬೇಡಿಕೆ ಸಹಜ. ಆದರೆ ಹೊಸಬರ ಚಿತ್ರಗಳಿಗೂ ಬೇಡಿಕೆ ಹೆಚ್ಚಿರುವುದು ಸ್ಯಾಂಡಲ್‌ವುಡ್‌ನ ಉತ್ತಮ ಬೆಳವಣಿಗೆ ಎನ್ನಬಹುದು. ‘ಜುಗಲ್ ಬಂದಿ’ ಸಿನಿಮಾಗೆ ಈ ಅದೃಷ್ಟ ಒಲಿದಿದೆ. ಚಿತ್ರಕ್ಕೆ ಮುಹೂರ್ತ ನಡೆದು ಚಾಲನೆ ಸಿಕ್ಕಿದೆ. ಯಶ್ ಶೆಟ್ಟಿ, ಸಂತೋಷ್ ಆಶ್ರಯ್‌, ಅಶ್ವಿನ್ ರಾವ್‌ ಪಲ್ಲಕ್ಕಿ, ಅರ್ಚನಾ ಕೊಟ್ಟಿಗೆ, ಮಾನಸಿ ಸುಧೀರ್‌ ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ. ಚಿತ್ರದ ನಿರ್ದೇಶಕ ದಿವಾಕರ್ ಮಾತನಾಡಿ, “ಪ್ರತಿಭೆ ಇದ್ದರೆ ಹೊಸಬರಿಗೂ ಸ್ಯಾಂಡಲ್‌ವುಡ್‌ನಲ್ಲಿ ಖಂಡಿತಾ ಬೇಡಿಕೆ ಇದೆ ಎಂದು ‘ಜುಗಲ್ ಬಂದಿ’ ಸಿನಿಮಾ ಸಾಬೀತು ಮಾಡಿದೆ. ಇದೊಂದು ಥ್ರಿಲ್ಲರ್‌ ಸಬ್ಜೆಕ್ಟ್ ಇರುವ ಚಿತ್ರ. ಈಗಾಗಲೇ ಚಿತ್ರದ ಫಸ್ಟ್‌ ಲುಕ್ ಬಿಡುಗಡೆಯಾಗಿದ್ದು, ಸಿನಿಪ್ರೇಮಿಗಳು ಮೆಚ್ಚಿದ್ದಾರೆ. ಇದೇ ಹುರುಪಿನಲ್ಲಿ ಚಿತ್ರೀಕರಣ ನಡೆಸುತ್ತೇವೆ” ಎಂದಿದ್ದಾರೆ. ನಿರ್ದೇಶಕ ದಿವಾರಕ್ ಸ್ನೇಹಿತರಾದ ಚಿತ್ರಸಾಹಿತಿ ಮಾಸ್ತಿ ಅವರು ಚಿತ್ರದ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿ ಶುಭ ಹಾರೈಸಿದರು. ಪ್ರದ್ಯೋತನ್‌ ಸಂಗೀತ ಸಂಯೋಜನೆ, ಎಸ್‌.ಕೆ.ರಾವ್ ಛಾಯಾಗ್ರಹಣ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here