ಪುನೀತ್‌ ರಾಜಕುಮಾರ್‌ ಅಭಿನಯದ ಬಹುನಿರೀಕ್ಷಿತ ‘ಜೇಮ್ಸ್‌’ ಸಿನಿಮಾದ ‘ಸಲಾಂ ಸೋಲ್ಜರ್‌’ ಲಿರಿಕಲ್‌ ಸಾಂಗ್‌ ಬಿಡುಗಡೆಯಾಗಿದೆ. ನಿರ್ದೇಶಕ ಚೇತನ್‌ ಕುಮಾರ್‌ ರಚಿಸಿರುವ ಈ ಗೀತೆಗೆ ಚರಣ್‌ ರಾಜ್‌ ಸಂಗೀತ ಸಂಯೋಜನೆ ಇದ್ದು, ಸಂಜಿತ್‌ ಹೆಗ್ಡೆ ಮತ್ತು ಚರಣ್‌ ರಾಜ್‌ ಹಾಡಿದ್ದಾರೆ.

ಪುನೀತ್‌ ರಾಜಕುಮಾರ್‌ ಹೀರೋ ಆಗಿ ನಟಿಸಿರುವ ಕೊನೆಯ ಸಿನಿಮಾ ‘ಜೇಮ್ಸ್‌’ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದ್ದು, ಹಲವೆಡೆ ಈಗಾಗಲೇ ಟಿಕೆಟ್‌ ಬುಕಿಂಗ್‌ಗೆ ಚಾಲನೆ ಸಿಕ್ಕಿದೆ. ಇತ್ತೀಚೆಗೆ ರಿಲೀಸ್‌ ಆಗಿದ್ದ ‘ಜೇಮ್ಸ್‌ ಟ್ರೇಡ್‌ಮಾರ್ಕ್‌ ಸಾಂಗ್‌’ ದಾಖಲೆಯ ವೀಕ್ಷಣೆ ಪಡೆದಿದೆ. ಇದೀಗ ಚಿತ್ರದ ‘ಸಲಾಂ ಸೋಲ್ಜರ್‌’ ಸಾಂಗ್‌ ಬಿಡುಗಡೆಯಾಗಿದ್ದು, ಮೇಕಿಂಗ್‌ ಮತ್ತು ಗಾಯನದಿಂದ ಹಾಡು ಗಮನ ಸೆಳೆಯುತ್ತಿದೆ. ಚಿತ್ರದ ನಿರ್ದೇಶಕ ಚೇತನ್‌ ಕುಮಾರ್‌ ರಚನೆಯ ಹಾಡಿಗೆ ಚರಣ್‌ ರಾಜ್‌ ಸಂಗೀತವಿದೆ. ಸಂಜಿತ್‌ ಹೆಗ್ಡೆ ಹಾಡಿದ್ದು, ಸಂಗೀತ ಸಂಯೋಜಕ ಚರಣ್‌ ರಾಜ್‌ ಅವರಿಗೆ ಜೊತೆಯಾಗಿದ್ದಾರೆ. ಪುನೀತ್‌ ಅವರು ಸೈನಿಕನ ಗೆಟಪ್‌ನಲ್ಲಿದ್ದು, ಕೆಲವು ಸ್ಟಂಟ್‌ ದೃಶ್ಯಗಳಿವೆ. ಕಾಶ್ಮೀರದಲ್ಲಿನ ಚಿತ್ರೀಕರಣದ ಕೆಲವು ದೃಶ್ಯಗಳನ್ನು ಸಾಂಗ್‌ನಲ್ಲಿ ಸೇರ್ಪಡೆಗೊಳಿಸಿದ್ದಾರೆ. ಸ್ಯಾಂಡಲ್‌ವುಡ್‌ ಸೇರಿದಂತೆ ಭಾರತದ ಹಲವೆಡೆ ಪುನೀತ್‌ ಸಿನಿಮಾ ಕುರಿತು ಕುತೂಹಲ ಜಾರಿಯಲ್ಲಿದ್ದು, ಮಾರ್ಚ್‌ 17ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here