ಜೀತು ಜೋಸೆಫ್ ನಿರ್ದೇಶನದಲ್ಲಿ ವೆಂಕಟೇಶ್ ನಟಿಸಿರುವ ‘ದೃಶ್ಯಂ 2’ ಸಿನಿಮಾ ನವೆಂಬರ್‌ 25ರಿಂದ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ. ಮೋಹನ್‌ಲಾಲ್ ಅವರ ಮಲಯಾಳಂ ಸರಣಿ ಸಿನಿಮಾದ ರೀಮೇಕ್ ಇದು.

ವೆಂಕಟೇಶ್ ಮತ್ತು ಮೀನಾ ಅಭಿನಯದ ‘ದೃಶ್ಯಂ 2’ ತೆಲುಗು ಸಿನಿಮಾ ನವೆಂಬರ್‌ 25ರಿಂದ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗಲಿದೆ. 2013ರ ‘ದಶ್ಯಂ’ ಸರಣಿಯಿದು. ಮೂಲ ಮಲಯಾಳಂ ಅವತರಣಿಕೆ ‘ದೃಶ್ಯಂ 2’ ಇದೇ ವರ್ಷ ಫೆಬ್ರವರಿ 19ರಂದು ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗಿತ್ತು. ಈ ಚಿತ್ರದ ಯಶಸ್ಸಿನ ನಂತರ ಸೆಟ್ಟೇರಿದ್ದ ತೆಲುಗು ಅವತರಣಿಕೆ ನವೆಂಬರ್ 25ರಂದು ಸ್ಟ್ರೀಮ್ ಆಗಲಿದೆ. ‘ದೃಶ್ಯಂ’ ಚಿತ್ರದ ಕತೆ ಘಟಿಸಿ ಆರು ವರ್ಷಗಳ ನಂತರದ ಕತೆ ಸರಣಿ ಚಿತ್ರದಲ್ಲಿದೆ ಎನ್ನುತ್ತಾರೆ ನಿರ್ದೇಶಕರು. ರಾಮ್‌ ಬಾಬು ಈಗ ಬದಲಾದ ವ್ಯಕ್ತಿ. ಕ್ರಿಮಿನಲ್ ಇನ್ವೆಸ್ಟಿಗೇಷನ್‌ ಆತನ ಕುಟುಂಬದ ನೆಮ್ಮದಿಯನ್ನು ಹಾಳು ಮಾಡುತ್ತದೆ. ಈ ಜಂಜಡದಿಂದ ರಾಮ್ ಬಾಬು ತನ್ನ ಕುಟುಂಬವನ್ನು ಹೇಗೆ ರಕ್ಷಿಸಿಕೊಳ್ಳುತ್ತಾನೆ ಎನ್ನುವ ಕಥಾಹಂದರ ಚಿತ್ರದಲ್ಲಿದೆ. ಮೀನಾ, ನಾದಿಯಾ, ನರೇಶ್, ಕೃತಿಕಾ, ಎಸ್ತರ್ ಅನಿಲ್‌, ಸಂಪತ್ ರಾಜ್‌, ಪೂರ್ಣ ಚಿತ್ರದ ಇತರೆ ತಾರಾಬಳಗದಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here