‘ದಿಯಾ’ ಸಿನಿಮಾ ಮೂಲಕ ಚಿರಪರಿಚಿತರಾದ ದೀಕ್ಷಿತ್‌ ಶೆಟ್ಟಿ ‘ದಸರಾ’ ತೆಲುಗು ಸಿನಿಮಾದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಾನಿ ನಟನೆಯ ಈ ಸಿನಿಮಾದ ಅವಕಾಶ ಅವರ ವೃತ್ತಿ ಬದುಕಿಗೆ ತಿರುವಾಗುವ ಸಾಧ್ಯತೆಗಳಿವೆ. ‘ದಸರಾ’ ಮಾರ್ಚ್‌ 30ರಂದು ತೆರೆಕಾಣುತ್ತಿದೆ.

“ನಟ ನಾನಿ ಅವರ ಪ್ರೊಡಕ್ಷನ್ ಹೌಸ್‌ನಡಿ ನಿರ್ಮಾಣವಾದ ‘ಮೀಟ್ ಕ್ಯೂಟ್’ ವೆಬ್ ಸೀರೀಸ್‌ನಲ್ಲಿ ನಟಿಸಿದ್ದೆ. ನಾನಿ ಅವರು ನನ್ನ ನಟನೆ ಮೆಚ್ಚಿದ್ದರು, ದಸರಾ ಸಿನಿಮಾದಲ್ಲಿ ನಟಿಸೋ ಅವಕಾಶ ಸಿಕ್ಕಿತು” ಎನ್ನುತ್ತಾರೆ ದೀಕ್ಷಿತ್ ಶೆಟ್ಟಿ. ಯಶಸ್ವೀ ‘ದಿಯಾ’ ಕನ್ನಡ ಸಿನಿಮಾ ಮೂಲಕ ಸಿನಿಪ್ರಿಯರಿಗೆ ಪರಿಚಯವಾದ ದೀಕ್ಷಿತ್‌ ಈಗ PAN ಇಂಡಿಯಾ ಚಿತ್ರದಲ್ಲಿ ಹೀರೋ ಸ್ನೇಹಿತನ ಪಾತ್ರ ನಿರ್ವಹಿಸಿದ್ದಾರೆ. “ಚಿತ್ರದಲ್ಲಿ ಸೂರಿ ಎಂಬ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದೇನೆ. ಇಡೀ ಸಿನಿಮಾದುದ್ದಕ್ಕೂ ಪಾತ್ರ ಕ್ಯಾರಿಯಾಗುತ್ತೆ. ಹತ್ತು ತಿಂಗಳು ‘ದಸರಾ’ ಸಿನಿಮಾ ತಂಡದೊಂದಿಗೆ ಕೆಲಸ ಮಾಡಿದ್ದೇನೆ. ಚಿತ್ರ ಅದ್ಭುತ ಅನುಭವ ನೀಡಿದೆ” ಎನ್ನುತ್ತಾರವರು.

‘ದಿಯಾ’ ಚಿತ್ರದಲ್ಲಿ ಸಿಂಪಲ್‌ ಹುಡುಗನಾಗಿದ್ದ ದೀಕ್ಷಿತ್‌ ‘ದಸರಾ’ದಲ್ಲಿ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅವರಿಗೆ ಒಂದು ರೀತಿ ಟ್ರಾನ್ಸ್‌ಫಾರ್ಮೇಷನ್‌. ‘ದಿಯಾ’ ಯಶಸ್ಸು ಅವರಿಗೆ ಹಲವು ಅವಕಾಶಗಳನ್ನು ತಂದುಕೊಟ್ಟಿದೆ. ಒಂದೇ ರೀತಿಯ ಕತೆ, ಪಾತ್ರಗಳಿಗೆ ಸೀಮಿತರಾಗದೆ ಅವರು ಭಿನ್ನ ಪ್ರಯೋಗಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಸದ್ಯ ಅವರ ‘ಕೆಟಿಎಂ’ ಹಾಗೂ ‘ಬ್ಲಿಂಕ್’ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಇದಕ್ಕೂ ಮುನ್ನ ಮಾರ್ಚ್‌ 30ರಂದು ಅವರ ‘ದಸರಾ’ ತೆರೆಕಾಣುತ್ತಿದೆ. ಶ್ರೀಕಾಂತ್ ಒಡೆಲಾ ನಿರ್ದೇಶನದ ಈ ಚಿತ್ರದ ನಾಯಕಿಯಾಗಿ ಕೀರ್ತಿ ಸುರೇಶ್‌ ಅಭಿನಯಿಸಿದ್ದಾರೆ.

LEAVE A REPLY

Connect with

Please enter your comment!
Please enter your name here