ನಾಗಾರ್ಜುನ ಅಭಿನಯದ ಆಕ್ಷನ್‌ – ಥ್ರಿಲ್ಲರ್‌ ಸಿನಿಮಾ ‘The Ghost’ ಟ್ರೈಲರ್‌ ಬಿಡುಗಡೆಯಾಗಿದೆ. ‘Taken’ ಇಂಗ್ಲಿಷ್‌ ಸಿನಿಮಾದ ಸ್ಫೂರ್ತಿಯಿಂದ ತಯಾರಾಗಿರುವ ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ಸೋನಾಲ್‌ ಚೌವ್ಹಾಣ್‌, ಗುಲ್‌ ಪನಾಗ್‌, ಅನಿಖಾ ಸುರೇಂದ್ರನ್‌ ಇದ್ದಾರೆ. ‘The Ghost’ ಅಕ್ಟೋಬರ್‌ 5ರಂದು ತೆರೆಕಾಣಲಿದೆ.

ಪ್ರವೀಣ್‌ ಸತ್ತಾರು ನಿರ್ದೇಶನದ ‘The Ghost’ ತೆಲುಗು ಆಕ್ಷನ್‌ – ಥ್ರಿಲ್ಲರ್‌ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಚಿತ್ರದಲ್ಲಿ ನಾಗಾರ್ಜುನ ಅವರು ‘ವಿಕ್ರಂ’ ಪಾತ್ರ ನಿರ್ವಹಿಸಿದ್ದು, ದುಷ್ಟರಿಂದ ತಾಯಿ – ಮಗಳನ್ನು ರಕ್ಷಿಸುವ ಹೊಣೆಗಾರಿಕೆ ಅವರ ಮೇಲಿದೆ. ಇಂಗ್ಲಿಷ್‌ ಸಿನಿಮಾ ‘Taken’ ಪ್ರೇರಣೆ ಈ ಚಿತ್ರಕ್ಕೆ ಇದ್ದ ಹಾಗಿದೆ. ಅದ್ಧೂರಿ ಮೇಕಿಂಗ್‌ ಮತ್ತು ಸ್ಟೈಲಿಶ್‌ ನಿರೂಪಣೆಯ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಸೋನಾಲ್‌ ಚೌವ್ಹಾಣ್‌, ಗುಲ್‌ ಪನಾಗ್‌, ಅನಿಖಾ ಸುರೇಂದ್ರನ್‌ ನಟಿಸಿದ್ದಾರೆ. ಟ್ರೈಲರ್‌ ಬಿಡುಗಡೆ ಮಾಡಿದ ನಟ ಮಹೇಶ್‌ ಬಾಬು, “Glad to launch the intense & gripping trailer of #TheGhost! Wishing @iamnagarjuna and the entire team all the very best!,” ಎಂದು ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನಟ ನಾಗಾರ್ಜುನ, “Hey @urstrulyMahesh!! I was so happy 29 years ago when your father SuperStar Krishna Garu joined me for the film Varasudu!! Why don’t we complete the circle,” ಎನ್ನುವ ಸಂದೇಶ ಹಾಕಿದ್ದಾರೆ. ‘The Ghost’ ಅಕ್ಟೋಬರ್‌ 5ರಂದು ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here