ಪೂರಿ ಜಗನ್ನಾಥ್ ನಿರ್ದೇಶನದ ‘ಡಬಲ್ ಇಸ್ಮಾರ್ಟ್’ ತೆಲುಗು ಸಿನಿಮಾದ ಮೂರನೇ ಹಾಡು ಬಿಡುಗಡೆಯಾಗಿದೆ. ಶ್ರೀಹರ್ಷ ಇಮಾನಿ ರಚನೆಯ ಈ ಹಾಡಿಗೆ ಮಣಿಶರ್ಮ ಸಂಗೀತ ಸಂಯೋಜಿಸಿದ್ದು, ಧನಂಜಯ್ ಸೀಪಾನ ಮತ್ತು ಸಿಂಧೂಜಾ ಶ್ರೀನಿವಾಸನ್ ದನಿಯಾಗಿದ್ದಾರೆ. ರಾಮ್ ಪೋತಿನೇನಿ ಮತ್ತು ಕಾವ್ಯಾ ಥಾಪರ್ ಅವರ ಮೇಲೆ ಹಾಡು ಪಿಕ್ಚರೈಸ್ ಆಗಿದೆ.
ರಾಮ್ ಪೋತಿನೇನಿ ನಟನೆಯ ‘ಡಬಲ್ ಇಸ್ಮಾರ್ಟ್’ ತೆಲುಗು ಸಿನಿಮಾದ ‘ಕ್ಯಾ ಲಫ್ಡಾ’ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ. ಶ್ರೀಹರ್ಷ ಇಮಾನಿ ರಚನೆಯ ಈ ಹಾಡಿಗೆ ಮಣಿಶರ್ಮ ಸಂಗೀತ ಸಂಯೋಜಿಸಿದ್ದು, ಧನಂಜಯ್ ಸೀಪಾನ ಮತ್ತು ಸಿಂಧೂಜಾ ಶ್ರೀನಿವಾಸನ್ ದನಿಯಾಗಿದ್ದಾರೆ. ರಾಮ್ ಪೋತಿನೇನಿ ಮತ್ತು ಕಾವ್ಯಾ ಥಾಪರ್ ಅವರ ಮೇಲೆ ಹಾಡು ಪಿಕ್ಚರೈಸ್ ಆಗಿದೆ. ರಾಮ್ ಪೋತಿನೇನಿ ಮತ್ತು ಕಾವ್ಯಾ ಥಾಪರ್ ಅವರ ಮೇಲೆ ಈ ಹಾಡು ಪಿಕ್ಚರೈಸ್ ಆಗಿದೆ. ಶೋಭಿ ಮಾಸ್ಟರ್ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ದಕ್ಷಿಣ ಭಾರತ ಸಿನಿಮಾಗಳಲ್ಲಿ ಖಳನಾಗಿ ಮಿಂಚುತ್ತಿರುವ ಬಾಲಿವುಡ್ ನಟ ಸಂಜಯ್ ದತ್ ಈ ಚಿತ್ರದ ಪ್ರಮುಖ ಖಳಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಡಬಲ್ ಇಸ್ಮಾರ್ಟ್ ಸಿನಿಮಾ ಬಿಡುಗಡೆಯಾಗಲಿದೆ. ಸ್ಯಾಮ್ ಕೆ ನಾಯ್ಡು ಮತ್ತು ಗಿಯಾನಿ ಗಿಯಾನ್ನೆಲಿ ಛಾಯಾಗ್ರಹಣ ಚಿತ್ರಕ್ಕಿದೆ.
ಡಬಲ್ ಇಸ್ಮಾರ್ಟ್ ಸಿನಿಮಾವನ್ನು ಪುರಿ ಕನೆಕ್ಟ್ಸ್ ಬ್ಯಾನರ್ ಅಡಿಯಲ್ಲಿ ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ನಿರ್ಮಿಸುತ್ತಿದ್ದಾರೆ. ಇದೇ ಆಗಸ್ಟ್ 15ರಂದು ಸಿನಿಮಾ ತೆರೆಕಾಣಲಿದೆ. ಈಗಾಗಲೇ ಚಿತ್ರದ ಪ್ರೊಮೋಷನ್ ಕೆಲಸಗಳು ಶುರುವಾಗಿವೆ. 2019ರಲ್ಲಿ ‘ಇಸ್ಮಾರ್ಟ್ ಶಂಕರ್’ ಸಿನಿಮಾ ರಿಲೀಸ್ ಆಗಿತ್ತು. ಇದರಲ್ಲಿ ಕನ್ನಡತಿ ನಭಾ ನಟೇಶ್ ಅಭಿನಯಿಸಿದ್ದರು. ಆಗ ಈ ಸಿನಿಮಾ ಯಶಸ್ಸು ಕಂಡಿತ್ತು. ಈ ಸಿನಿಮಾ ಬಂದು 5 ವರ್ಷದ ಬಳಿಕ ಪಾರ್ಟ್ 2 ‘ಡಬಲ್ ಇಸ್ಮಾರ್ಟ್’ ಬರುತ್ತಿದೆ. ಟಾಲಿವುಡ್‌ನ ನಿರೀಕ್ಷಿತ ಚಿತ್ರಗಳಲ್ಲೊಂದು ಎಂದು ಈ ಚಿತ್ರದ ಬಗ್ಗೆ ಅಲ್ಲಿ ಮಾತುಗಳು ಕೇಳಿಬರುತ್ತಿವೆ.