ದಕ್ಷಿಣ ಭಾರತದ ಖ್ಯಾತ ನಾಯಕನಟಿ ಶ್ರುತಿ ಹಾಸನ್‌ ಇಂದು 36ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಬರ್ತ್‌ಡೇ ಅಂಗವಾಗಿ ‘ಸಲಾರ್‌’ ಚಿತ್ರತಂಡ ನಟಿಯ ಫಸ್ಟ್‌ಲುಕ್‌ ಪೋಸ್ಟರ್‌ ರಿಲೀಸ್‌ ಮಾಡಿದೆ.

”Wishing my entertaining heroine, the energy ball on set @shrutzhaasan , a very Happy Birthday! #Salaar.” ಎಂದು ತಮ್ಮ ‘ಸಲಾರ್‌’ ಸಿನಿಮಾದ ಹಿರೋಯಿನ್‌ ಶ್ರುತಿ ಹಾಸನ್‌ರಿಗೆ ಶುಭಾಶಯ ಕೋರಿದ್ದಾರೆ ನಟ ಪ್ರಭಾಸ್‌. ‘ಕೆಜಿಎಫ್‌’ ಖ್ಯಾತಿಯ ಪ್ರಶಾಂತ್‌ ನೀಲ್‌ ನಿರ್ದೇಶನದ ಈ ಚಿತ್ರದೊಂದಿಗೆ ಪ್ರಭಾಸ್‌ ಮತ್ತು ಶ್ರುತಿ ಹಾಸನ್‌ ಮೊದಲ ಬಾರಿಗೆ ತೆರೆಯ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಪಾತ್ರದ ಹೆಸರು ‘ಆದ್ಯಾ’ ಎಂದಿದ್ದು, ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಫಸ್ಟ್‌ಲುಕ್‌ ಗಮನಿಸಿದರೆ ‘ಸಲಾರ್‌’ ಚಿತ್ರದಲ್ಲಿ ನಟಿಗೆ ಸೌಮ್ಯ ಸ್ವಭಾವದ, ಸರಳ ಯುವತಿಯ ಪಾತ್ರವಿದ್ದಂತಿದೆ. ಮತ್ತೊಂದೆಡೆ ಹೀರೋ ಪ್ರಭಾಸ್‌ ಇಂಟೆನ್ಸ್‌ ಲುಕ್‌ನೊಂದಿಗೆ ಆಕ್ಷನ್‌ ಹೀರೋ ಆಗಿ ಕಾಣಸಿಕೊಂಡಿರುವ ಸೂಚನೆ ನೀಡಿದ್ದಾರೆ. ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ನಡಿ ವಿಜಯ್‌ ಕಿರಗಂದೂರು ನಿರ್ಮಿಸಿರುವ ಈ ಸಿನಿಮಾ 2022ರ ಏಪ್ರಿಲ್‌ 14ರಂದು ತೆರೆಕಾಣಲಿದೆ.

Previous articleಟ್ರೈಲರ್‌ | ಪಿಆರ್‌ಕೆ ನಿರ್ಮಾಣದ ‘ಒನ್‌ ಕಟ್‌ ಟೂ ಕಟ್‌’: ಪ್ರೈಮ್‌ನಲ್ಲಿ ಫೆ.3ರಿಂದ
Next article‘ಅಮೃತವರ್ಷಿಣಿ’ ಸಿನಿಮಾಗೆ 25 ವರ್ಷ!; ನಟ ರಮೇಶ್‌ ಅರವಿಂದ್‌ ಅವರೊಂದಿಗೆ ಮಾತು

LEAVE A REPLY

Connect with

Please enter your comment!
Please enter your name here