ವಿಕ್ರಾಂತ್‌ ನಟನೆಯ ಸೈಕಾಲಾಜಿಕಲ್‌ ಆಕ್ಷನ್‌ – ಥ್ರಿಲ್ಲರ್‌ ತೆಲುಗು ಸಿನಿಮಾ ‘ಸ್ಪಾರ್ಕ್‌ ಲೈಫ್‌’ ಟೀಸರ್‌ ಬಿಡುಗಡೆಯಾಗಿದೆ. ಮೆಹ್ರೀನ್‌ ಫೀರ್ಜಾದಾ ಮತ್ತು ರುಕ್ಸಾರ್‌ ಧಿಲ್ಲೋನ್‌ ಚಿತ್ರದ ಇಬ್ಬರು ನಾಯಕಿಯರು. Deaf Frog Productions ನಿರ್ಮಾಣದ ಸಿನಿಮಾ ಸದ್ಯದಲ್ಲೇ ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ತೆರೆಕಾಣಲಿದೆ.

ಧಗಧಗಿಸುವ ಬೆಂಕಿ, ಹೆಣಗಳ ರಾಶಿ, ರಕ್ತಪಾತದಿಂದ ಆರಂಭವಾಗುವ ‘ಸ್ಪಾರ್ಕ್‌ ಲೈಫ್‌’ ಟೀಸರ್‌ನಲ್ಲಿ ನಾಯಕನನ್ನು ಭರ್ಜರಿ ಆಕ್ಷನ್ ಮೂಲಕ ಪರಿಚಯಿಸಲಾಗಿದೆ, ಪ್ರೀತಿ, ಪ್ರೇಮ, ತನಿಖೆ ಸುತ್ತ ಟೀಸರ್ ಸಾಗುತ್ತದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಸೈಕಾಲಜಿಕಲ್ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಸ್ಪಾರ್ಕ್ ಲೈಫ್’ ಸಿನಿಮಾ ಡೆಫ್ ಫ್ರಾಗ್ ಪ್ರೊಡಕ್ಷನ್ಸ್‌ನಡಿ ತಯಾರಾಗಿದೆ. ಚಿತ್ರದ ಹೀರೋ ವಿಕ್ರಾಂತ್‌ ಅವರೇ ಕತೆ, ಚಿತ್ರಕಥೆ ರಚಿಸಿದ್ದಾರೆ. ಮೆಹ್ರೀನ್‌ ಫೀರ್ಜಾದಾ ಮತ್ತು ರುಕ್ಸಾರ್‌ ಧಿಲ್ಲೋನ್‌ ಚಿತ್ರದ ಇಬ್ಬರು ನಾಯಕಿಯರು. ಮಲಯಾಳಂ ನಟ ಗುರು ಸೋಮಸುಂದರಂ, ನಾಸರ್, ಸುಹಾಸಿನಿ ಮಣಿರತ್ನಂ, ವೆನ್ನೆಲ ಕಿಶೋರ್, ಸತ್ಯ, ಶ್ರೀಕಾಂತ್ ಅಯ್ಯಂಗಾರ್, ಅನ್ನಪೂರ್ಣಮ್ಮ, ರಾಜಾ ರವೀಂದ್ರ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಹೃದಯಂ’ ಸಿನಿಮಾ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನವಿರುವ ಸಿನಿಮಾ ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತೆರೆಕಾಣಲಿದೆ.

Previous articleನಾಗಚೈತನ್ಯ ನೂತನ ಸಿನಿಮಾ | ಶ್ರೀಕಾಕುಳಂ ಮೀನುಗಾರರನ್ನು ಭೇಟಿ ಮಾಡಿದ ನಟ
Next articleಫಹಾದ್‌ ಫಾಸಿಲ್‌ ಬರ್ತ್‌ಡೇ | ಪೋಸ್ಟರ್‌ ರಿಲೀಸ್‌ ಮಾಡಿದ ‘ಪುಷ್ಪ2’ ಟೀಮ್‌

LEAVE A REPLY

Connect with

Please enter your comment!
Please enter your name here