ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಜೋಡಿಯ ‘ರಾಧೆ ಶ್ಯಾಮ್‌’ ಸಿನಿಮಾದ ರೊಮ್ಯಾಂಟಿಕ್ ವೀಡಿಯೋ ಸಾಂಗ್‌ ‘ಆಶಿಕಿ ಆ ಗಯೀ’ ಬಿಡುಗಡೆಯಾಗಿದೆ. ರೊಮ್ಯಾಂಟಿಕ್ ಹಾಡಿನ ಕೊನೆಯಲ್ಲಿ ಸಿನಿಮಾದ ಕತೆಯನ್ನು ರಿವೀಲ್ ಮಾಡುವಂತಹ ಕೆಲವು ಸೀನ್‌ಗಳಿವೆ.

ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ‘ರಾಧೆ ಶ್ಯಾಮ್‌’ ಸಿನಿಮಾದ ‘ಆಶಿಕಿ ಆ ಗಯೀ’ ಹಾಡಿನ ಟೀಸರ್ ಮೊನ್ನೆ ಬಿಡುಗಡೆಯಾಗಿತ್ತು. ಇಂದು ಪೂರ್ಣ ವೀಡಿಯೋ ಸಾಂಗ್ ರಿಲೀಸ್ ಆಗಿದ್ದು, ರೊಮ್ಯಾಂಟಿಕ್ ಸೀನ್‌ಗಳು ಹಾಗೂ ಮನೋಹರ ದೃಶ್ಯಾವಳಿಯ ಪಿಕ್ಚರೈಸೇಷನ್‌ನಿಂದಾಗಿ ಸಾಂಗ್‌ ಇಷ್ಟವಾಗುತ್ತದೆ. ಉತ್ತಮ ಛಾಯಾಗ್ರಹಣದಿಂದಾಗಿ ಹಾಡಿಗೆ ತಾಜಾ ಎನಿಸುವ ಗುಣ ಸಿಕ್ಕಿದೆ. “ಪ್ರೀತಿಗಾಗಿ ಪ್ರಾಣ ಕೊಡುವ ವ್ಯಕ್ತಿಯಲ್ಲ ನಾನು, ಫ್ಲರ್ಟ್ ಮಾಡಲು ಇಚ್ಛಿಸುತ್ತೇನೆ” ಎನ್ನುವ ಪ್ರಭಾಸ್ ಪಾತ್ರದ ಸಾಲುಗಳು ಚಿತ್ರದ ಕತೆಯ ಭಾಗ ಎನಿಸುತ್ತವೆ. ಹಾಡಿನಲ್ಲಿ ಪ್ರಭಾಸ್ ಮತ್ತು ಪೂಜಾ ಜೋಡಿಯ ರೊಮ್ಯಾಂಟಿಕ್ ಸೀನ್‌ಗಳಿದ್ದು, ಯೂರೋಪ್‌ನ ಸುಂದರ ಲೊಕೇಲ್‌ಗಳು ಹಾಡಿನ ಅಂದ ಹೆಚ್ಚಿಸಿವೆ. ಮಿಥುನ್ ಈ ಗೀತೆ ರಚಿಸಿ ಸಂಗೀತ ಸಂಯೋಜಿಸಿದ್ದು, ಅರಿಜಿತ್ ಸಿಂಗ್ ಜೊತೆ ಅವರೂ ಹಾಡಿದ್ದಾರೆ. ರಾಧಾಕೃಷ್ಣ ಕುಮಾರ್ ನಿರ್ದೇಶನದ ‘ರಾಧೆ ಶ್ಯಾಮ್‌’ ಚಿತ್ರದೊಂದಿಗೆ ವರ್ಷಗಳ ನಂತರ ಪ್ರಭಾಶ್ ರೊಮ್ಯಾಂಟಿಕ್ ಹೀರೋ ಆಗಿ ತೆರೆಗೆ ಮರಳುತ್ತಿದ್ದಾರೆ. ಸಚಿನ್‌ ಖೇಡೇಕರ್‌, ಪ್ರಿಯದರ್ಶಿ ಪುಲಿಕೊಂಡ, ಭಾಗ್ಯಶ್ರೀ, ಮುರಳಿ ಶರ್ಮ, ಕುನಾಲ್ ರಾಯ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಎಪ್ಪತ್ತರ ದಶಕದ ಕಾಲಘಟ್ಟದ ಹಿನ್ನೆಲೆಯಲ್ಲಿ ಕತೆ ನಿರೂಪಣೆಗೊಳ್ಳಲಿದೆ. 2002ರ ಜನವರಿ 14ರಂದು ಸಕ್ರಾಂತಿಗೆ ಸಿನಿಮಾ ತೆರೆಕಾಣಲಿದೆ.

Previous articleನಟಿ ಸುಧಾರಾಣಿ ಅವರಿಗೆ ಗೌರವ ಡಾಕ್ಟರೇಟ್; ಇನ್‌ಸ್ಟಾದಲ್ಲಿ ಸಂತಸ ಹಂಚಿಕೊಂಡ ತಾರೆ
Next articleಹಂಸಲೇಖ ಸಂವಿಧಾನ ಗೀತೆ; ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವೀಡಿಯೋಗೆ ಅಭಿಮಾನಿಗಳ ಮೆಚ್ಚುಗೆ

LEAVE A REPLY

Connect with

Please enter your comment!
Please enter your name here