IT ಕ್ಷೇತ್ರ, ಅಲ್ಲಿನ ಉದ್ಯೋಗಿಗಳ ಕುರಿತ ಸಿನಿಮಾ ‘ಎಲೆಕ್ಟ್ರಾನಿಕ್ ಸಿಟಿ’. ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಈ ಸಿನಿಮಾ ಪ್ರದರ್ಶನ ಕಂಡಿದೆ. ಇದೇ ನವೆಂಬರ್‌ 24ರಂದು ಸಿನಿಮಾ ತೆರೆಕಾಣಲಿದೆ.

ಆರ್ಯನ್ ಹರ್ಷ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಎಲೆಕ್ಟ್ರಾನಿಕ್ ಸಿಟಿ’’ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. IT ಕ್ಷೇತ್ರ, ಅಲ್ಲಿನ ಉದ್ಯೋಗಿಗಳ ಕುರಿತ ಕಥಾವಸ್ತು ಚಿತ್ರದ್ದು. ಚಿತ್ರವನ್ನು ಸ್ವತಃ IT ಉದ್ಯೋಗಿಯಾದ ಚಿಕ್ಕಣ್ಣ R ನಿರ್ದೇಶಿಸಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಏರಿಯಾದ ಹೆಸರನ್ನು ಕೇಳದವರೇ ಇಲ್ಲ ಎನ್ನಬಹುದು. ಅದರಲ್ಲೂ IT ಕ್ಷೇತ್ರದಲ್ಲಿ ಕೆಲಸ ಮಾಡುವವರು ಎಲ್ಲರಿಗೂ ಏರಿಯಾ ಹೆಚ್ಚು ಪರಿಚಿತವಾಗಿರುತ್ತದೆ. IT ಯುವಕ, ಯುವತಿಯರ ಒತ್ತಡದ ಕೆಲಸ, ಅವರ ಕಷ್ಟ – ಸುಖಗಳೇ ಚಿತ್ರವ ವಸ್ತು.

ಸಿನಿಮಾದಲ್ಲಿ ತ್ರಿಕೋನ ಪ್ರೇಮಕಥೆ ಕೂಡ ಇದೆ. ಹಲವು ಅಂತರಾಷ್ಟ್ರಿಯ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಸಿನಿಮಾ ಪ್ರದರ್ಶನ ಕಂಡು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಆರ್ಯನ್ ಹರ್ಷ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಇವರಿಗೆ ಜೋಡಿಯಾಗಿ ದಿಯಾ ಆಶ್ಲೇಶಾ ಮತ್ತು ರಕ್ಷಿತಾ ಕೆರೆಮನೆ ನಾಯಕಿಯರಾಗಿ ಅಭಿನಯಿಸಿದ್ದಾರೆ. ರಶ್ಮಿ ಶೆಟ್ಟಿ, ಭವ್ಯ ರುತ್ವಿಕ್ ಇತರೆ ಪ್ರಮುಖ ಕಲಾವಿದರು. Bajarangi Productions ಬ್ಯಾನರ್‌ ಅಡಿಯಲ್ಲಿ ಚಿಕ್ಕಣ್ಣ R ಅವರೇ ಸಿನಿಮಾ ನಿರ್ಮಿಸಿದ್ದಾರೆ. ವಿನು ಮನಸು ಸಂಗೀತ ಸಂಯೋಜಿಸಿದ್ದು, ಚಂದ್ರಶೇಖರ್ ಶ್ರೀವಾಸ್ತವ್ ಹಾಡುಗಳನ್ನು ಬರೆದಿದ್ದಾರೆ. ರಾಜ ಶಿವಶಂಕರ್ ಛಾಯಾಗ್ರಹಣ, ಸೌಂದರ್ ರಾಜ್ ಸಂಕಲನ, ಹಂಪಿ ಸುಂದರ್ ಕಲಾ ನಿರ್ದೇಶನ ಚಿತ್ರಕ್ಕಿದೆ. ನವೆಂಬರ್ 24ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here