ಎಸ್ತರ್‌ ನರೋನ್ಹಾ ನಟಿಸಿ, ನಿರ್ದೇಶಿಸಿರುವ ‘ದಿ ವೆಕೆಂಟ್‌ ಹೌಸ್‌’ ಸಿನಿಮಾ ನವೆಂಬರ್‌ 10, 2023ರಂದು ತೆರೆಕಾಣಲಿದೆ. ‘ಇದು ಹಾರರ್‌ ಜಾನರ್‌ ಚಿತ್ರವಲ್ಲ. ಇದೊಂದು ಖಾಲಿ ಮನೆ ಸುತ್ತ ಸಾಗುವ ಕಥೆ. ಈಗಿನ ಯುವ ಜನತೆಗೆ ಕನೆಕ್ಟ್‌ ಆಗುತ್ತೆ’ ಎನ್ನುತ್ತಾರೆ ಎಸ್ತರ್‌.

ಎಸ್ತರ್ ನರೋನ್ಹಾ ಚೊಚ್ಚಲ ನಿರ್ದೇಶನದ ‘ದಿ ವೆಕೆಂಟ್‌ ಹೌಸ್‌’ ಕನ್ನಡ – ಕೊಂಕಣಿ ದ್ವಿಭಾಷಾ ಸಿನಿಮಾ ನವೆಂಬರ್‌ 10ರಂದು ತೆರೆಕಾಣುತ್ತಿದೆ. ನಿರ್ದೇಶನದ ಜೊತೆ ಚಿತ್ರದ ನಾಯಕಿಯಾಗಿಯೂ ಎಸ್ತರ್‌ ನಟಿಸಿದ್ದಾರೆ. ಚಿತ್ರಕ್ಕೆ ಅವರು ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ ಎನ್ನುವುದು ವಿಶೇಷ. ಈ ಕುರಿತು ಮಾತನಾಡುವ ಅವರು, ‘ದಿ ವೆಕೆಂಟ್ ಹೌಸ್ ಹಾರರ್ ಸಿನಿಮಾವಲ್ಲ. ಇದೊಂದು ಖಾಲಿ ಮನೆ ಸುತ್ತ ಸಾಗುವ ಕಥೆ. ಈಗಿನ ಯುವ ಜನತೆಗೆ ಕನೆಕ್ಟ್ ಆಗುವ ಸಿನಿಮಾ. ಪ್ರೀತಿ ಮತ್ತು ಎಮೋಷನ್ ಎರಡನ್ನು ಸೇರಿಸಿ ಹೆಣೆದಿದ್ದೇನೆ. ನಿರ್ದೇಶನ ಮಾಡಿದ್ದು ಖುಷಿ ಅನಿಸಿತು. ನನ್ನ ವಿಷನ್ ಅನ್ನು ಓಪನ್ ಆಗಿ ಹೇಳುವ ಸ್ವಾತಂತ್ರ್ಯ ನನ್ನ ಸಿನಿಮಾದಲ್ಲಿ ಸಿಕ್ಕಿದೆ. ನಾನು ಎಂಟು ವರ್ಷದಿಂದ ಸಿಂಗರ್. ಹೀಗಾಗಿ ಈ ಚಿತ್ರದಲ್ಲಿ ನಾನೇ ಸಂಗೀತ ನಿರ್ದೇಶಕಿಯಾಗಿಯೂ ಜವಾಬ್ದಾರಿ ನಿಭಾಯಿಸಿದ್ದೇನೆ. ಇದು ನೈಜ ಘಟನೆಯಾಧಾರಿತ ಚಿತ್ರವಲ್ಲ ಸಿನಿಮಾದ ಅವಧಿ 1 ಗಂಟೆ 40 ನಿಮಿಷಗಳು. ಎಲ್ಲಿಯೂ ಬೋರ್ ಹೊಡೆಸಲ್ಲ’ ಎಂದಿದ್ದಾರೆ.

ಕನ್ನಡ, ತೆಲುಗು, ತುಳು, ಕೊಂಕಣಿ ಸಿನಿಮಾಗಳ ಮೂಲಕ ಚಿರಪರಿಚಿತರಾಗಿದ್ದಾರೆ ಎಸ್ತರ್‌. ‘ನಾವಿಕ’, ‘ಅತಿರಥ’, ‘ನುಗ್ಗೇಕಾಯಿ’, ‘ಲೋಕಲ್ ಟ್ರೈನ್’, ‘ಲಂಕೆ’ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಮತ್ತು ಕೊಂಕಣಿ ಭಾಷೆಗಳಲ್ಲಿ ಮೂಡಿಬಂದಿರುವ ಚಿತ್ರಕ್ಕೆ ನರೇಂದ್ರ ಗೌಡ ಛಾಯಾಗ್ರಹಣ, ವಿಜಯ್ ರಾಜ್ ಸಂಕಲನವಿದೆ. ಬಹುತೇಕ ಚಿತ್ರೀಕರಣ ಮಂಗಳೂರಿನಲ್ಲಿ ನಡೆದಿದೆ. Janet Noronha Productions ಬ್ಯಾನರ್‌ ಅಡಿಯಲ್ಲಿ ಸಿನಿಮಾ ತಯಾರಾಗಿದೆ. ಮೂಲತಃ ಮಂಗಳೂರಿನವರಾದ ಎಸ್ತರ್‌ ‘ಉಸಿರಿಗಿಂತ ನೀನೇ ಹತ್ತಿರ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ್ದರು. ಬಾಲಿವುಡ್‌ನ ಖ್ಯಾತ ನಟ ಅನುಪಮ್ ಖೇರ್ ನಟನಾ ಶಾಲೆಯಲ್ಲಿ ತರಬೇತಿ ಪಡೆದು ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ‘ದಿ ವೆಕೆಂಟ್‌ ಹೌಸ್‌’ ನವೆಂಬರ್‌ 10, 2023ರಂದು ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here