ಜನಪ್ರಿಯ ಗಾಯಕಿ – ನಿರೂಪಕಿ ಮಂಗ್ಲಿ ‘ಪಾದರಾಯ’ ಚಿತ್ರದೊಂದಿಗೆ ನಾಯಕಿಯಾಗಿ ಹೊಸ ಜರ್ನೀ ಆರಂಭಿಸಿದ್ದಾರೆ. ಚಕ್ರವರ್ತಿ ಚಂದ್ರಚೂಡ್‌ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಪ್ಯಾನ್‌ ಇಂಡಿಯಾ ಚಿತ್ರದ ಹೀರೋ ಆಗಿ ನಾಗಶೇಖರ್‌ ನಟಿಸುತ್ತಿದ್ದಾರೆ.

‘ಕಣ್ಣೇ ಅದಿರಿಂದಿ’ ತೆಲುಗು ಹಾಡಿನೊಂದಿಗೆ ಸೆನ್ಸೇಷನ್‌ ಸೃಷ್ಟಿಸಿದ್ದ ಗಾಯಕಿ ಮಂಗ್ಲಿ ಆನಂತರ ಕನ್ನಡದ ಹಲವು ಗೀತೆಗಳಿಗೆ ದನಿಯಾಗಿದ್ದರು.
ಇದೀಗ ಅವರು ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಅದು ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಎನ್ನುವುದು ವಿಶೇಷ. ಚಕ್ರವರ್ತಿ ಚಂದ್ರಚೂಡ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ PAN ಇಂಡಿಯಾ ಪ್ರಾಜೆಕ್ಟ್ ‘ಪಾದರಾಯ’ ಚಿತ್ರಕ್ಕೆ ಮಂಗ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಗಾಯಕಿ – ನಿರೂಪಕಿಯ ಹೊಸ ಇನ್ನಿಂಗ್ಸ್‌ ಆರಂಭವಾಗುತ್ತಿದೆ. ನಾಗಶೇಖರ್‌ ಹೀರೋ ಆಗಿ ನಟಿಸಿರುವ ಸಿನಿಮಾದ ಟೈಟಲ್‌ ಹನುಮ ಜಯಂತಿಯಂದು ರಿವೀಲ್‌ ಆಗಿತ್ತು.

ಚಕ್ರವರ್ತಿ ಚಂದ್ರಚೂಡ್ ಕತೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಲಿರುವ ಚಿತ್ರಕ್ಕೆ ಪ್ರೀ ಪ್ರೊಡಕ್ಷನ್‌ ಕೆಲಸಗಳು ನಡೆದಿವೆ. ಚಿತ್ರೀಕರಣಕ್ಕೆ ಹೊರಡುವ ಮುನ್ನ ನಾಯಕನಟ ನಾಗಶೇಖರ್ 42 ದಿನಗಳ ಕಟ್ಟುನಿಟ್ಟಿನ ವ್ರತ ಆಚರಣೆ ಮಾಡುತ್ತಿದ್ದಾರೆ. ಅವರು ಅಂಜನಾದ್ರಿ ಬೆಟ್ಟದಲ್ಲಿ ವ್ರತ ಆಚರಣೆಯಲ್ಲಿ ನಿರತರಾಗಿದ್ದಾರೆ. 2013 – 14ರ ಅವಧಿಯಲ್ಲಿ ನಡೆದ ನೈಜ ಘಟನೆ ಆಧರಿಸಿದ ಸಿನಿಮಾ ‘ಪಾದರಾಯ’. ಆರು ರಾಜ್ಯಕ್ಕೆ ಸಂಬಂಧಿಸಿದ ಘಟನೆ ಇದಾಗಿದ್ದು, PAN ಇಂಡಿಯಾ ಕಾನ್ಸೆಪ್ಟ್‌ಗೆ ಬೇಕಾದ ಯೂನಿವರ್ಸಲ್ ಸಬ್ಜೆಕ್ಟ್ ಆಗಿದೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದ್ದು, ಇತರೆ ತಾರಾಬಗಳದ ಬಗ್ಗೆ ಮಾಹಿತಿ ಹೊರಬೀಳಲಿದೆ. ಅಜನೀಶ್ ಲೋಕನಾಥ್ ಸಂಗೀತ, ಆಂಟೋನಿ ಸಂಕಲನ, ಸತ್ಯ ಹೆಗಡೆ ಛಾಯಾಗ್ರಹಣ ಚಿತ್ರಕ್ಕೆ ಇರಲಿದೆ.

LEAVE A REPLY

Connect with

Please enter your comment!
Please enter your name here