ಲೆಜೆಂಡರಿ ಅಮೆರಿಕನ್‌ ಪಾಪ್‌ ಸಿಂಗರ್‌ ಎಲ್ವಿಸ್‌ ಪ್ರಿಸ್ಲೀ ಬಯೋಪಿಕ್‌ ‘ಎಲ್ವಿಸ್‌’ ಇಂಗ್ಲಿಷ್‌ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಬಝ್‌ ಲಹ್ರಮನ್‌ ನಿರ್ದೇಶನದ ಸಿನಿಮಾ ಜೂನ್‌ 23ರಂದು ತೆರೆಕಾಣಲಿದೆ.

ಅಮೇರಿಕಾದ ಜನಪ್ರಿಯ ಪಾಪ್‌ ಸಿಂಗರ್‌ ಎಲ್ವಿಸ್‌ ಪ್ರಿಸ್ಲೀ ಬದುಕನ್ನು ಆಧರಿಸಿದ ‘ಎಲ್ವಿಸ್‌’ ಬಯೋಪಿಕ್‌ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಬಝ್‌ ಲಹ್ರಮನ್‌ ನಿರ್ದೇಶನದ ಸಿನಿಮಾದ ಟ್ರೈಲರ್‌ ಎಲ್ವಿಸ್‌ ಪ್ರಿಸ್ಲೀ ಬದುಕನ್ನು ಹೇಳುತ್ತಲೇ ಅಮೇರಿಕಾದ ಆರ್ಥಿಕ, ಸಾಮಾಜಿಕ, ರಾಜಕೀಯ ಸ್ಥಿತಿಗತಿಗಳಿಗೂ ಕನ್ನಡಿ ಹಿಡಿಯುತ್ತದೆ. ಬಾಲಕ ಎಲ್ವಿಸ್‌ ಪ್ರಿಸ್ಲೀಯ ಪ್ರತಿಭೆ ಗುರುತಿಸುವ ಟಾಮ್‌ ಪಾರ್ಕರ್‌ (ಟಾಮ್‌ ಹ್ಯಾಂಕ್‌) ಆತನನ್ನು ಪ್ರೊಮೋಟ್‌ ಮಾಡುವ ಮಾತುಗಳೊಂದಿಗೆ ಟ್ರೈಲರ್‌ ಶುರುವಾಗುತ್ತದೆ. ಎಲ್ವಿಡ್‌ ಸಿಂಗಿಂಗ್‌ ಜರ್ನೀ ಶುರುವಾಗಿ “King of Rock ‘n’ Roll” ಎಂದು ಕರೆಸಿಕೊಳ್ಳುವವರೆಗೆ ಸಾಗುತ್ತದೆ. ಎಲ್ವಿಸ್‌ ಬೆಳವಣಿಗೆಯ ಹಾದಿಯಲ್ಲೇ ಅಮೇರಿಕದ ಮಾನವ ಹಕ್ಕುಗಳ ಚಳವಳಿ, ರೇಸಿಸಂಗೆ ಸಂಬಂಧಿಸಿದಂತಹ ಹೋರಾಟಗಳು ನಡೆಯುತ್ತವೆ. ದೊಡ್ಡ ಕ್ಯಾನ್ವಾಸ್‌ನಲ್ಲಿ ತಯಾರಾಗಿರುವ ಸೂಚನೆ ನೀಡುವ ಸಿನಿಮಾದ ಭರವಸೆ ಮೂಡಿಸುತ್ತದೆ. ಪ್ರೊಸ್ತೆಟಿಕ್‌ ಮೇಕಪ್‌, ವಿಶಿಷ್ಟ ಮ್ಯಾನರಿಸಂನೊಂದಿಗೆ ನಟ ಟಾಮ್‌ ಹ್ಯಾಂಕ್‌ ಗುರುತು ಸಿಗುವುದಿಲ್ಲ. ವಾರ್ನರ್‌ ಬದ್ರರ್ಸ್‌ ನಿರ್ಮಾಣದ ಸಿನಿಮಾ ಜೂನ್‌ 23ರಂದು ತೆರೆಕಾಣಲಿದೆ.

Previous articleಪ್ರತಿಮನಸ್ಸಿಗೂ ‌ಇಲ್ಲಿ ಅದರದೇ ಆಳ!
Next articleಇರಾನ್ – ಇಸ್ರೇಲ್ ಬೇಹುಗಾರಿಕೆ ಜತೆಗೆ ಸಂಸ್ಕೃತಿಗಳ ಅನಾವರಣ ಮಾಡುವ ‘ತೆಹ್ರಾನ್’

LEAVE A REPLY

Connect with

Please enter your comment!
Please enter your name here