ಖ್ಯಾತ ಹಾಲಿವುಡ್‌ ನಟಿ ಎಮ್ಮಾ ವಾಟ್ಸನ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಭಾರತದ ಚಿಪ್ಕೋ ಚಳವಳಿ ಫೋಟೊ ಶೇರ್‌ ಮಾಡಿ ಪರಿಸರ ಕಾಳಜಿಯ ಮಾತುಗಳನ್ನಾಡಿದ್ದಾರೆ. ನಟಿಯ ಈ ಗೆಸ್ಚರ್‌ಗೆ ಇಲ್ಲಿನವರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಭಾರತದಲ್ಲಿ 70ರ ದಶಕದಲ್ಲಿ ನಡೆದ ಚಿಪ್ಕೋ (ಅಪ್ಪಿಕೋ) ಚಳವಳಿ, ಪರಿಸರಕ್ಕೆ ಸಂಬಂಧಿಸಿದಂತೆ ಬಹುದೊಡ್ಡ ಹೋರಾಟ. ಪರಿಸರಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುವ ಬ್ರಿಟಿಷ್‌ ಮೂಲದ ಹಾಲಿವುಡ್‌ ನಟಿ ಎಮ್ಮಾ ವಾಟ್ಸನ್‌ ಇಂದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಚಳವಳಿಗೆ ಸಂಬಂಧಿಸಿದ ಬ್ಲ್ಯಾಕ್‌ ಅಂಡ್‌ ವೈಟ್‌ ಫೋಟೊವೊಂದನ್ನು ಶೇರ್‌ ಮಾಡಿದ್ದಾರೆ. ಭಾರತೀಯ ಮಹಿಳೆಯರು ಮಾನವ ಸರಪಳಿಯೊಂದಿಗೆ ಬೃಹತ್‌ ಮರವೊಂದನ್ನು ಅಪ್ಪಿರುವ ಫೋಟೊ ಇದು. ಈ ಫೋಟೊ ಶೇರ್‌ ಮಾಡಿರುವ ನಟಿ, “ಎಪ್ಪತ್ತರ ದಶಕದಲ್ಲಿ ಪರಿಸರಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಭಾರತದ ಮಹಿಳೆಯರು ಅಹಿಂಸಾತ್ಮಕವಾದ ಚಿಪ್ಕೋ ಚಳುವಳಿ ಹಮ್ಮಿಕೊಂಡಿದ್ದರು. ಇಲ್ಲಿ ಅವರು ಪರಿಸರ ರಕ್ಷಿಸಲು ಸಾಂಕೇತಿಕವಾಗಿ ಮರಗಳನ್ನು ಅಪ್ಪಿ ನಿಂತಿದ್ದಾರೆ. ಪರಿಸರ ಸಂರಕ್ಷಣೆಗಾಗಿ ನಡೆದ ಈ ಚಳವಳಿಯಲ್ಲಿ ಭಾಗವಹಿಸಿದ ಅವರೆಲ್ಲರ ಕಾಳಜಿಗೆ ನಮನಗಳು” ಎನ್ನುವ ಸಂದೇಶ ಹಾಕಿದ್ದಾರೆ.

ನಟಿ ಎಮ್ಮಾ ವಾಟ್ಸನ್‌ ಅವರು ಹಲವು ವರ್ಷಗಳಿಂದ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದ್ಧಾರೆ. ಆಗಿಂದಾಗ್ಗೆ ಅವರು ತಮ್ಮ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ನಲ್ಲಿ ಪರಿಸರಕ್ಕೆ ಸಂಬಂಧಿಸಿದಂತೆ ಸಂದೇಶಗಳನ್ನು ಪೋಸ್ಟ್‌ ಹಾಕುತ್ತಾರೆ. ಇದೇ ವರ್ಷ ಸ್ಕಾಟ್‌ಲ್ಯಾಂಡ್‌ನ ಗ್ಲಾಸ್ಗೋನಲ್ಲಿ ನಡೆದ ಯುನೈಟೆಡ್‌ ನೇಷನ್ಸ್‌ ಕ್ಲೈಮೇಟ್‌ ಚೇಂಜ್‌ ಕಾನ್ಫರೆನ್ಸ್‌ನಲ್ಲಿ ಅವರು ರಾಯಭಾರಿಯಾಗಿ ಭಾಗವಹಿಸಿದ್ದರು. ಪರಿಸರಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ನಡೆದ ಚಳವಳಿ ಗುರುತಿಸಿ ಪೋಸ್ಟ್‌ ಹಾಕಿರುವ ಎಮ್ಮಾ ಅವರ ಪೋಸ್ಟ್‌ಗೆ ಹಲವು ಭಾರತೀಯರು ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ. “ಚಿಪ್ಕೋ ಚಳವಳಿ ಕುರಿತು ಪೋಸ್ಟ್‌ ಹಾಕಿರುವ ನಿಮಗೆ ಸಮಸ್ತ ಭಾರತೀಯರ ಪರವಾಗಿ ಧನ್ಯವಾದಗಳು” ಎಂದು ಒಂದು ಪೋಸ್ಟ್‌ ಇದೆ. ಮತ್ತೊಬ್ಬರು, “ಚಿಪ್ಕೋ ಚಳವಳಿ ಹೋರಾಟಗಾರ ಸುಂದರ್‌ಲಾಲ್‌ ಬಹುಗುಣ ಅವರು ಇದೇ ವರ್ಷ ಕೋವಿಡ್‌ನಿಂದಾಗಿ ಅಗಲಿದ್ದು ನೋವಿನ ಸಂಗತಿ. 1973ರಲ್ಲಿ ಅಪ್ಪರ್‌ ಅಲಕನಂದಾ ವ್ಯಾಲಿಯ ಗ್ರಾಮವೊಂದರಲ್ಲಿ ಮೊದಲ ಹೋರಾಟ ನಡೆದಿತ್ತು” ಎನ್ನುವ ಕಾಮೆಂಟ್‌ ಹಾಕಿದ್ದಾರೆ.

LEAVE A REPLY

Connect with

Please enter your comment!
Please enter your name here