ಬಾಲಿವುಡ್‌ ಸ್ಟಾರ್ ಹೀರೋ ಶಾರುಖ್‌ ಖಾನ್‌ ಈಗ ಬೇರೆಯದ್ದೇ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ನಿನ್ನೆ ನಡೆದ ಐಷಾರಾಮಿ ಕ್ರ್ಯೂಸ್‌ ಡ್ರಗ್‌ ಪಾರ್ಟಿ ವಿಚಾರದಲ್ಲಿ ಅವರ ಪುತ್ರ ಆರ್ಯನ್‌ ಈಗ ವಿಚಾರಣೆಗೊಳಪಟ್ಟಿದ್ದಾರೆ.

ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಈಗ NCB ವಿಚಾರಣೆ ಎದುರಿಸುತ್ತಿದ್ದಾರೆ. ನಿನ್ನೆ ಮುಂಬಯಿ ಸಮುದ್ರ ತೀರದಲ್ಲಿ ಐಷಾರಾಮಿ ಕ್ರ್ಯೂಸ್‌ ಒಂದರಲ್ಲಿ ಡ್ರಗ್‌ ಪಾರ್ಟಿ ಆಯೋಜನೆಗೊಂಡಿತ್ತು. ಅಲ್ಲಿಗೆ ದಾಳಿಗೆ ನಡೆಸಿದ NCB ಅಧಿಕಾರಿಗಳು ಪಾರ್ಟಿ ಮಾಡುತ್ತಿದ್ದ ಹದಿಮೂರು ಜನರನ್ನು ವಶಕ್ಕೆ ಪಡೆದಿದ್ದರು. ಈ ಪಟ್ಟಿಯಲ್ಲಿ ಶಾರುಖ್ ಪುತ್ರ ಆರ್ಯನ್‌ ಕೂಡ ಇದ್ದಾರೆ. ಆರ್ಯನ್ ಮೊಬೈನ್ ವಶಕ್ಕೆ ಪಡೆದ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

“ಸದ್ಯ ವಿಚಾರಣೆ ನಡೆಯುತ್ತಿದೆ” ಎಂದಿರುವ ಅಧಿಕಾರಿಗಳು ಹೆಚ್ಚೇನೂ ಮಾಹಿತಿ ಬಿಟ್ಟುಕೊಟ್ಟಿಲ್ಲ. ಮೂಲಗಳ ಪ್ರಕಾರ ಶಾರುಖ್ ಪುತ್ರ ನೇರವಾಗಿ ಡ್ರಗ್ ಪಾರ್ಟಿಯಲ್ಲಿ ತೊಡಗಿಸಿಕೊಂಡಿಲ್ಲ ಮತ್ತು ಡ್ರಗ್ ಸೇವನೆ ಮಾಡಿಲ್ಲ ಎನ್ನಲಾಗುತ್ತಿದೆ. ಆದರೆ ಸೂಕ್ತ ಪರೀಕ್ಷೆಗಳು ನಡೆದ ನಂತರವಷ್ಟೇ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಲಿದ್ದಾರೆ. ಪಾರ್ಟಿಯಲ್ಲಿ ತೊಡಗಿದ್ದ ಹತ್ತು ಮಂದಿಯಲ್ಲಿ ಬಾಲಿವುಡ್‌ ನಟ ಅರ್ಬಾಜ್‌ ಸೇಠ್‌ ಹೆಸರೂ ಸೇರಿದೆ.

Previous articleRRRಗೆ ಹೊಸ ಬಿಡುಗಡೆ ದಿನಾಂಕ; ಮತ್ತೆ ರಾಜಮೌಳಿ ರಾಜ್ಯಭಾರ
Next articleಮತ್ತೆ ನಿರ್ದೇಶನಕ್ಕೆ ಐಶ್ವರ್ಯಾ ಧನುಷ್; ಇದು ತಮಿಳು-ತೆಲುಗು ದ್ವಿಭಾಷಾ ಸಿನಿಮಾ

LEAVE A REPLY

Connect withPlease enter your comment!
Please enter your name here