ಪುನೀತ್‌ ರಾಜಕುಮಾರ್‌ ಅವರ ಪಿಆರ್‌ಕೆ ಪ್ರೊಡಕ್ಷನ್ಸ್‌ನಿಂದ ನಿರ್ಮಾಣಗೊಂಡ ಸಿನಿಮಾಗಳಲ್ಲೊಂದು ‘ಫ್ಯಾಮಿಲಿ ಪ್ಯಾಕ್‌’. ಬಹುತಾರಾಗಣದ ಈ ಸಿನಿಮಾ ಫೆಬ್ರವರಿ 17ರಿಂದ ಅಮೆಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

ನಟ ಪುನೀತ್‌ ರಾಜಕುಮಾರ್‌ ಅವರಿಗೆ OTT ಪ್ಲಾಟ್‌ಫಾರ್ಮ್‌ ಬಗ್ಗೆ ಸೂಕ್ತ ಅರಿವಿತ್ತು. ಇದು ಮುಂದಿನ ಪ್ರಭಾವಶಾಲಿ ಮಾಧ್ಯಮ ಎಂದು ಅರಿತಿದ್ದ ಅವರು ತಮ್ಮ ಪಿಆರ್‌ಕೆ ಸಂಸ್ಥೆಯಡಿ ಓಟಿಟಿಗೆ ಕಂಟೆಂಟ್‌ ತಯಾರಿಸಲು ರೂಪುರೇಷೆ ಹಾಕಿದ್ದರು. ಇದರ ಭಾಗವಾಗಿ ಮೂರು ಸಿನಿಮಾಗಳು ಓಟಿಟಿಗೆಂದೇ ಸೆಟ್ಟೇರಿದ್ದವು. ಕೆಲದಿನಗಳ ಹಿಂದಷ್ಟೇ ಅವರ ಸಂಸ್ಥೆಯಿಂದ ನಿರ್ಮಾಣವಾದ ‘ಒನ್‌ ಕಟ್‌ ಟೂ ಕಟ್‌’ ಸಿನಿಮಾ ಸ್ಟ್ರೀಮ್‌ ಆಗಿತ್ತು. ಇದೀಗ ಫೆಬ್ರವರಿ 17ರಿಂದ ಪಿಆರ್‌ಕೆ ನಿರ್ಮಾಣದ ‘ಫ್ಯಾಮಿಲಿ ಪ್ಯಾಕ್‌’ ಸ್ಟ್ರೀಮ್‌ ಆಗಲಿದ್ದು, ಇಂದು ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ.

ಲಿಖಿತ್‌ ಶೆಟ್ಟಿ, ಅಮೃತಾ ಅಯ್ಯಂಗಾರ್‌ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದಾರೆ. ರಂಗಾಯಣ ರಘು, ಅಚ್ಯುತ್‌ ಕುಮಾರ್‌, ಸಿಹಿಕಹಿ ಚಂದ್ರು, ಸಾಧು ಕೋಕಿಲ, ಪದ್ಮಜಾ ರಾವ್‌, ಶರ್ಮಿತಾ ಗೌಡ ಸೇರಿದಂತೆ ದೊಡ್ಡ ತಾರಾಬಳಗವೇ ಇದ್ದು, ಇದೊಂದು ರೊಮ್ಯಾಂಟಿಕ್‌ – ಕಾಮಿಡಿ ಸಿನಿಮಾ ಎನ್ನುವ ಸೂಚನೆ ಸಿಗುತ್ತದೆ. ಲಿಖಿತ್‌ ಶೆಟ್ಟಿ ಸಹನಿರ್ಮಾಣ, ಅರ್ಜುನ್‌ ಕುಮಾರ್‌ ಎಸ್‌. ನಿರ್ದೇಶನ, ಗುರುಕಿರಣ್‌ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಇತ್ತೀಚೆಗೆ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆದ ‘ಒನ್‌ ಕಟ್‌ ಟೂ ಕಟ್‌’ ಚಿತ್ರಕ್ಕೆ ನೆಗೆಟೀವ್‌ ರಿವ್ಯೂವ್ಸ್‌ ಬಂದಿದ್ದವು. ‘ಫ್ಯಾಮಿಲಿ ಪ್ಯಾಕ್‌’ಗೆ ಯಾವ ರೀತಿ ಪ್ರತಿಕ್ರಿಯೆ ಸಿಗಬಹುದು ಎಂದು ನೋಡಬೇಕು.

Previous articleಸಿನಿಮಾ ಮುಗಿದ ಮೇಲೂ ಕಾಡುವುದು ಯಹೂದಿ ಹುಡುಗನ ಅಮಾಯಕ, ದೈನ್ಯ ಕಣ್ಣುಗಳು
Next articleಪುನೀತ್‌ ರಾಜಕುಮಾರ್‌ ‘ಜೇಮ್ಸ್‌’ ಟೀಸರ್‌ ಬಿಡುಗಡೆ; ಮಾರ್ಚ್‌ 17ರಂದು ಸಿನಿಮಾ

LEAVE A REPLY

Connect with

Please enter your comment!
Please enter your name here