2018ರ ಸೀಕ್ವೆಲ್‌ ‘ಸತ್ಯಮೇವ ಜಯತೇ 2’ ನವೆಂಬರ್‌ 25ರಂದು ಥಿಯೇಟರ್‌ಗೆ ಬಂದಿತ್ತು. ಜಾನ್‌ ಅಬ್ರಹಾಂ ತ್ರಿಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಸಿನಿಮಾ ಇಂದಿನಿಂದ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಜಾನ್‌ ಅಬ್ರಹಾಂ ನಟನೆಯ ‘ಸತ್ಯಮೇವ ಜಯತೇ 2’ ಹಿಂದಿ ಸಿನಿಮಾ ಕುರಿತಂತೆ ಪ್ರೈಮ್‌ ವೀಡಿಯೋ ಟ್ವೀಟ್‌ ಮಾಡಿದೆ. “ಭರ್ಜರಿ ಆಕ್ಷನ್‌, ಅಚ್ಚರಿ, ಮನರಂಜನೆಯ ಸಿನಿಮಾ ಈಗ ಪ್ರೈಮ್‌ನಲ್ಲಿ” ಎಂದು ಟ್ವೀಟ್‌ ಮಾಡಲಾಗಿದೆ. ಮಿಲಪ್‌ ಝವೇರಿ ನಿರ್ದೇಶನದ ಸಿನಿಮಾ ನವೆಂಬರ್‌ 25ರಂದು ತೆರೆಕಂಡಿತ್ತು. ಭ್ರಷ್ಟಾಚಾರದ ವಿರುದ್ಧ ಸೆಣಸುವ ಕತೆಯ ಸಿನಿಮಾದಲ್ಲಿ ಜಾನ್‌ ಅಬ್ರಹಾಂ ಮೂರು ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಮ್ಮಿ ಎಂಟರ್‌ಟೇನ್‌ಮೆಂಟ್‌ ಮತ್ತು ಭೂಷಣ್‌ ಕುಮಾರ್‌ ನಿರ್ಮಾಣದ ಚಿತ್ರದಲ್ಲಿ ದಿವ್ಯಾ ಖೋಸ್ಲಾ ಕುಮಾರ್‌ ನಾಯಕಿಯಾಗಿ ನಟಿಸಿದ್ದಾರೆ. ನವೆಂಬರ್‌ ಕೊನೆಯ ವಾರದಲ್ಲಿ ತೆರೆಕಂಡ ಸಿನಿಮಾಗೆ ವಿಶ್ಲೇಷಕರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನಿರೀಕ್ಷಿಸಿದ ಪ್ರತಿಕ್ರಿಯೆ ವ್ಯಕ್ತವಾಗದೆ ಸಿನಿಮಾ 15 ಕೋಟಿ ಗಳಿಕೆ ನಡೆಸಿದ ವರದಿಯಿದೆ. ಅಬ್ರಹಾಂ ಅಭಿನಯದ ‘ಅಟ್ಯಾಕ್‌’ ಸೈಂಟಿಫಿಕ್‌ – ಫಿಕ್ಷನ್‌ ಸಿನಿಮಾ 2022ರ ಜನವರಿಗೆ ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here