ಪಿಆರ್‌ಕೆ ಬ್ಯಾನರ್ ನಿರ್ಮಾಣ, ಅರ್ಜುನ್‌ ಕುಮಾರ್‌ ನಿರ್ದೇಶನದ ‘ಫ್ಯಾಮಿಲಿ ಪ್ಯಾಕ್‌’ ಕನ್ನಡ ಸಿನಿಮಾಗೆ ವೀಕ್ಷಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಫೆಬ್ರವರಿ 16ರಿಂದ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿರುವ ಚಿತ್ರ ನ್ಯಾಷನಲ್‌ ಟ್ರೆಂಡಿಂಗ್‌ನಲ್ಲಿ ಏಳನೇ ಸ್ಥಾನದಲ್ಲಿದೆ.

ಪಿಆರ್​ಕೆ ಬ್ಯಾನರ್​ನಡಿ ತಯಾರಾದ ‘ಫ್ಯಾಮಿಲಿ ಪ್ಯಾಕ್’ ಕನ್ನಡ ಸಿನಿಮಾ ಫೆಬ್ರವರಿ 16ರಿಂದ ಅಮೇಜಾನ್‌ ಪ್ರೈಮ್‌ ಓಟಿಟಿಯಲ್ಲಿ ಸ್ಟ್ರೀಮ್‌ ಆಗುತ್ತಿದ್ದು, ವೀಕ್ಷಕರ ಮೆಚ್ಚುಗೆ ಗಳಿಸಿದೆ. ನ್ಯಾಷನಲ್ ಟ್ರೆಂಡಿಂಗ್‌ನಲ್ಲಿ ಚಿತ್ರ ಏಳನೇ ಸ್ಥಾನದಲ್ಲಿದೆ ಎನ್ನುವುದು ವಿಶೇಷ. ಕನ್ನಡದಲ್ಲಿ ಈವರೆಗೂ ಬೇರೆ ಯಾವ ಸಿನಿಮಾಗಳಿಗೂ ಈ ರೀತಿಯ ಟ್ರೆಂಡಿಂಗ್ ಸಿಕ್ಕಿರಲಿಲ್ಲ ಎನ್ನುವುದು ಚಿತ್ರತಂಡದ ಹೇಳಿಕೆ. ನಿರ್ದೇಶಕ ಅರ್ಜುನ್ ಕುಮಾರ್‌ಗೆ ದಕ್ಷಿಣ ಸಿನಿಮಾ ಇಂಡಸ್ಟ್ರಿಯ ಪ್ರಮುಖರಿಂದ ಮೆಚ್ಚುಗೆ ಸಿಕ್ಕಿದೆ. ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾಗೆ ‘ಬಾಹುಬಲಿ’, ‘RRR’ ಸಿನಿಮಾಗಳ ಜೊತೆ ಗುರುತಿಸಿಕೊಂಡಿರುವ ವಂಶಿ ಕಾಕಾ, “ಮಜವಾದ ಸ್ಕ್ರಿಪ್ಟ್ ಮತ್ತು ಅದನ್ನು ಹೇಳಿರುವ ರೀತಿಯೂ ಅಷ್ಟೇ ಸರಳವಾಗಿದೆ” ಎಂದಿದ್ದಾರೆ. ಸೌತ್ ಸಿನಿಮಾದ ಇನ್‌ಫ್ಲುಯೆನ್ಸರ್‌ ರಮೇಶ್ ಬಾಲಾ ಅವರಿಂದಲೂ ಮೆಚ್ಚುಗೆ ಸಿಕ್ಕಿದೆ. ಅರ್ಜುನ್ ಕುಮಾರ್ ಒಂದೊಳ್ಳೆ ಮನರಂಜನಾತ್ಮಕ ಚಿತ್ರ ನೀಡಿದ್ದಾರೆ ಎಂದಿದ್ದಾರೆ.

ಅಲ್ಲು ಅರ್ಜುನ್ ಒಡೆತನದ ‘aha’ ಓಟಿಟಿ ಮೀಡಿಯಾದ ಪ್ರಣೀತಾ ಅವರಿಂದಲೂ ಶಹಬ್ಬಾಷ್‌ಗಿರಿ ಸಿಕ್ಕಿದೆ. ನಟ ವಿಜಯ್ ದೇವರಕೊಂಡ ಅವರ ಪಿಆರ್​ಒ ಸುರೇಶ್ ಕೊಂಡ, ತೆಲುಗಿನಲ್ಲಿಯೂ ಈ ಸಿನಿಮಾ ಮಾಡುವಂತೆ ಹೇಳಿದ್ದಾರೆ. ತೆಲುಗಿನ ಎರಡು ಚಿತ್ರ ನಿರ್ಮಾಣ ಸಂಸ್ಥೆಗಳು ಅರ್ಜುನ್​ಗೆ ಸಿನಿಮಾ ಅವಕಾಶ ನೀಡಿವೆ. ಈ ಬಗ್ಗೆ ನಿರ್ದೇಶಕರನ್ನು ಕೇಳಿದರೆ, “ಮಾತುಕತೆಗಳು ನಡೆಯುತ್ತಿವೆ. ಆದರೆ, ಸದ್ಯಕ್ಕೆ ಯಾವುದೂ ಅಂತಿಮವಾಗಿಲ್ಲ. ಈಗಲೇ ಅದೆಲ್ಲವನ್ನು ನಾನು ರಿವೀಲ್ ಮಾಡುವುದಿಲ್ಲ. ಸದ್ಯ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಅದೇ ಖುಷಿಯ ವಿಚಾರ” ಎನ್ನುತ್ತಾರವರು.

LEAVE A REPLY

Connect with

Please enter your comment!
Please enter your name here