ಪ್ರಭಾಸ್‌ ಮತ್ತು ಪೂಜಾ ಹೆಗ್ಡೆ ಅಭಿನಯದ ಬಹುನಿರೀಕ್ಷಿತ ‘ರಾಧೆ ಶ್ಯಾಮ್‌’ ಸಿನಿಮಾದ ‘ಈ ರಾಥಲೆ’ ವೀಡಿಯೋ ಸಾಂಗ್‌ ಬಿಡುಗಡೆಯಾಗಿದೆ. ಜಸ್ಟಿನ್‌ ಪ್ರಭಾಕರನ್‌ ಸಂಗೀತ ಸಂಯೋಜನೆಯ ಈ ಹಾಡಿಗೆ ಯುವನ್‌ ಶಂಕರ್‌ ರಾಜಾ ಮತ್ತು ಹರಿಣಿ ಇವತೂರಿ ದನಿಯಾಗಿದ್ದಾರೆ. ಮಾರ್ಚ್‌ 11ರಂದು ಸಿನಿಮಾ ತೆರೆಕಾಣಲಿದೆ.

‘ರಾಧೆ ಶ್ಯಾಮ್‌’ ತೆಲುಗು – ಹಿಂದಿ ದ್ವಿಭಾಷಾ ಸಿನಿಮಾದ ವೀಡಿಯೋ ಸಾಂಗ್‌ ‘ಈ ರಾಥಲೆ’ ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ದೇವರೇ ಜೋಡಿಸಿದ ಪ್ರೇಮಿಗಳಂತೆ ಕಾಣಿಸುತ್ತಾರೆ ಹೀರೋ – ಹಿರೋಯಿನ್‌. ಪರಸ್ಪರರನ್ನು ನೋಡದೆ ಪ್ರೀತಿಯ ಭಾವ ಇಬ್ಬರಲ್ಲೂ ಸೃಜಿಸುವುದು, ಪರಸ್ಪರರು ಸಂಧಿಸದಿದ್ದರೂ ಉಪಸ್ಥಿತಿಯನ್ನು ಫೀಲ್‌ ಮಾಡುವುದು, ಗೋಡೆಯ ಮೇಲಿನ ಚಿತ್ರವನ್ನು ಪೂರ್ಣಗೊಳಿಸುವ ಹಾಡಿನಲ್ಲಿನ ಕ್ರಿಯಾಶೀಲತೆ ಹೊಸತನದಿಂದ ಕೂಡಿದೆ. ಜಸ್ಟಿನ್‌ ಪ್ರಭಾಕರನ್‌ ಸಂಯೋಜನೆಯ ಹಾಡನ್ನು ಯುವನ್‌ ಶಂಕರ್‌ ರಾಜಾ ಮತ್ತು ಹರಿಣಿ ಇವತೂರಿ ಹಾಡಿದ್ದಾರೆ. ಮಂಜು ಮುಸುಕಿದ ಯೂರೋಪಿನ ಸುಂದರ ಲೊಕೇಲ್‌ಗಳಲ್ಲಿ ಚಿತ್ರಿಸಿರುವ ಹಾಡು ಕಣ್ಮನ ಸೆಳೆಯುತ್ತದೆ.

‘ಜಿಲ್‌’ ಸಿನಿಮಾ ಖ್ಯಾತಿಯ ರಾಧಾಕೃಷ್ಣ ಕುಮಾರ್ ನಿರ್ದೇಶನದ ‘ರಾಧೆ ಶ್ಯಾಮ್‌’ ಚಿತ್ರದೊಂದಿಗೆ ವರ್ಷಗಳ ನಂತರ ಪ್ರಭಾಸ್‌ ರೊಮ್ಯಾಂಟಿಕ್ ಹೀರೋ ಆಗಿ ತೆರೆಗೆ ಮರಳುತ್ತಿದ್ದಾರೆ. ಇಲ್ಲಿ ಅವರ ಪಾತ್ರದ ಹೆಸರು ವಿಕ್ರಮಾದಿತ್ಯ. ಕನ್ನಡ ಮೂಲದ ಪೂಜಾ ಹೆಗ್ಡೆ ಚಿತ್ರದ ಹಿರೋಯಿನ್‌. ಸಚಿನ್‌ ಖೇಡೇಕರ್‌, ಪ್ರಿಯದರ್ಶಿ ಪುಲಿಕೊಂಡ, ಭಾಗ್ಯಶ್ರೀ, ಮುರಳಿ ಶರ್ಮ, ಕುನಾಲ್ ರಾಯ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಎಪ್ಪತ್ತರ ದಶಕದ ಯೂರೋಪ್‌ ಬ್ಯಾಕ್‌ಡ್ರಾಮ್‌ನಲ್ಲಿ ನಡೆಯುವ ಪ್ರೇಮಕಥಾನಕ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಎರಡು ವೀಡಿಯೋ ಹಾಡುಗಳು, ಟ್ರೈಲರ್‌ ಅಭಿಮಾನಿಗಳಿಗೆ ಇಷ್ಟವಾಗಿವೆ. ಮಾರ್ಚ್‌ 11ರಂದು ಸಿನಿಮಾ ತೆರೆಕಾಣಲಿದೆ.

Previous articleಅಮೇಜಾನ್‌ ಪ್ರೈಮ್‌ ನ್ಯಾಷನಲ್‌ ಟ್ರೆಂಡಿಂಗ್‌ನ 7ನೇ ಸ್ಥಾನದಲ್ಲಿ ‘ಫ್ಯಾಮಿಲಿ ಪ್ಯಾಕ್‌’
Next articleಸಿನಿಮಾ ಬದುಕಿಗೆ 12 ವರ್ಷ; ಅಭಿಮಾನಿಗಳಿಗೆ ಧನ್ಯವಾದ ಹೇಳಿದ ನಟಿ ಸಮಂತಾ

LEAVE A REPLY

Connect with

Please enter your comment!
Please enter your name here