ಬಲ್ವಿಂದರ್‌ ಸಿಂಗ್‌ ಜಂಜುವಾ ನಿರ್ದೇಶನದ ‘ತೇರಾ ಕ್ಯಾ ಹೋಗಾ ಲವ್ಲಿ’ ಹಿಂದಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಇಲಿಯಾನಾ ಡಿಕ್ರೂಜ್‌ ಮುಖ್ಯಭೂಮಿಕೆಯಲ್ಲಿದ್ದಾರೆ. ಅವರ ಪಾತ್ರದ ಸುತ್ತ ಚಿತ್ರಕಥೆ ಹೆಣೆಯಲಾಗಿದೆ. ರಣದೀಪ್‌ ಹೂಡಾ ನಾಯಕನಟ. ಮಾರ್ಚ್‌ 8ರಂದು ಸಿನಿಮಾ ತೆರೆಕಾಣಲಿದೆ.

ರಣದೀಪ್ ಹೂಡಾ ಮತ್ತು ಇಲಿಯಾನಾ ಡಿಕ್ರೂಜ್ ನಟನೆಯ ‘ತೇರಾ ಕ್ಯಾ ಹೋಗಾ ಲವ್ಲಿʼ ಹಿಂದಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಚಿತ್ರವನ್ನು ಬಲ್ವಿಂದರ್ ಸಿಂಗ್ ಜಂಜುವಾ ನಿರ್ದೇಶಿಸಿದ್ದಾರೆ. ಟ್ರೇಲರ್‌, ಮಧ್ಯಮವರ್ಗದ ಕುಟುಂಬದ ಯುವತಿಯ ಸುತ್ತ ಸುತ್ತುತ್ತದೆ. ವಧು ಅನ್ವೇಷಣೆಗೆ ಕೊಟ್ಟ ಪೋಟೋದಲ್ಲಿ ಬೆಳ್ಳಗೆ ಕಾಣುವಂತೆ ಎಡಿಟ್‌ ಮಾಡಿ ಮ್ಯಾಟ್ರಿಮೋನಿ ಮತ್ತು ವೆಬ್‌ಸೈಟ್‌ಗಳಲ್ಲಿ ಅಪ್ಲೋಡ್‌ ಮಾಡಲಾಗಿರುತ್ತದೆ. ಆದರೆ ವಿವಾಹವಾಗಲು ಆಕೆಯನ್ನು ನೋಡಲು ಬಂದ ಹುಡುಗನ ಮನೆಯವರು ಅವಳನ್ನು ಬೇಡವೆಂದು ತಿರಸ್ಕರಿಸಿ ಹೋಗುತ್ತಿರುತ್ತಾರೆ. ಹಾಗೂ ಮದುವೆಯಾಗಬೇಕಾದರೆ ಹೆಚ್ಚು ವರದಕ್ಷಿಣೆ ನೀಡಬೇಕು ಎನ್ನುವ ಬೇಡಿಕೆಗಳಿಡುತ್ತಿರುತ್ತಾರೆ.

ಕೊನೆಗೂ ಮದುವೆ ಗೊತ್ತಾಗದ ಇಲಿಯಾನಾಗೆ ಮತ್ತು ಅವಳ ಪೋಷಕರಿಗೆ ಈ ಸಂಗತಿ ತಲೆನೋವಾಗಿ ಪರಿಣಮಿಸುತ್ತದೆ. ನಂತರ ರಣ್‌ದೀಪ್‌ ಹೂಡಾ ಪರಿಚಯವಾಗುತ್ತದೆ. ಪೊಲೀಸ್‌ ಅಧಿಕಾರಿಯಾಗಿರುವ ಅವನು ಇಲಿಯಾನಳನ್ನು ಪ್ರೀತಿಸುತ್ತಾನೆ. ಮುಂದೇನಾಗಲಿದೆ ಎಂದು ಸಿನಿಮಾ ಹೇಳಲಿದೆ. ಭಾರತದ ಸಂವಿಧಾನವು ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯ ನಿಷೇಧಿಸಿದೆ. ಇದೊಂದು ಕಾಲ್ಪನಿಕ ಚಲನಚಿತ್ರವಾಗಿದ್ದು, ಚರ್ಮದ ಬಣ್ಣದ ಆಧಾರದ ಮೇಲೆ ಒಬ್ಬ ಯುವತಿಯ ಮದುವೆ, ವರದಕ್ಷಿಣೆ, ಸಮಾಜವು ಅವರನ್ನು ನೋಡುವ ರೀತಿ ಇವೆಲ್ಲವೂ ಚಿತ್ರದಲ್ಲಿದೆ. ಚಿತ್ರ ಮಾರ್ಚ್‌ 8ರಂದು ಬಿಡುಗಡೆಯಾಗಲಿದೆ. ಚಿತ್ರವನ್ನು Sony Pictures International Productions ಮತ್ತು Movie Tunnel Productions ಬ್ಯಾನರ್‌ ನಿರ್ಮಿಸಿವೆ. ಚಿತ್ರಕ್ಕೆ ಅನಿಲ್ ರೋಧನ್, ರೂಪಿಂದರ್ ಚಹಾಲ್ ಮತ್ತು ಬಲ್ವಿಂದರ್ ಸಿಂಗ್ ಜನುಜಾ ಚಿತ್ರಕಥೆ ರಚಿಸಿದ್ದಾರೆ.

https://youtu.be/TXmYkbs3zy0

LEAVE A REPLY

Connect with

Please enter your comment!
Please enter your name here