ನಟಿ, ಮಾಡೆಲ್‌ ಪೂನಂ ಪಾಂಡೆ (32 ವರ್ಷ) ಕ್ಯಾನ್ಸರ್‌ನಿಂದಾಗಿ ಇಂದು (ಫೆಬ್ರವರಿ 2) ಬೆಳಗ್ಗೆ ಅಗಲಿದ್ದಾರೆ. ‘ನಶಾ’ ಹಿಂದಿ ಚಿತ್ರದೊಂದಿಗೆ ಸಿನಿಮಾರಂಗಕ್ಕೆ ಪರಿಚಯವಾಗಿದ್ದ ಅವರು ‘ಲವ್ ಈಸ್ ಪಾಯಿಸನ್’ ಕನ್ನಡ ಚಿತ್ರದ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಬಾಲಿವುಡ್‌ ನಟಿ, ಮಾಡೆಲ್‌ ಪೂನಂ ಪಾಂಡೆ (32 ವರ್ಷ) ಅಗಲಿದ್ದಾರೆ. cervical ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಈ ಕುರಿತು ನಟಿಯ Instagram ಖಾತೆಯಲ್ಲಿ ಅವರ ಮ್ಯಾನೇಜರ್‌ ಕಡೆಯಿಂದ ಅಧಿಕೃತ ಮಾಹಿತಿ ಲಭ್ಯವಾಗಿದೆ. 1991, ಮಾರ್ಚ್‌ 11ರಂದು ಕಾನ್ಪುರದಲ್ಲಿ ಜನಿಸಿದ ಪೂನಂ ಮಾಡೆಲ್ ಆಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ಅವರು Gladrags Manhunt ಮತ್ತು ಮೆಗಾಮಾಡೆಲ್ ಸ್ಪರ್ಧೆಯ ಅಗ್ರ ಒಂಬತ್ತು ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು.

2013ರಲ್ಲಿ ತೆರೆಕಂಡ ‘ನಶಾ’ ಹಿಂದಿ ಚಲನಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ‘ಮಾಲಿನಿ & ಕೋ’ (ತೆಲುಗು) ಮತ್ತು ‘ದಿ ಜರ್ನಿ ಆಫ್ ಕರ್ಮಾ’ (ಹಿಂದಿ) ಅವರು ನಟಿಸಿದ್ದ ಪ್ರಮುಖ ಸಿನಿಮಾಗಳು. ‘ಲವ್ ಈಸ್ ಪಾಯಿಸನ್’ (ಕನ್ನಡ) ಮತ್ತು ‘ಆ ಗಯಾ ಹೀರೋ’ (ಹಿಂದಿ) ಚಲನಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ನಟಿ ಕಂಗನಾ ರನಾವತ್‌ ನಿರೂಪಣೆಯ ‘Lock Upp’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. 2020ರಲ್ಲಿ ತಮ್ಮ ಬಹುಕಾಲದ ಗೆಳೆಯ ಸ್ಯಾಮ್‌ರನ್ನು ವರಿಸಿದ್ದ ಪೂನಂ, ಕೌಟುಂಬಿಕ ದೌರ್ಜನ್ಯದ ಹಿನ್ನೆಲೆಯಲ್ಲಿ ಸ್ಯಾಮ್‌ರಿಂದ ದೂರವಾಗಿದ್ದರು.

https://www.instagram.com/p/C21T9Hcoobz/?utm_source=ig_web_copy_link

LEAVE A REPLY

Connect with

Please enter your comment!
Please enter your name here