ಮೆಲ್ಬೋರ್ನ್‌ ಚಿತ್ರೋತ್ಸವದಲ್ಲಿ (IFFM) ಹಿಂದಿ ಚಿತ್ರನಿರ್ದೇಶಕ, ನಿರ್ಮಾಪಕ ಕರಣ್‌ ಜೋಹರ್‌ ಅವರನ್ನು ಗೌರವಿಸಲಾಗುತ್ತಿದೆ. ಕರಣ್‌ ಅವರು ಸಿನಿಮಾರಂಗ ಪ್ರವೇಶಿಸಿ ಈ ಹೊತ್ತಿಗೆ 25 ವರ್ಷ. ಬೆಳ್ಳಿಹಬ್ಬದ ಈ ಸಂದರ್ಭದಲ್ಲಿ ಅವರ ಸಿನಿಮಾಗಳನ್ನು ನೆನಪು ಮಾಡಿಕೊಳ್ಳುವ ಯೋಜನೆ ಹಾಕಿಕೊಂಡಿದೆ IFFM.

ಹಿಂದಿ ಚಿತ್ರನಿರ್ದೇಶಕ, ನಿರ್ಮಾಪಕ ಕರಣ್‌ ಜೋಹರ್‌ ಅವರು ಸಿನಿಮಾರಂಗ ಪ್ರವೇಶಿಸಿ 25 ವರ್ಷಗಳಾಗಿವೆ. ಈ ಬೆಳ್ಳಿಹಬ್ಬದ ಸಂದರ್ಭದಲ್ಲಿ IFFM ಅವರಿಗೆ ಗೌರವ ಸಲ್ಲಿಸಲು ಉದ್ದೇಶಿಸಿದೆ. ಇದೇ ವರ್ಷ ಆಗಸ್ಟ್ 11ರಿಂದ 20ರವರೆಗೆ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಚಿತ್ರೋತ್ಸವದಲ್ಲಿ ಕರಣ್ ಜೋಹರ್ ಅವರನ್ನು ಸನ್ಮಾನಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಅವರ ಸಿನಿಮಾಗಳನ್ನು ಪ್ರದರ್ಶಿಸುವುದಲ್ಲದೆ ಅವರ ಕೊಡುಗೆಗಳನ್ನು ಮೆಲುಕು ಹಾಕುವ ಯೋಜನೆ ಹಾಕಿಕೊಂಡಿದೆ IFFM. ಜೋಹರ್‌ ಕೇವಲ ಚಿತ್ರನಿರ್ಮಾಪಕರಲ್ಲದೆ, ಯಶಸ್ವಿ ನಿರ್ದೇಶಕರಾಗಿಯೂ ಹಲವು ಉತ್ತಮ ಚಿತ್ರಗಳನ್ನು ನೀಡಿದ್ದಾರೆ. ಭಾರತ ಸಿನಿರಂಗದ ನಿರ್ಮಾಪಕರುಗಳು ಜಾಗತಿಕ ಮನ್ನಣೆ ಪಡೆಯುತ್ತಿದ್ದು ಈ ಪಟ್ಟಿಯಲ್ಲಿ ಕರಣ್ ಜೋಹರ್ ಸಹ ಒಬ್ಬರು.

IIFM ನಿರ್ದೇಶಕ ಮಿಟು ಭೌಮಿಕ್ ಈ ಬಗ್ಗೆ ಮಾತನಾಡಿ, ‘ಕರಣ್ ಜೋಹರ್ ಭಾರತೀಯ ಚಿತ್ರರಂಗದ ಐಕಾನ್ ಆಗಿದ್ದಾರೆ. ಬಾಲಿವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ 25 ವರ್ಷಗಳ ವೃತ್ತಿಜೀವನವನ್ನು ಗೌರವಿಸಲು ನಾವು ಉತ್ಸುಕರಾಗಿದ್ದೇವೆ’ ಎಂದಿದ್ದಾರೆ. ಮೆಲ್ಬೋರ್ನ್‌ ಗೌರವದ ಬಗ್ಗೆ ಪ್ರತಿಕ್ರಿಯಿಸಿರುವ ಕರಣ್‌, ‘ಮೆಲ್ಬೋರ್ನ್‌ನ 14 ನೇ ಭಾರತೀಯ ಚಲನಚಿತ್ರೋತ್ಸವದ ಭಾಗವಾಗಲು ನನಗೆ ಹೆಮ್ಮೆಯಿದೆ. ಚಲನಚಿತ್ರ ನಿರ್ಮಾಪಕನಾಗಿ 25 ವರ್ಷಗಳನ್ನು ಪೂರ್ಣಗೊಳಿಸಿರುವ ಈ ವರ್ಷವು ನನಗೆ ತುಂಬಾ ವಿಶೇಷವಾಗಿದೆ’ ಎಂದಿದ್ದಾರೆ. ಕರಣ್‌ 25 ವರ್ಷಗಳ ವೃತಿಜೀವನ ಪೂರ್ಣಗೊಳಿಸಿರುವ ಹಿನ್ನಲೆಯಲ್ಲಿ ಮನರಂಜನಾ ಉದ್ಯಮಕ್ಕೆ ನೀಡಿದ ಕೊಡುಗೆಗಾಗಿ ಇತ್ತೀಚೆಗೆ UK ಸಂಸತ್ತು ಗೌರವಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

LEAVE A REPLY

Connect with

Please enter your comment!
Please enter your name here